ಉತ್ತರಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗಳ ಎದುರೇ ಗುಂಡು ಹಾರಿಸಿ ವ್ಯಕ್ತಿಯನ್ನು ಕೊಂದ ಬಿಜೆಪಿ ಶಾಸಕನ ಆಪ್ತ!

ಸಭೆ ಟೆಂಟ್‌ನಲ್ಲಿ ನಡೆಯಿತು, ಅಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳೂ ಅಲ್ಲಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

news18-kannada
Updated:October 16, 2020, 12:21 PM IST
ಉತ್ತರಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗಳ ಎದುರೇ ಗುಂಡು ಹಾರಿಸಿ ವ್ಯಕ್ತಿಯನ್ನು ಕೊಂದ ಬಿಜೆಪಿ ಶಾಸಕನ ಆಪ್ತ!
ಘಟನೆ ನಡೆದ ಸ್ಥಳ.
  • Share this:
ಉತ್ತರಪ್ರದೇಶ: ಪಡಿತರ ಅಂಗಡಿಗಳ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಗುರುವಾರ ಸ್ಥಳೀಯ ಅಧಿಕಾರಿಗಳ ಎದುರೇ ಬಿಜೆಪಿ ಪಕ್ಷದ ಶಾಸಕನ ಆಪ್ತ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಎಚ್ಚೆತ್ತಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಘಟನಾ ಸ್ಥಳದಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ. 46 ವರ್ಷದ ಜೈಪ್ರಕಾಶ್ ಎಂಬುವವರನ್ನು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರ ಆಪ್ತ ಧೀರೇಂದ್ರ ಸಿಂಗ್ ಅಧಿಕಾರಿಗಳ ಎದುರೇ ಗುಂಡಿಕ್ಕಿ ಕೊಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಎನ್‌ಐ ವೀಡಿಯೋವೊಂದನ್ನು ಟ್ವೀಟ್ ಮಾಡಿದ್ದು, “ಬಲ್ಲಿಯಾದಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ಅಂಗಡಿಗಳನ್ನು ಮಂಜೂರು ಮಾಡಲು ಕರೆದಿದ್ದ ಸಭೆಯಲ್ಲಿ ಗುಂಡು ಹಾರಿಸಿದ್ದರಿಂದ ಒಬ್ಬರು ಮೃತಪಟ್ಟಿದ್ದಾರೆ. ಬಲ್ಲಿಯಾದ ಎಸ್‌ಪಿ ದೇವೇಂದ್ರನಾಥ್ ಪ್ರಕಾರ, ಸಭೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ನಂತರ ಈ ಘಟನೆ ನಡೆದಿದೆ. ತನಿಖೆ ನಡೆಯುತ್ತಿದೆ ಎಂದಿದ್ದಾರೆ” ಎಂದು ಟ್ವೀಟ್​ನಲ್ಲಿ ಮಾಹಿತಿ ನೀಡಿದೆ.

ಪಡಿತರ ಅಂಗಡಿಗಳ ಹಂಚಿಕೆ ಕುರಿತ ಸಭೆಯನ್ನು ಅಧಿಕಾರಿಯೊಬ್ಬರು ರದ್ದುಪಡಿಸಿದ ನಂತರ, ಅಲ್ಲಿ ಸೇರಿದ್ದ ಸದಸ್ಯರ ನಡುವಿನ ವಿವಾದದಿಂದಾಗಿ ದುರ್ಜನ್‌ಪುರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಎಸ್‌ಪಿ ದೇವೇಂದ್ರ ನಾಥ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಸಭೆ ಟೆಂಟ್‌ನಲ್ಲಿ ನಡೆಯಿತು, ಅಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳೂ ಅಲ್ಲಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಶಾಸಕ ಸುರೇಂದ್ರ ಸಿಂಗ್​ (ಎಡಕ್ಕೆ) ಮತ್ತು ಆರೋಪಿ ಧೀರೇಂದ್ರ ಸಿಂಗ್.


ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಆರೋಪಿಯನ್ನು ಬಿಜೆಪಿಯ ಮಾಜಿ ಸೈನಿಕರ ಘಟಕದ ಮುಖ್ಯಸ್ಥರು ಎಂದು ದೃಢಪಡಿಸಿದ್ದು, “ಈ ಘಟನೆ ಎಲ್ಲಿಬೇಕಾದರೂ ಸಂಭವಿಸಬಹುದಾದ ಆಕಸ್ಮಿಕ ಘಟನೆ. ಇಲ್ಲಿ ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿತ್ತು. ಈ ವಿಷಯದಲ್ಲಿ ಕಾನೂನು ತನ್ನ ಕೆಲಸವನ್ನು ನಿರ್ವಹಿಸಲಿದೆ” ಎಂದು ಹೇಳಿದರು.

ಇದನ್ನೂ ಓದಿ : ಹತ್ರಾಸ್ ಪ್ರಕರಣದ ವಿಚಾರಣೆಯನ್ನು ದೆಹಲಿ ಕೋರ್ಟ್​ಗೆ ವರ್ಗಾಯಿಸಲು ಸಾಧ್ಯವಿಲ್ಲ; ಸುಪ್ರೀಂ ತೀರ್ಪು

ಸಂತ್ರಸ್ತನ ಸಹೋದರ ನೀಡಿದ ದೂರಿನ ಮೇರೆಗೆ 15-20 ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಯಾರನ್ನೂ ಬಂಧಿಸಿಲ್ಲ. ಘಟನೆಯನ್ನು ಗಂಭೀರವಾಗಿ ಗಮನಿಸಿದ ಮುಖ್ಯಮಂತ್ರಿ ಆದಿತ್ಯನಾಥ್, ಸ್ಥಳದಲ್ಲಿದ್ದ ಎಸ್‌ಡಿಎಂ, ಸಿಒ ಮತ್ತು ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ನಿರ್ದೇಶಿಸಿದ್ದಾರೆ ಎಂದು ಗೃಹ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಕುಮಾರ್ ಅವಸ್ಥಿ ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮದಲ್ಲಿ ಗಣನೀಯ ಪ್ರಮಾಣದ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published by: MAshok Kumar
First published: October 16, 2020, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading