ನವದೆಹಲಿ(ಡಿಸೆಂಬರ್. 18): ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರ ಪಾಲಿಗೆ ಮರಣ ಶಾಸನವಾಗಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ದೇಶದ 10 ಹಿರಿಯ ಅರ್ಥಶಾಸ್ತ್ರಜ್ಞರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರವನ್ನು ಬರೆದಿದ್ದಾರೆ. ಹೈದರಾಬಾದ್ ವಿವಿಯ ನಿವೃತ್ತ ಪ್ರೊ. ಡಿ. ನರಸಿಂಹ ರೆಡ್ಡಿ, ನವದೆಹಲಿಯ ಸಾಮಾಜಿಕ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರೊ. ಕಮಲ್ ನಯನ್ ಕಬ್ರಾ, ತಿರುವನಂತಪುರಂನ ಅಭಿವೃದ್ಧಿ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಮತ್ತು ಕೇರಳ ರಾಜ್ಯ ಯೋಜನಾ ಮಂಡಳಿಯ ಸದಸ್ಯರಾದ ಪ್ರೊ. ಕೆ.ಎನ್. ಹರಿಲಾಲ್, ರೋಹ್ಟಕ್‌ನ ಎಂ.ಡಿ. ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಪ್ರೊ. ರಜಿಂದರ್ ಚೌಧರಿ, ಚಂಡೀಗಢದ ಸಿಆರ್‌ಆರ್‌ಐಡಿಯ ಪ್ರೊ. ಸುರಿಂದರ್ ಕುಮಾರ್, ನವದೆಹಲಿಯ ಸಾಮಾಜಿಕ ವಿಜ್ಞಾನ ಸಂಸ್ಥೆಯ ಮಾಲ್ಕಮ್ ಎಸ್. ಆದಿಶೇಶಿಯ ಚೇರ್ ಪ್ರೊಫೆಸರ್ ಪ್ರೊ. ಅರುಣ್ ಕುಮಾರ್.
ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಚಂಡೀಗಢದ ಸಿಆರ್ ಆರ್ ಐಡಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ ಪ್ರೊ. ರಂಜಿತ್ ಸಿಂಗ್ ಘುಮನ್, ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ನ ನಬಾರ್ಡ್ ಚೇರ್ ಪ್ರೊಫೆಸರ್ ಪ್ರೊ. ಆರ್. ರಾಮಕುಮಾರ್, ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎಕನಾಮಿಕ್ ಸ್ಟಡೀಸ್ ಅಂಡ್ ಪ್ಲಾನಿಂಗ್ (CESP) ಯಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ವಿಕಾಸ್ ರಾವಲ್ ಮತ್ತು ಹಿಮಾಂಶು ಅವರುಗಳು ಜಂಟಿಯಾಗಿ ಪತ್ರವನ್ನು ಬರೆದಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್latte ಅವರಿಗೆ ಪತ್ರವನ್ನು ಬರೆದಿರುವ ಅರ್ಥಶಾಸ್ತ್ರಜ್ಞರು 'ಯಾವ ಕಾರಣಕ್ಕೆ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕು?' ಎಂದು 5 ಪ್ರಮುಖ ಕಾರಣಗಳನ್ನು ನೀಡಿದ್ದಾರೆ.
ಕಾರಣ-1 : ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ಪ್ರಕಾರ ಇನ್ನು ಮುಂದೆ ಕೃಷಿ ವಿಷಯದಲ್ಲಿ ರಾಜ್ಯ ಸರ್ಕಾರಗಳಿಗಿಂತಕೇಂದ್ರ ಸರ್ಕಾರದ ಪಾತ್ರ ದೊಡ್ಡದಾಗಿರುತ್ತದೆ. ವಾಸ್ತವವಾಗಿ ಸ್ಥಳೀಯವಾಗಿ ಕೃಷಿಕರ ಸಮಸ್ಯೆಗೆ ಸ್ಪಂದಿಸುವುದು ರಾಜ್ಯ ಸರ್ಕಾರಗಳಿಗೆ ಸುಲಭ. ಜೊತೆಗೆ ಅವುಗಳ ಜವಾಬ್ದಾರಿ ಕೂಡ.
ಕಾರಣ-2 : ಹೊಸ ಕೃಷಿ ಕಾನೂನುಗಳ ಪ್ರಕಾರ ಎರಡು ಮಾರುಕಟ್ಟೆಗಳ ರಚನೆಗೆ ಕಾರಣವಾಗುತ್ತವೆ. “ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ನಿಯಂತ್ರಿತ ಮಾರುಕಟ್ಟೆ ಮತ್ತು ವ್ಯಾಪಾರ ಪ್ರದೇಶದಲ್ಲಿ ಅನಿಯಂತ್ರಿತ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಎರಡು ಮಾರುಕಟ್ಟೆಯ ಶುಲ್ಕ ಭರಿಸುವುದು ಮತ್ತು ಎರಡರೊಂದಿಗೆ ವ್ಯವಹರಿಸುವುದು ರೈತರಿಗೆ ಕಷ್ಟವಾಗಲಿದೆ.
ಕಾರಣ-3 : ಕೃಷಿ ಮಾರುಕಟ್ಟೆ ಒಡೆದು ಹೋದರೆ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಬಿಹಾರದಲ್ಲಿ 2006 ರಲ್ಲಿ ಎಪಿಎಂಸಿ ಕಾಯ್ದೆಯನ್ನು ತೆಗೆದುಹಾಕಲಾಯಿತು. ಇದರಿಂದಾಗಿ ಅಲ್ಲಿ ರೈತರಿಗೆ ಕಡಿಮೆ ಖರೀದಿದಾರಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕೃಷಿ ಉತ್ಪನ್ನಗಳಿಗೆ ಅಲ್ಲಿ ಬೆಲೆಯೂ ಕಡಿಮೆಯಾಗಿದೆ.
ಇದನ್ನೂ ಓದಿ : Sensex - ಷೇರುಮಾರುಕಟ್ಟೆ ಹೊಸ ಎತ್ತರಕ್ಕೆ; ಮೊದಲ ಬಾರಿ 47 ಸಾವಿರ ಅಂಕ ಮುಟ್ಟಿದ ಸೆನ್ಸೆಕ್ಸ್
ಕಾರಣ-4 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳ ಪ್ರಕಾರ ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟರ್ ಕಂಪನಿಗಳು ಪ್ರವೇಶಿಸುತ್ತವೆ. ಹಣಬಲ ಇರುವ ಕಾರ್ಪೊರೇಟ್ ಕಂಪನಿಗಳು ಬಲಹೀನ ರೈತ ಸಮುದಾಯದ ಹಿತ ಕಾಯುವ ಸಾಧ್ಯತೆಗಳು ಇರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ