ರಿಲಾಯನ್ಸ್​ ಮಹಾ ಸಭೆಯಲ್ಲಿ ಮುಕೇಶ್​ ಅಂಬಾನಿ ಘೋಷಿಸಿದ 10 ಪ್ರಮುಖ ಅಂಶಗಳು

news18
Updated:July 5, 2018, 8:36 PM IST
ರಿಲಾಯನ್ಸ್​ ಮಹಾ ಸಭೆಯಲ್ಲಿ ಮುಕೇಶ್​ ಅಂಬಾನಿ ಘೋಷಿಸಿದ 10 ಪ್ರಮುಖ ಅಂಶಗಳು
news18
Updated: July 5, 2018, 8:36 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಜು 5): ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ನ 41ನೇ ವಾರ್ಷಿಕ ಸಾಮಾನ್ಯ ಸಭೆ ಇಂದು  ನಡೆಯಿತು. ರಿಲಯನ್ಸ್​ ಮುಖ್ಯಸ್ಥ ಮುಕೇಶ್​ ಅಂಬಾಲಿ ಟೆಲಿಕಾಂ ಕ್ಷೇತ್ರದಲ್ಲಿ ಬಂಪರ್​ ಆಫರ್​ ನೀಡಿದ್ದಾರೆ.

ಸಭೆಯಲ್ಲಿ ಅವರು ನೀಡಿರುವ ಕೆಲವುಮಹತ್ವದ ನಿರ್ಧಾರಗಳು ಇಂತಿವೆ.


 • ಅತ್ಯಾಧುನಿಕ ಫೈಬರ್​ ಆಧಾರಿತ ಬ್ರಾಡ್​ಬಾಂಡ್​ ಸಂಪರ್ಕ ಸೇವೆ JioGigaFiber (ಜಿಯೋಗಿಗಾಫೈಬರ್)​ಗೆ ಚಾಲನೆ. ಈ ಫೈಬರ್ ಬ್ರಾಡ್​ಬ್ಯಾಂಡ್​ ಸೇವೆ ದಿನದ 24ಗಂಟೆ, ವಾರದ 7 ದಿನಗಳು ತುರ್ತು ಸಹಾಯವನ್ನು ಪಡೆಯಬಹುದು.

 • ಜಿಯೋಗಿಗಾಫೈಬರ್​ ಗ್ರಾಹಕರು ಈ ಮೂಲಕ ಅತ್ಯುಚ್ಚ ಹೆಚ್​ಡಿ ಕ್ವಾಲಿಟಿಯಲ್ಲಿ ಮನೋರಂಜನೆ ಪಡೆಯಬಹುದು . ಮಲ್ಟಿ-ಪಾರ್ಟಿ ವೀಡಿಯೋ ಕಾನ್ಫರೆನ್ಸಿಂಗ್ ಅನ್ನು ಹೊಂದಿದ್ದು, ಧ್ವನಿ-ಸಕ್ರಿಯ ಸಹಾಯವನ್ನು ಪಡೆಯಬಹುದಾಗಿದೆ. ನಿಮ್ಮ ಮನೆಯಲ್ಲಿ ಸ್ಮಾರ್ಟ್ ಹೋಂಗಳಾಗಿ ಪರಿವರ್ತಿಸಬಹುದಾಗಿದೆ.

 • ಮನೆಯಲ್ಲಿ ಗೋಡೆಯಿಂದ ಗೋಡೆಗೂ ವೈಫೈ ಕವರೇಜ್ ಇರುತ್ತದೆ. ಮನೆಯ ಪ್ರತಿಯೊಂದು ಉಪಕರಣ, ಪ್ಲಗ್​ ಪಾಯಿಂಟ್​, ಸ್ವಿಚ್​ ಎಲ್ಲವೂ ಸ್ಮಾರ್ಟ್ ಆಗಲಿದೆ. ಕ್ಯಾಮೆರಾಗಳ ಮೂಲಕ ನೀವು ದಿನದ 24 ಗಂಟೆಯೂ ಮನೆಯ ಸುರಕ್ಷತೆಗೆ ಗಮನ ಹರಿಸಬಹುದು.

 • Loading...

 • ಆಗಸ್ಟ್​ 15ರಿಂದ ಜಿಯೋಗಿಗಾಫೈಬರ್​ ಸೇವೆಗೆ ನೊಂದಾಯಿಸಿಕೊಳ್ಳಬಹುದಾಗಿದೆ.

 • ಜಿಯೋ ಫೋನಿಗೆ ಹೆಚ್ಚುವರಿಯಾಗಿ ಫೇಸ್​ಬುಕ್​, ಯೂಟ್ಯೂಬ್​, ವಾಟ್ಸ್​ಆ್ಯಪ್​ ಆ್ಯಪ್ ಸೇರ್ಪಡೆ.

 • ಉನ್ನತ ಮಟ್ಟ ರೂಪದ ಜಿಯೋ ಫೋನ್​2 ಸ್ಮಾರ್ಟ್​ ಫೋನ್​ ಬಿಡುಗಡೆ ಮಾಡಿದ್ದು, ಇದು ಅಗಲವಾದ ಪರದೆ, ಕ್ವೆರ್ಟ್(QWERT)ಕೀಪ್ಯಾಡ್​ ವ್ಯವಸ್ಥೆಯನ್ನು ಹೊಂದಿದೆ. ಈ ಪೋನ್​ 2,999ರೂಗೆ ಲಭ್ಯವಾಗಲಿದೆ. ಈ ಪೋನ್​ ಆಗಸ್ಟ್​ 15ರಿಂದ ಜಿಯೋ ಮಳಿಗೆಗಳಲ್ಲಿ ಲಭ್ಯವಾಗಲಿದೆ.

 • 4ಸಾವಿರದಷ್ಟು ರೆಸ್ಯೂಲುಷನ್​ನಲ್ಲಿ ವಿಡಿಯೋ ಪ್ಲೇ ಮಾಡಬಲ್ಲ ಜಿಯೋಗಿಗಾ(JioGiga) ಟಿವಿ ಸೆಟ್​ ಟಾಪ್​ ಬಾಕ್ಸ್​ ಬಿಡುಗಡೆ

 • ಜನರು ತಮ್ಮ ಫೀಚರ್​ ಫೋನ್​ಗಳನ್ನು ನೀಡಿ ಕೇವಲ 500 ರೂಪಾಯಿಗೆ ಹೊಸ ಜಿಯೋ ಫೋನ್ ಪಡೆಯಬಹುದು.

 • ಜಿಯೋ ಫೋನ್ ಬಳಕೆದಾರರು ತಮ್ಮ ಫೋನ್ ಜೊತೆಗೆ 501 ರೂ ಕೊಟ್ಟು ಹೊಸ ಬ್ರಾಂಡ್ ಫೀಚರ್ ಫೋನ್ ಪಡೆಯಬಹುದು.

 • ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆ ಇದೆ. ಜಿಯೋದಿಂದ ಭಾರತದಲ್ಲಿ ಹೊಸ ಸ್ಮಾರ್ಟ್ ಹಸಿರು ಕ್ರಾಂತಿ ಶುರುವಾಗಲಿದೆ ಎಂಬುದು ಅಂಬಾನಿ ಹೇಳಿಕೆ.

First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...