ಮೇಲ್ಜಾತಿ ಬಡವರಿಗೆ 10% ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ

ಸಂವಿಧಾನದಲ್ಲಿ ಹೇಳಿರುವ ಮೀಸಲಾತಿ ತತ್ವಕ್ಕೇ ಈ ಮಸೂದೆ ವಿರೋಧವಾಗಿದೆ. ಜತೆಗೆ ಈ ಹಿಂದೆ ಸುಪ್ರೀಂ ಕೋರ್ಟ್​ ಮೀಸಲಾತಿ ಕುರಿತಾಗಿ ಕೊಟ್ಟ ಆದೇಶಕ್ಕೂ ಮೇಲ್ಜಾತಿ ಬಡವರ ಮೀಸಲಾತಿ ಮಸೂದೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ

news18
Updated:January 10, 2019, 5:14 PM IST
ಮೇಲ್ಜಾತಿ ಬಡವರಿಗೆ 10% ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ
ಸುಪ್ರೀಂ ಕೋರ್ಟ್
news18
Updated: January 10, 2019, 5:14 PM IST
ನವದೆಹಲಿ: ನಿರೀಕ್ಷೆಯಂತೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ 10% ಮೀಸಲಾತಿ ಸಾಂವಿಧಾನಿಕ ಮಸೂದೆ ಅಂಗೀಕಾರವಾಗಿದೆ. ಇದರ ಬೆನ್ನಲ್ಲೇ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಬೆಳವಣಿಗೆಯನ್ನೂ ಸಹ ಈ ಹಿಂದೆಯೇ ನಿರೀಕ್ಷಿಸಲಾಗಿತ್ತು. 1990ರ ದಶಕದಿಂದಲೂ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಸಮುದಾಗಳಿಗೆ ಮೀಸಲಾತಿ ನೀಡುವ ಕುರಿತು ಆಗಾಗ ಚರ್ಚೆ ನಡೆಯುತ್ತಲೇ ಬಂದಿತ್ತು. ಆದರೆ ಅದನ್ನು ಅಂಗೀಕರಿಸಲು ಇದ್ದ ಸಮಸ್ಯೆಯೆಂದರೆ ಸುಪ್ರೀಂ ಕೋರ್ಟ್​ನ ತೀರ್ಪು. ಶೇಕಡ 50ಕ್ಕಿಂತ ಹೆಚ್ಚು ಮೀಸಲಾತಿಯನ್ನು ಹೆಚ್ಚಿಸುವಂತಿಲ್ಲ ಎಂದು ಸುಪ್ರೀಂ ತೀರ್ಪು ನೀಡಿತ್ತು. ಈಗ ಮಸೂದೆ ಮತ್ತೆ ಸುಪ್ರೀಂ ಕೋರ್ಟ್​ ಅಂಗಳಕ್ಕೆ ಬಂದು ನಿಂತಿದೆ.

ಸಂವಿಧಾನದಲ್ಲಿ ಹೇಳಿರುವ ಮೀಸಲಾತಿ ತತ್ವಕ್ಕೇ ಈ ಮಸೂದೆ ವಿರೋಧವಾಗಿದೆ. ಜತೆಗೆ ಈ ಹಿಂದೆ ಸುಪ್ರೀಂ ಕೋರ್ಟ್​ ಮೀಸಲಾತಿ ಕುರಿತಾಗಿ ಕೊಟ್ಟ ಆದೇಶಕ್ಕೂ ಮೇಲ್ಜಾತಿ ಬಡವರ ಮೀಸಲಾತಿ ಮಸೂದೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಮೀಸಲಾತಿ ಕುರಿತಂತೆ 1992ರಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಮೀಸಲಾತಿಗೆ ಆರ್ಥಿಕತೆ ಮಾನದಂಡವಲ್ಲ. ಆರ್ಥಿಕ ಮೀಸಲಾತಿಯನ್ನು ಕೇವಲ ಸಾಮಾನ್ಯ ವರ್ಗಕ್ಕೆ ಮಾತ್ರ ಮೀಸಲಾಗಿಡುತ್ತಿರುವುದು ಕೂಡಾ ಈ ಹಿಂದೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕಿರಬಹುದು, ಆದರೆ ಸರಿಯಾದ ಚರ್ಚೆಯೇ ಆಗದೆ ಮಸೂದೆ ಪಾಸ್​ ಮಾಡಲಾಗಿದೆ, ಹೀಗಿರುವಾಗ ಇದೆಷ್ಟು ಸಂವಿಧಾನಾತ್ಮಕ? ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಇದನ್ನೂ ಓದಿ: 1992ರಲ್ಲಿ ಪಿವಿಎನ್ ರಾವ್​ಗೆ ಅಡ್ಡಗಾಲಾಗಿದ್ದ ಇಂದ್ರಾ ಸಾಹನಿಯಿಂದ ಈಗ ಮೋದಿಗೆ ತಡೆ?

ಕಾಂಗ್ರೆಸ್, ಎಸ್​ಪಿ, ಆರ್‌ಜೆಡಿ ಸೇರಿದಂತೆ ಹಲವು ವಿಪಕ್ಷಗಳು ಈ ಮಸೂದೆಯನ್ನು ಸಂಸದೀಯ ಸಂಸದೀಯ ಸಮಿತಿಯ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದವು. ಆದರೆ, ಯಾವುದೇ ಪರಿಷ್ಕರಣೆ ಇಲ್ಲದೆ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ.

ಒಟ್ಟಿನಲ್ಲಿ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಪರೀಕ್ಷೆ ಪಾಸಾದರೂ ಸುಪ್ರೀಂ ಕೋರ್ಟ್​ ಅಂಗಳದಲ್ಲಿ ಮತ್ತೊಂದು ಪರೀಕ್ಷೆ ಎದುರಿಸಬೇಕಿದೆ.
Loading...

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ