Punjab: ಕ್ಯಾಪ್ಟನ್​ ಬಳಿ ಸಿಧು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದ ಕಾಂಗ್ರೆಸ್​ ಶಾಸಕರು

1984 ರಲ್ಲಿ ದರ್ಬಾರ್ ಸಾಹಿಬ್ ಮೇಲೆ ನಡೆದ ದಾಳಿಯ ನಂತರ  ದೆಹಲಿಯಲ್ಲಿ ಮತ್ತು ದೇಶದ ಇತರೆಡೆ ಸಿಖ್ಖರ ಹತ್ಯಾಕಾಂಡದ ನಂತರ ಕಾಂಗ್ರಸ್​ ಪಕ್ಷ ಪಂಜಾಬ್‌ನಲ್ಲಿ ತನ್ನ ನೆಲೆಯನ್ನೇ ಕಳೆದುಕೊಂಡಿತ್ತು. ಆದರೆ ಪಂಜಾಬಿನಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಕ್ಯಾಪ್ಟನ್ ಅವರೇ ಕಾರಣ ಎಂದು ಶಾಸಕರು ಹೇಳಿದ್ದಾರೆ.

ಕ್ಯಾಪ್ಟನ್​ - ಸಿಧು

ಕ್ಯಾಪ್ಟನ್​ - ಸಿಧು

 • Share this:
  ನವಜೋತ್ ಸಿಂಗ್ ಸಿಧು ಅವರು ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷರಾಗುತ್ತಾರೆ ಎನ್ನುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪಂಜಾಬಿನಲ್ಲಿ ಪಕ್ಷದ ಒಳಗೆ ಸಾಕಷ್ಟು ಬೆಳವಣಿಗೆಗಳು ಕಂಡು ಬರುತ್ತಿವೆ. ಮುಖ್ಯಸ್ಥರಾಗುತ್ತಿರುವ ಹಿನ್ನೆಯಲ್ಲಿ ಸಿಧು ಅನೇಕ ಕಾಂಗ್ರೆಸ್​ ಪಕ್ಷದ ಶಾಸಕರನ್ನು ಉತ್ಸಾಹದಲ್ಲಿ ಭೇಟಿಯಾಗುತ್ತಿದ್ದಾರೆ. ಇದೇ ವೇಳೆಯಲ್ಲೇ ಪಕ್ಷದ ಹಿರಿಯ ಮುಖಂಡ ಸುಖ್​ಪಾಲ್​ ಖೇರ್​ ಅವರು 10 ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಹೈಕಮಾಂಡ್​ಗೆ ಸೂಚನೆ ಕೊಟ್ಟಿದ್ದು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ನೋವುಂಟಾಗುವ ರೀತಿಯಲ್ಲಿ ಸಿಧು ವರ್ತಿಸಬಾರದು ಎಂದು ಒತ್ತಾಯಿಸಿದ್ದಾರೆ “ಕ್ಯಾಪ್ಟನ್​ ಕಾರಣದಿಂದ ಕಾಂಗ್ರೆಸ್​ ಪಕ್ಷವು ಪಂಜಾಬಿನಲ್ಲಿ ಉತ್ತಮವಾಗಿ ನೆಲೆಗೊಂಡಿದೆ", ಆದ ಕಾರಣ ಅವರಿಗೆ ನೋವಾಗಬಾರದು ಎಂದು ಹೇಳಿದ್ದಾರೆ.

  ಆಮ್ ಆದ್ಮಿ ಪಕ್ಷದಿಂದ (ಎಎಪಿ) ಇತ್ತೀಚೆಗೆ ಕಾಂಗ್ರೆಸ್​ ಪಕ್ಷಕ್ಕೆ ಹಾರಿದ್ದ ಖೈರಾ ಜಂಟಿ ಹೇಳಿಕೆ ನೀಡಿದ್ದು,  ರಾಜ್ಯ ಪಿಸಿಸಿ ಮುಖ್ಯಸ್ಥರ ನೇಮಕವು ಪಕ್ಷದ ಹೈಕಮಾಂಡಿಗೆ ಬಿಟ್ಟ ಅಧಿಕಾರವಾಗಿದೆ. ಆದರೆ ಇದೇ ಸಮಯದಲ್ಲಿ ಸಾರ್ವಜನಿಕ ವಲಯದಲ್ಲಿ ಕಾಂಗ್ರೆಸ್​ ಬಗ್ಗೆ ಕಳೆದ ಎರಡು ತಿಂಗಳುಗಳಲ್ಲಿ ಪಕ್ಷದ ಗ್ರಾಫ್​ ಇಳಿದು ಹೋಗಿದೆ ಎಂದು ಆತಂಕ ವ್ಯಕ್ತಿಪಡಿಸಿದ್ದಾರೆ.

  1984 ರಲ್ಲಿ ದರ್ಬಾರ್ ಸಾಹಿಬ್ ಮೇಲೆ ನಡೆದ ದಾಳಿಯ ನಂತರ  ದೆಹಲಿಯಲ್ಲಿ ಮತ್ತು ದೇಶದ ಇತರೆಡೆ ಸಿಖ್ಖರ ಹತ್ಯಾಕಾಂಡದ ನಂತರ ಕಾಂಗ್ರಸ್​ ಪಕ್ಷ ಪಂಜಾಬ್‌ನಲ್ಲಿ ತನ್ನ ನೆಲೆಯನ್ನೇ ಕಳೆದುಕೊಂಡಿತ್ತು. ಆದರೆ ಪಂಜಾಬಿನಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಕ್ಯಾಪ್ಟನ್ ಅವರೇ ಕಾರಣ ಎಂದು ಶಾಸಕರು ಹೇಳಿದ್ದಾರೆ.

  "ಮುಖ್ಯಮಂತ್ರಿಗಳು ರಾಜ್ಯದ ಸಮಾಜದ ವಿವಿಧ ವರ್ಗಗಳಲ್ಲಿ ಅಪಾರ ಗೌರವವನ್ನು ಹೊಂದಿದ್ದರು, ವಿಶೇಷವಾಗಿ 2004 ರಲ್ಲಿ ಜಾರಿಗೆ ತಂದ ವಾಟರ್ಸ್ ಒಪ್ಪಂದ ಕಾಯ್ದೆಯ ಮುಕ್ತಾಯದ ಒಪ್ಪಂದವನ್ನು ಅಂಗೀಕರಿಸುವಾಗ ಅವರ ಸಿಎಂ ಆಗಿ ಕುರ್ಚಿಗೆ ಅಪಾಯ ಇದ್ದರು ಬಿಡದೆ ಸಾಧಿಸಿದರು" ಎಂದು ಹೇಳಿಕೆ ತಿಳಿಸಿದೆ.

  ಕ್ಯಾಪ್ಟನ್ ಅಮರಿಂದರ್ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಹೆಚ್ಚುವರಿ ಆಸ್ತಿ ಪ್ರಕರಣ ದಾಖಲಿಸಿದ್ದಕ್ಕಾಗಿ ಬಾದಲ್ ಕುಟುಂಬದಿಂದ ಸಾಕಷ್ಟು ಕಷ್ಟವನ್ನು ಎದುರಿಸಬೇಕಾಯಿತು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

  ಚುನಾವಣೆಗೆ ಕೇವಲ ಆರು ತಿಂಗಳುಗಳು ಬಾಕಿ ಇರುವುದರಿಂದ ಪಕ್ಷದ ಗುರಿಯನ್ನು ಬೇರೆ ಬೇರೆ ದಿಕ್ಕಿಗೆ ಎಳೆಯುವುದರಿಂದ 2022 ರ ಚುನಾವಣೆಯಲ್ಲಿ ಭವಿಷ್ಯಕ್ಕೆ  ಹಾನಿಯಾಗುತ್ತದೆ ಎಂದು ಶಾಸಕರು ಹೇಳಿದ್ದು, ತಮ್ಮ ಮತ್ತು ಸರ್ಕಾರದ ವಿರುದ್ಧ ಹಲವಾರು ಟ್ವೀಟ್‌ಗಳನ್ನು ಮಾಡಿದ ನವಜೋತ್ ಸಿಂಗ್ ಸಿಧು ಅವರು ಸಾರ್ವಜನಿಕ ಕ್ಷಮೆಯಾಚಿಸಬೇಕು, ಇದರಿಂದ ಪಕ್ಷ ಮತ್ತು ಸರ್ಕಾರ ಒಟ್ಟಾಗಿ ಕಾರ್ಯನಿರ್ವಹಿಸಬಹುದು ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಬೇಡಿಕೆಯನ್ನು ಹಲವು ಶಾಸಕರು ಬೆಂಬಲಿಸಿದ್ದಾರೆ.

  ನವಜೋತ್ ಸಿಂಗ್ ಸಿಧು ಅವರಿಗೆ ಶಾಸಕರು ಎಚ್ಚರಿಕೆ ನೀಡಿದ್ದು, ಅವರು ಸೆಲೆಬ್ರಿಟಿ ಮತ್ತು ನಮ್ಮ ಕಾಂಗ್ರೆಸ್​ ಪಕ್ಷಕ್ಕೆ ಅದ್ಬುತ ಆಸ್ತಿ ಎಂಬುದರಲ್ಲಿ ಸಂದೇಹವಿಲ್ಲ ಆದರೆ ತಮ್ಮದೇ ಪಕ್ಷ ಮತ್ತು ಸರ್ಕಾರವನ್ನು ಸಾರ್ವಜನಿಕವಾಗಿ ಖಂಡಿಸುವುದು ಮತ್ತು ಟೀಕಿಸುವುದರಿಂದ ಕಾರ್ಯಕರ್ತರಲ್ಲಿ ಬಿರುಕು ಉಂಟಾಗಲಿದೆ ಹಾಗೂ ಪಕ್ಷವು ಬೇರು ಮಟ್ಟದಲ್ಲಿ ಸಡಿಗೊಳ್ಳಲಿದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಬಿಜೆಪಿಯವರೇ ಹೇಳ್ತಿದ್ದಾರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ : ಕಾರಜೋಳಗೆ ಡಿಕೆಶಿ ತಿರುಗೇಟು

  ನಮ್ಮ ಪಕ್ಷದ ಹೈಕಮಾಂಡ್ ನಾವು ನೀಡಿರುವ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಹಾಗೂ ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಕೊಡುಗೆ ಮತ್ತು ಹಿನ್ನೆಲೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ ಎಂದು ನಾವು ನಂಬಿರುವುದಾಗಿ ಶಾಸಕರು ಜಂಟಿ ಹೇಳಿಕೆಯಲ್ಲಿ ಈ ಮಹತ್ವದ ಸಂಗತಿಗಳನ್ನು ತಿಳಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: