ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಮತ್ತು ಖಾಸಗಿ ಸಂಸ್ಥೆ ವಿದ್ಯಾರ್ಥಿಗಳಿಗೆ ಶೇಕಡಾ 10 ಮೀಸಲಾತಿ - ಪ್ರಕಾಶ್ ಜಾವ್ಡೇಕರ್​

Harshith AS | news18
Updated:January 16, 2019, 10:35 AM IST
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಮತ್ತು ಖಾಸಗಿ ಸಂಸ್ಥೆ ವಿದ್ಯಾರ್ಥಿಗಳಿಗೆ ಶೇಕಡಾ 10 ಮೀಸಲಾತಿ - ಪ್ರಕಾಶ್ ಜಾವ್ಡೇಕರ್​
  • News18
  • Last Updated: January 16, 2019, 10:35 AM IST
  • Share this:
ನವ ದೆಹಲಿ (ಜ.16): ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ವಿದ್ಯಾರ್ಥಿಗಳಿಗೆ ಶೇಕಡಾ 10% ಮೀಸಲಾತಿ ಈ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್​ ಜಾವ್ಡೇಕರ್​ ಹೇಳಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೆ.10 ಮೀಸಲಾತಿ ನೀಡುವ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಜಾವ್ಡೇಕರ್​ ಅವರು ಈ ಹೇಳಿಕೆ ನೀಡಿದ್ದಾರೆ. ‘’ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ವಿದ್ಯಾರ್ಥಿಗಳಿಗೆ ಶೇಕಡಾ 10%  ಮೀಸಲಾತಿಯನ್ನು ನೀಡುತ್ತಿದ್ದೇವೆ.  2019ರ ಶೈಕ್ಷಣಿಕ ವರ್ಷದಿಂದಲೇ ಇದು ಅನ್ವಯವಾಗಲಿದೆ. ದೇಶದಲ್ಲಿ 900 ವಿಶ್ವ ವಿದ್ಯಾಲಯಗಳು ಮತ್ತು 40,000 ಕಾಲೇಜುಗಳಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ’’ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕೀನ್ಯಾದಲ್ಲಿ ಗುಂಡಿನ ಮೊರೆತ; ಉಗ್ರರ ದಾಳಿಗೆ 15ಕ್ಕೂ ಹೆಚ್ಚು ಮಂದಿ ಬಲಿ

ಮೀಸಲಾತಿ ವಿಚಾರ ಕುರಿತಂತೆ  ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ)  ಸದಸ್ಯರು ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಜೊತೆಗೂಡಿ ಬುಧವಾರದಂದು ಚರ್ಚೆ ನಡೆಸಲಾಗಿದೆ. ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಮೀಸಲಾತಿ ಪ್ರಕ್ರಿಯೆಯನ್ನು ಅಳವಡಿಸಲು ತಿಳಿಸಲಾಗಿದೆ.

8 ಲಕ್ಷಕ್ಕಿಂತ ಕಡಿಮೆ ಆದಾಯವಿರುವ , 5 ಎಕ್ರೆಗಿಂತ ಕಡಿಮೆ ಆಸ್ತಿ ಹೊಂದಿದ ಅಥವಾ  1,000  ​ ಚದರ ಅಡಿ​ಗಿಂತ ಕಡಿಮೆ ಜಾಗದಲ್ಲಿ ನಿವೇಶನವಿರುವ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾತಿ ಅನ್ವಯಿಸುತ್ತದೆ.

 

First published:January 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ