Deadly Accident: ನೋಡ ನೋಡುತ್ತಿದ್ದಂತೆ ಜನರ ಮೇಲೆ ಹರಿದ Audi ಕಾರು: ಓರ್ವ ಸಾವು, 9 ಮಂದಿಗೆ ಗಾಯ

Deadly Accident: ರಾಜಸ್ಥಾನ(Rajasthan)ದ ಜೋಧ್‌ಪುರದಲ್ಲಿ (Jodhpur) ಐಷಾರಾಮಿ ಆಡಿ (Luxury Audi Car) ಕಾರೊಂದು ಬೈಕ್ ಸವಾರರ ಮೇಲೆ ಹರಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  • Share this:
ರಸ್ತೆಯಲ್ಲಿ ನಾವು ಎಷ್ಟೇ ಜಾಗೃತರಾಗಿದ್ದಾರೂ, ಇತರರ ತಪ್ಪಿನಿಂದ ನಮಗೂ ತೊಂದರೆಯಾಗುತ್ತೆ. ಎಷ್ಟೇ ನಿಧಾನ(Slow)ವಾಗಿ ಚಲಿಸುತ್ತಿದ್ದರು, ನಮ್ಮ ಅಕ್ಕ ಪಕ್ಕದ ವಾಹನಗಳ ಯಡವಟ್ಟನಿಂದ ಅಪಘಾತ(Accident) ಸಂಭವಿಸುತ್ತದೆ. ಅತಿ ವೇಗವಾಗಿ ಚಾಲನೆ(Fast Driving) ಮಾಡಿ , ನಿಯಂತ್ರಣ ತಪ್ಪಿ ಅಪಘಾತವಾಗಿರುವುದುನ್ನು ನಾವು ನೋಡಿದ್ದೇವೆ. ಅದು ಐಷಾರಾಮಿ ಕಾರುಗಳ(Luxury Cars) ಅಬ್ಬರ ರಸ್ತೆಗಳಲ್ಲಿ ಜೋರಾಗಿರುತ್ತೆ. ಐಷಾರಾಮಿ ಕಾರುಗಳ ಮಾಲೀಕರು ಯಾವುದಕ್ಕೂ ಕೇರ್​ ಮಾಡದೇ ತಮಗಿಷ್ಟ ಬಂದ ಹಾಗೇ ರಸ್ತೆಯಲ್ಲಿ ಕಾರು ಚಲಾಯಿಸುತ್ತಾರೆ.  ರಾಜಸ್ಥಾನ(Rajasthan)ದ ಜೋಧ್‌ಪುರದಲ್ಲಿ (Jodhpur) ಐಷಾರಾಮಿ ಆಡಿ (Luxury Audi Car) ಕಾರೊಂದು ಬೈಕ್ ಸವಾರರ ಮೇಲೆ ಹರಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral) ಆಗಿದೆ. ಈ ವಿಡಿಯೋ ನೋಡಿದವರ ಎದೆ ಝಲ್​ ಎನಿಸುವುದು ಗ್ಯಾರಂಟಿ. ಯಾಕಂದರೆ ಅಷ್ಟರ ಮಟ್ಟಿಗೆ ಭೀಕರವಾಗಿ ಅಪಘಾತವಾಗಿದೆ. 

ಮೇಲಕ್ಕೆ ಹಾರಿ ಕೆಳಗೆ ಬಿದ್ದ ಸವಾರರು, ಪಾದಾಚಾರಿಗಳು!

ಈ ಭಯಾನಕ ಘಟನೆಯ ವಿಡಿಯೋದಲ್ಲಿ ಅಪಘಾತದ ಸಂಪೂರ್ಣ ದೃಶ್ಯ ದಾಖಲಾಗಿದೆ. ಟ್ರಾಫಿಕ್ ಇರುವ ರಸ್ತೆಯಲ್ಲಿ ಬರುತ್ತಿದ್ದ ಐಷಾರಾಮಿ ಕಾರು ಎದುರು ಹೋಗುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆತನ ಬೈಕ್ ಮೇಲಕ್ಕೆ ಹಾರಿ ಕೆಳಗೆ ಬಿದ್ದಿದೆ. ಇದರಿಂದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ಬಳಿಕ ಇನ್ನೂ ಕೆಲವು ಬೈಕ್​ಗಳಿಗೆ ಡಿಕ್ಕಿ ಹೊಡೆದು, ಅಂಗಡಿಗೆ ಗುದ್ದಿದೆ. ಅಲ್ಲೇ ಪಕ್ಕದಲ್ಲೇ ನಡೆದು ಹೊಗುತ್ತಿದ್ದವರ ಮೇಲೂ ಹರಿದಿದೆ. ಕಾರು ಗುದ್ದಿದ ರಭಸಕ್ಕೆ ಪಾದಾಚಾರಿಗಳು ಮೇಲಕ್ಕೆ ಹಾರಿ ಕೆಳಗೆ ಬಿದ್ದಿದ್ದಾರೆ.


ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ 

ರಾಜಸ್ಥಾನದ ಜೋಧ್‌ಪುರದಲ್ಲಿ ವೇಗವಾಗಿ ಬಂದ ಕಾರೊಂದು ಏಮ್ಸ್ ರಸ್ತೆಯ ಕೊಳೆಗೇರಿಯಲ್ಲಿದ್ದ ವಾಹನಗಳಿಗೆ ಹಾಗೂ ಅಂಗಡಿಗಳಿಗೆ ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ಕೊಳೆಗೇರಿಯಲ್ಲಿ ವಾಸಿಸುವ ಇತರೆ 9 ಮಂದಿಗೆ ಗಂಭೀರ ಗಾಯಗಳಾಗಿವೆ.  ಏಮ್ಸ್ ಆಸ್ಪತ್ರೆಯಲ್ಲಿ ಗಾಯಗೊಂಡಿರುವವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತಕ್ಕೆ ಮುಖ್ಯ ಕಾರಣ ಅಂದರೆ, ಅದು ಈ ಆಡಿ ಕಾರಿನ ಚಾಲಕ. ಅಷ್ಟು ವಾಹನಗಳು ರಸ್ತೆಯಲ್ಲಿ ಇದ್ದರು ಉದ್ಧಟತನದಿಂದ ಕಾರು ಚಲಾಯಿಸಿದ್ದಾನೆ. ಬಳಿಕ ನಿಯಂತ್ರಣ ತಪ್ಪಿ, ಬೈಕ್​ಗಳು ಹಾಗೂ ಪಾದಾಚಾರಿಗಳಿಗೆ ಗುದ್ದಿದ್ದಾನೆ. ರಸ್ತೆ ಬದಿಯಿದ್ದ ಅಂಗಡಿಗೆ ಕಾರು ಗುದ್ದಿ ನಂತರ ನಿಂತಿದೆ.

ಇದನ್ನು ಓದಿ : ಬೈಕ್​ನಲ್ಲಿ ತೆರಳುತ್ತಿದ್ದಾಗಲೇ ಸ್ಫೋಟಗೊಂಡ ಪಟಾಕಿ: ಅಪ್ಪ-ಮಗನ ದೇಹ ಛಿದ್ರ ಛಿದ್ರ!

ಏಮ್ಸ್​ ಆಸ್ಪತ್ರೆಗೆ ಅಶೋಕ್​ ಗೆಹ್ಲೋಟ್​ ಭೇಟಿ

ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದ ನಂತರ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಏಮ್ಸ್ ಆಸ್ಪತ್ರೆಗೆ ತಲುಪಿ ನೊಂದ ಸಂತ್ರಸ್ತರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ. ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗಾಯಗೊಂಡವರ ಕುಟುಂಬಸ್ಥರು ಸಿಎಂ ಬಳಿ ಮನವಿ ಮಾಡಿದ್ದಾರೆ.

ಇದನ್ನು ಓದಿ : ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಯುವನಟಿ Ishwari Deshpande..!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

ಇನ್ನೂ ಈ ಅಪಘಾತದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಭಾರಿ ಚರ್ಚೆ ನಡೆಸುತ್ತಿದ್ದಾರೆ. ‘ದೊಡ್ಡವರ ಮಕ್ಕಳು ಅಪಘಾತ ಮಾಡಿದರೆ, ಅದನ್ನು ಮುಚ್ಚಿಹಾಕುತ್ತಾರೆ. ಈ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲ್ಲ. ಬೇಕಿದ್ದರೆ ನೀವೇ ನೋಡಿ’ ಎಂದು ಚರ್ಚೆ ನಡೆಸುತ್ತಿದ್ದಾರೆ.
Published by:Vasudeva M
First published: