ಮೇಘಾಲಯದಲ್ಲಿ ಆ್ಯಂಟಿ ಸಿಎಎ ಕಿಚ್ಚು; ಪ್ರತಿಭಟನೆ ವೇಳೆ ಹಿಂಸಾಚಾರ, ಓರ್ವ ಬಲಿ

ಶಿಲ್ಲಾಂಗ್​ ಜಿಲ್ಲೆಯ ಇಚಮತಿ ಭಾಗದಲ್ಲಿ ಆ್ಯಂಟಿ ಸಿಎಎ ಸಭೆ ನಡೆದಿತ್ತು. ಈ ವೇಳೆ ಖಾಸಿ ವಿದ್ಯಾರ್ಥಿ ಸಂಘಟನೆ ಮತ್ತು ನಾನ್​ ಟ್ರೈಬಲ್ಸ್​ ನಡುವೆ ವಾಗ್​ವಾದ ಏರ್ಪಟ್ಟಿದೆ.

news18-kannada
Updated:February 29, 2020, 12:29 PM IST
ಮೇಘಾಲಯದಲ್ಲಿ ಆ್ಯಂಟಿ ಸಿಎಎ ಕಿಚ್ಚು; ಪ್ರತಿಭಟನೆ ವೇಳೆ ಹಿಂಸಾಚಾರ, ಓರ್ವ ಬಲಿ
ಸಿಎಎ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಫೈಲ್​ ಫೋಟೋ
  • Share this:
ಶಿಲ್ಲಾಂಗ್ (ಫೆ.29)​: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 40 ಮಂದಿ ಮೃತಪಟ್ಟಿದ್ದರು. ಈಗ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಆ್ಯಂಟಿ ಸಿಎಎ ಸಭೆ ವೇಳೆ ಉಂಟಾದ ಘರ್ಷಣೆಯಲ್ಲಿ ಓರ್ವ ಮೃತಪಟ್ಟಿದ್ದಾನೆ.

ಶಿಲ್ಲಾಂಗ್​ ಜಿಲ್ಲೆಯ ಇಚಮತಿ ಭಾಗದಲ್ಲಿ ಆ್ಯಂಟಿ ಸಿಎಎ ಹಾಗೂ ಆಂತರಿಕ ರೇಖೆಯ ಪರವಾನಗಿ (ಐಎಲ್​ಪಿ) ಪರವಾಗಿ ಸಭೆ ನಡೆದಿತ್ತು. ಈ ವೇಳೆ ಖಾಸಿ ವಿದ್ಯಾರ್ಥಿ ಸಂಘಟನೆ ಮತ್ತು ನಾನ್​ ಟ್ರೈಬಲ್ಸ್​ ನಡುವೆ ವಾಗ್ವಾದ ಏರ್ಪಟ್ಟಿದೆ.  ಇದು ಹಿಂಸಾಚಾರಕ್ಕೆ ತಿರುಗಿದ್ದು, ಓರ್ವ ಮೃತಪಟ್ಟಿದ್ದಾನೆ.

ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳಲು ಮೇಘಾಲಯದ 6 ಜಿಲ್ಲೆಗಳಲ್ಲಿ ಮೊಬೈಲ್​ ಇಂಟರ್​ನೆಟ್​ ಸೇವೆಯನ್ನು ರದ್ದು ಮಾಡಲಾಗಿದೆ. ಮುಂದಿನ 48 ಗಂಟೆಗಳ ಕಾಲ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಲ್ಲಾಂಗ್​ ಹಾಗೂ ಸುತ್ತಮುತ್ತ ಭಾಗದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ: ಇಲ್ಲಿಯವರೆಗೂ 630 ಮಂದಿ ಬಂಧನ; 123 ವಿರುದ್ಧ ಎಫ್​​​ಐಆರ್​​

ದೆಹಲಿಯಲ್ಲಿ 42 ಸಾವು:

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಮತ್ತು ಎನ್​​ಆರ್​​ಸಿ ವಿರೋಧಿ ಪ್ರತಿಭಟನೆಯಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೇರುತ್ತಲೇ ಇದೆ. ಇಲ್ಲಿಯವರೆಗೂ ಈ ಗಲಭೆಯಲ್ಲಿ 42 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ 123 ಮಂದಿ ವಿರುದ್ಧ ಎಫ್​​ಐಆರ್​​ ದಾಖಲಾಗಿದ್ದು, 630 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
First published:February 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ