ಕಳೆದ ವರ್ಷ ದೇಶದಲ್ಲಿ ವಾಯು ಮಾಲಿನ್ಯದಿಂದ ಸತ್ತವರ ಸಂಖ್ಯೆಯೆಷ್ಟು ಗೊತ್ತಾ?!

ಆರೋಗ್ಯಕ್ಕೆ ಸಂಬಂಧಿಸಿದ ನಿಯತಕಾಲಿಕೆ ನಡೆಸಿರುವ ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ ಬಯಲಾಗಿದ್ದು, ದೆಹಲಿಯ ವಾಯು ಮಾಲಿನ್ಯ ಹೆಚ್ಚಳದಿಂದ ರಾಷ್ಟ್ರ ರಾಜಧಾನಿಯೊಂದರಲ್ಲೇ ಕಳೆದ ವರ್ಷ 12,322 ಜನರು ಸಾವನ್ನಪ್ಪಿದ್ದಾರೆ.

sushma chakre | news18
Updated:December 7, 2018, 1:22 PM IST
ಕಳೆದ ವರ್ಷ ದೇಶದಲ್ಲಿ ವಾಯು ಮಾಲಿನ್ಯದಿಂದ ಸತ್ತವರ ಸಂಖ್ಯೆಯೆಷ್ಟು ಗೊತ್ತಾ?!
ಸಾಂದರ್ಭಿಕ ಚಿತ್ರ
sushma chakre | news18
Updated: December 7, 2018, 1:22 PM IST
ನವದೆಹಲಿ (ಡಿ. 7): ದೇಶದಲ್ಲಿ ವಾಹನಗಳು, ಕೈಗಾರಿಕೆಗಳ ಸಂಖ್ಯೆ ಹೆಚ್ಚಾದಂತೆ ವಾಯು ಮಾಲಿನ್ಯವೂ ಗಣನೀಯವಾಗಿ ಹೆಚ್ಚುತ್ತಿದೆ. ದೇಶದ ರಾಜಧಾನಿ ಸೇರಿದಂತೆ ಕೆಲ ಪ್ರಮುಖ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಮಿತಿಮೀರಿದೆ. ಉಸಿರಾಡುವ ಗಾಳಿಯೇ ಕಲುಷಿತಗೊಂಡಿರುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಈ ವಾಯು ಮಾಲಿನ್ಯದ ಕಾರಣದಿಂದ ಒಂದು ವರ್ಷದಲ್ಲಿ ಸಾವನ್ನಪ್ಪಿರುವವರ ಸಂಖ್ಯೆಯನ್ನು ಕೇಳಿದರೆ ಬೆಚ್ಚಿಬೀಳುತ್ತೀರಿ.

ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು ಸರ್ಕಾರ ಸಾಕಷ್ಟು ಪ್ರಯತ್ನ ಪಡುತ್ತಿದೆ. ಆದರೆ, ಅದರಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ದಿನದಿಂದ ದಿನಕ್ಕೆ ನಗರದತ್ತ ವಲಸೆ ಬರುತ್ತಿರುವ ಜನ, ಕೈಗಾರಿಕಾ ಕಟ್ಟಡಗಳ ಹೆಚ್ಚಳದಿಂದ ಹೊಗೆಯ ಪ್ರಮಾಣವೂ ಹೆಚ್ಚುತ್ತಿದೆ. ಹೀಗಾಗಿ, ವಾಯು ಮಾಲಿನ್ಯದಿಂದ 2017ರಲ್ಲಿ ನಮ್ಮ ದೇಶದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 12 ಲಕ್ಷಕ್ಕೂ ಅಧಿಕ ಎಂಬ ಆತಂಕಕಾರಿ ಸಂಗತಿ ಹೊರಬಿದ್ದಿದೆ. ಆರೋಗ್ಯಕ್ಕೆ ಸಂಬಂಧಿಸಿದ ಮ್ಯಾಗಜಿನ್​ ನಡೆಸಿದ್ದ ಸಮೀಕ್ಷೆಯಲ್ಲಿ ಈ ವಿಷಯ ಬಯಲಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ಕೇಜ್ರಿವಾಲ್​ ಸರ್ಕಾರಕ್ಕೆ 25 ಕೋಟಿ ರೂ. ದಂಡ!

ಕಳೆದ ವರ್ಷ 70 ವರ್ಷದೊಳಗಿನ ಶೇ. 51ರಷ್ಟು ಜನ ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಶೇ 12.5ರಷ್ಟು ಸಾವು ವಾಯು ಮಾಲಿನ್ಯದಿಂದಲೇ ಸಂಭವಿಸಿದೆ. ಒಟ್ಟಾರೆ ಕಳೆದ ವರ್ಷ 6,70,000 ಜನರು ವಾಯು ಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಅಡುಗೆ ಅನಿಲ ಸೇರಿದಂತೆ ಮನೆಗೆ ಸಂಬಂಧಿಸಿದ ಹೊಗೆಯ ಮಾಲಿನ್ಯದಿಂದ 4,80,000 ಜನರು ಸಾವನ್ನಪ್ಪಿದ್ದಾರೆ. ದೆಹಲಿಯೊಂದರಲ್ಲೇ ಕಳೆದ ವರ್ಷ ಮಾಲಿನ್ಯದಿಂದಾಗಿ 12,322 ಜನ ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ದೆಹಲಿಯ ರೀತಿಯಲ್ಲೇ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕೂಡ ತೀವ್ರ ರೀತಿಯ ವಾಯು ಮಾಲಿನ್ಯದ ಸಮಸ್ಯೆ ಎದುರಾಗಿದೆ. ಒಂದುವೇಳೆ ವಾತಾವರಣದ ಗಾಳಿ ಪರಿಶುದ್ಧವಾಗಿದ್ದರೆ ಮನುಷ್ಯ ಇನ್ನೂ 1ರಿಂದ 2 ವರ್ಷ ಹೆಚ್ಚು ಬದುಕುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಮಿತಿಮೀರಿದ ವಾಯು ಮಾಲಿನ್ಯ; ಖಾಸಗಿ ವಾಹನಗಳ ನಿರ್ಬಂಧಕ್ಕೆ ಯೋಚನೆ

Loading...


First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ