Tirupati: ಮತ್ತಷ್ಟು ಶ್ರೀಮಂತನಾದ ಕಲಿಯುಗದ ಸಾಕ್ಷಾತ್ ದೈವ, ತಿಮ್ಮಪ್ಪನ ಹುಂಡಿಯಲ್ಲಿ ಒಂದೇ ದಿನ 10 ಕೋಟಿ ಸಂಗ್ರಹ!

ಪ್ರತಿದಿನ ಭಕ್ತರು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಣ, ಚಿನ್ನಾಭರಣ, ದವಸ ಧಾಸ್ಯ, ಮುತ್ತು ರತ್ನ ಇತ್ಯಾದಿಗಳನ್ನು ನೀಡುತ್ತಾರೆ. ಇದೀಗ ಸೋಮವಾರ ಒಂದೇ ದಿನ ತಿಮ್ಮಪ್ಪನ ಕಾಣಿಕೆ ಹುಂಡಿಯಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಸಂಗ್ರಹವಾಗಿದ್ಯಂತೆ!

ತಿರುಪತಿ ತಿಮ್ಮಪ್ಪ

ತಿರುಪತಿ ತಿಮ್ಮಪ್ಪ

  • Share this:
ತಿರುಪತಿ: ಕಲಿಯುಗದ (Kaliyuga) ಸಾಕ್ಷಾತ ದೈವ (God) ಅಂದ್ರೆ ತಿರುಪತಿ ತಿಮ್ಮಪ್ಪ (Tirupati Timmappa) ಎನ್ನುವ ಮಾತಿದೆ. “ಮಾತು ಬಿಡ ಮಂಜುನಾಥ, ಕಾಸು ಬಿಡ ತಿಮ್ಮಪ್ಪ” ಅಂತ ಹಿರಿಯರು ಹೇಳುತ್ತಾರೆ. ಹಿಂದೆ ತನ್ನ ಹಾಗೂ ಪದ್ಮಾವತಿ ವಿವಾಹೋತ್ಸವಕ್ಕಾಗಿ (Marriage) ಸಮುದ್ರರಾಜನಲ್ಲಿ ತಿಮ್ಮಪ್ಪ ಅಪಾರ ಪ್ರಮಾಣದ ಸಾಲ (Loan) ಮಾಡಿದ್ದನಂತೆ. ಆ ಸಾಲ ತೀರಿಸಲು ಇನ್ನೂ ಸಾಧ್ಯವಾಗಲಿಲ್ಲವಂತೆ. ಹಾಗಾಗಿ ಭಕ್ತರು (Devotees) ತಿಮ್ಮಪ್ಪನಿಗೆ ಕಾಣಿಕೆ (Donation) ನೀಡಿ, ಆ ಸಾಲ ತೀರಿಸಲು ಸಹಾಯ ಮಾಡುತ್ತಾರೆ. ಆ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ, ಆಶೀರ್ವಾದ ಪಡೆಯುತ್ತಾರೆ ಎನ್ನುವ ಪ್ರತೀತಿ ಇದೆ. ಅದೇ ರೀತಿ ಪ್ರತಿದಿನ ಭಕ್ತರು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಣ (Money), ಚಿನ್ನಾಭರಣ (Jewelry), ದವಸ ಧಾಸ್ಯ, ಮುತ್ತು ರತ್ನ ಇತ್ಯಾದಿಗಳನ್ನು ನೀಡುತ್ತಾರೆ. ಇದೀಗ ಸೋಮವಾರ ಒಂದೇ ದಿನ ತಿಮ್ಮಪ್ಪನ ಕಾಣಿಕೆ ಹುಂಡಿಯಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಸಂಗ್ರಹವಾಗಿದ್ಯಂತೆ!

ಒಂದೇ ದಿನ 10 ಕೋಟಿ ಕಾಣಿಕೆ ಸಂಗ್ರಹ

ದೇಶದ ಶ್ರೀಮಂತ ದೇಗುಲಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದೇ ತಿರುಪತಿ ತಿಮ್ಮಪ್ಪನ ದೇಗುಲ. ಎಲ್ಲೆ ಭಕ್ತರ ಸಂಖ್ಯೆ ಕಡಿಮೆಯಾದರೂ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಕಡಿಮೆ ಆಗಿದೆ ಎಂಬ ಮಾತೇ ಇಲ್ಲ. ಮಳೆಯಿರಲಿ, ಬಿಸಿಲಿರಲಿ, ಚಳಿಯಿರಲಿ, ಗ್ರಹಣವಿರಲಿ, ಅಮಾವಾಸ್ಯೆ ಇರಲಿ.. ವರ್ಷದ 350 ದಿನವೂ ಭಕ್ತರು ತಿರುಪತಿ ಬಾಲಾಜಿ ದರ್ಶನಕ್ಕಾಗಿ ಬರುತ್ತಲೇ ಇರುತ್ತಾರೆ. ಹೀಗೆ ಬಂದವರು ಹರಕೆ ರೂಪದಲ್ಲಿ, ದಾನದ ರೂಪದಲ್ಲಿ ಚಿನ್ನ, ಬೆಳ್ಳಿ, ಹಣವನ್ನು ಹುಂಡಿಗೆ ಹಾಕುತ್ತಾರೆ. ಹೀಗೆ ಮೊನ್ನೆ ಒಂದೇ ದಿನ ತಿಮ್ಮಪ್ಪನ ಕಾಣಿಕೆ ಹುಂಡಿಯಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಸಂಗ್ರಹವಾಗಿದ್ಯಂತೆ.

ನೋಟಿನ ರೂಪದಲ್ಲಿ ಹುಂಡಿ ಸೇರಿತು 10 ಕೋಟಿ ರೂಪಾಯಿ

ತಿರುಮಲದಲ್ಲಿ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳುವುದಲ್ಲದೆ, ಹೆಚ್ಚಿನ ಭಕ್ತರು ತಿರುಮಲ ತಿರುಪತಿ ದೇವಸ್ಥಾನಂಗಳ (ಟಿಟಿಡಿ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಟ್ರಸ್ಟ್‌ಗಳಿಗೆ ದೇಣಿಗೆ ನೀಡುತ್ತಿದ್ದಾರೆ. ಕೆಲವು ಭಕ್ತರು ತಿಮ್ಮಪ್ಪನಿಗೆ ಚಿನ್ನ, ಬೆಳ್ಳಿ ಮತ್ತು ವಜ್ರಗಳಿಂದ ಮಾಡಿದ ಆಭರಣಗಳನ್ನು ಅರ್ಪಿಸುತ್ತಾರೆ. ಹೀಗೆ ನಿನ್ನೆ ಟಿಟಿಡಿ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ದಿನಕ್ಕೆ 10 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ.

ಇದನ್ನೂ ಓದಿ:  TTD Bans Plastic: ತಿರುಪತಿ ದರ್ಶನ ಮಾಡಬೇಕೇ? ಜೊತೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯಬೇಡಿ!

10 ಕೋಟಿ ರೂಪಾಯಿ ಕಾಣಿಕೆ ನೀಡಿದ ಭಕ್ತರು ಯಾರು?

ಈ ಬಗ್ಗೆ ಖುದ್ದು ಟಿಟಿಡಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ತಿಮ್ಮಪ್ಪನ ಭಕ್ತರಾದ ತಿರುನಲ್ವೇಲಿಯ ಗೋಪಾಲ್ ಬಾಲ ಕೃಷ್ಣನ್ ಅವರು 7 ಕೋಟಿ ದೇಣಿಗೆ ನೀಡಿದ್ದಾರೆ. ಅವರು ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ ತಲಾ ಒಂದು ಕೋಟಿ ದೇಣಿಗೆ ನೀಡಿದ್ದಾರೆ. ಹಾಗೆಯೇ ಶ್ರೀ ವೆಂಕಟೇಶ್ವರ ಗೋಸಂರಕ್ಷಣಾ ಟ್ರಸ್ಟ್, ಶ್ರೀ ವೆಂಕಟೇಶ್ವರ ವೇದ ಪರಿರಕ್ಷಣಾ ಟ್ರಸ್ಟ್, ಬಾಲಾಜಿ ಇನ್‌ಸ್ಟಿಟ್ಯೂಟ್ ಆಫ್ ಸರ್ಜರಿ ರಿಸರ್ಚ್ ಆ್ಯಂಡ ರಿಹ್ಯಾಬಿಲಿಟೇಶನ್ ಫಾರ್ ದಿ ಡಿಸೇಬಲ್ (BIRRD), ಶ್ರೀ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್, ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (SVBC) ಮತ್ತು ಶ್ರೀ ವೆಂಕಟೇಶ್ವರ ಸರ್ವ ಶ್ರೇಯಸ್ ಟ್ರಸ್ಟ್ ಸೇರಿದಂತೆ ವಿವಿಧ ಕಾರ್ಯಕ್ಕಾಗಿ 7 ಕೋಟಿ ನೀಡಿದ್ದಾರೆ.

ವಿವಿಧ ಸಂಸ್ಥೆಗಳಿಂದ 3 ಕೋಟಿ ದೇಣಿಗೆ

ತಿರುನೆಲ್ವೇಲಿ ಮೂಲದ ಎ-ಸ್ಟಾರ್ ಟೆಸ್ಟಿಂಗ್ ಮತ್ತು ಇನ್‌ಸ್ಪೆಕ್ಷನ್ ಪ್ರೈವೇಟ್ ಲಿಮಿಟೆಡ್  ಎಂಬ ಕಂಪನಿ ಶ್ರೀ ವೆಂಕಟೇಶ್ವರ ವಿದ್ಯಾದಾನ ಟ್ರಸ್ಟ್‌ಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದರೆ, ತಮಿಳುನಾಡಿನ ತಿರುನಲ್ವೇಲಿಯ ಬಾಲಕೃಷ್ಣ ಇಂಧನ ಕೇಂದ್ರವು ಶ್ರೀ ವೆಂಕಟೇಶ್ವರ ಅಲಯಾಲ ನಿರ್ಮಾಣಂ ಟ್ರಸ್ಟ್‌ಗೆ ಒಂದು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ.

ಇದನ್ನೂ ಓದಿ: Tirupati: ಬರೋಬ್ಬರಿ 9.2 ಕೋಟಿ ಮೌಲ್ಯದ ಆಸ್ತಿ ದಾನ ಕೊಟ್ಟ ಅಜ್ಜಿ! ಸತ್ತ ಮೇಲೂ ತೀರಿತು ತಿಮ್ಮಪ್ಪನ ಹರಕೆ!

ಟಿಟಿಡಿ ಟ್ರಸ್ಟ್‌ಗೆ ದೇಣಿಗೆ ಹಸ್ತಾಂತರ

ಇನ್ನು ತಮಿಳುನಾಡು ಮೂಲದ ಸೀಹಬ್ ಇನ್‌ಸ್ಪೆಕ್ಷನ್ ಸರ್ವಿಸಸ್ ಟಿಟಿಡಿಯ ಶ್ರೀ ವೆಂಕಟೇಶ್ವರ ಹೆರಿಟೇಜ್ ಪ್ರಿಸರ್ವೇಶನ್ ಟ್ರಸ್ಟ್‌ಗೆ ಒಂದು ಕೋಟಿ ರೂ. ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ ಈ ದೇಣಿಗೆ ನೀಡಿದೆ. ದಾನಿಗಳು ದೇಣಿಗೆಯನ್ನು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ ವಿ ಧರ್ಮ ರೆಡ್ಡಿ ಅವರಿಗೆ ಹಸ್ತಾಂತರಿಸಿದ್ದಾರೆ.
Published by:Annappa Achari
First published: