ಮೈಸೂರು: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳ ಸಮೀಕ್ಷೆ ನಡೆಯಲಿದೆ. ರಾಜ್ಯದ ಮೈಸೂರು (Mysuru News) ಮತ್ತು ವಿಜಯಪುರ ಜಿಲ್ಲೆಗಳು (Vijayapura News) ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಸಜ್ಜಾಗಿವೆ. ತೃತೀಯ ಲಿಂಗಿಗಳ ಜನಸಂಖ್ಯೆಯ ಕುರಿತು ಸ್ಪಷ್ಪ ಮಾಹಿತಿ ಪಡೆದುಕೊಳ್ಳಲು ಈ ಸಮೀಕ್ಷೆ ನಡೆಸಲಾಗುತ್ತಿದೆ.
ಜೊತೆಗೆ, ತೃತೀಯ ಲಿಂಗಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.
ತೃತೀಯ ಲಿಂಗಿಗಳಿಂದಲೇ ತೃತೀಯ ಲಿಂಗಿಗಳ ಸಮೀಕ್ಷೆ
ಮಾರ್ಚ್ 10 ರಿಂದ 45 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಸ್ವತಃ ತೃತೀಯ ಲಿಂಗಿಗಳೇ ಸಮೀಕ್ಷೆ ನಡೆಸಲಿದ್ದಾರೆ. ಮೈಸೂರು ಮತ್ತು ವಿಜಯಪುರ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ತೃತೀಯ ಲಿಂಗಿಗಳಿಂದಲೇ ತೃತೀಯ ಲಿಂಗಿಗಳ ಸಮೀಕ್ಷೆ ನಡೆಸಲಾಗುವುದು ಎಂದು ಮೈಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು. ಬಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Double Decker Bus: ರಾಜ್ಯದ ಈ ನಗರಗಳಲ್ಲೂ ಡಬಲ್ ಡೆಕರ್ ಬಸ್ ಸೇವೆ!
ಗುರುತಿನ ಚೀಟಿ ವಿತರಣೆಯಿಂದ ಸರ್ಕಾರಿ ಸೌಲಭ್ಯ
ಅಂದಹಾಗೆ ಸರ್ಕಾರ ನಡೆಸುತ್ತಿರುವ ಈ ತೃತೀಯ ಲಿಂಗಿಗಳ ಸಮೀಕ್ಷೆಯಲ್ಲಿ ಮೈಸೂರು ಜಿಲ್ಲೆಯಿಂದ 9 ತೃತೀಯ ಲಿಂಗಿಗಳು ಸಮೀಕ್ಷೆ ನಡೆಸುವ ತರಬೇತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Success Story: ಕಲಿತ ವಿಶ್ವವಿದ್ಯಾಲಯಕ್ಕೇ ಕುಲಸಚಿವೆಯಾದ ವಿದ್ಯಾರ್ಥಿ!
ಈ ಸಮೀಕ್ಷೆ ನಡೆದ ನಂತರ ಭಾಗವಹಿಸಿದ ಎಲ್ಲ ತೃತೀಯ ಲಿಂಗಿ ವ್ಯಕ್ತಿಗಳಿಗೆ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ. ಜೊತೆಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತೃತೀಯ ಲಿಂಗಿಗಳಿಗೆ ಈ ಸಮೀಕ್ಷೆ ನೆರವಾಗಲಿದೆ ಎಂದು ಹೇಳಲಾಗಿದೆ.
ಮುಂಬೈ ಸೇರಿದಂತೆ ಇತರ ಮಹಾ ನಗರಗಳಿಗೆ ವಲಸೆ ಹೋದ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳ ಮಂಗಳಮುಖಿಯರು ಸಮೀಕ್ಷೆ ನಡೆಯುವ ಸಮಯದಲ್ಲಿ ಜಿಲ್ಲೆಗೆ ಆಗಮಿಸುವಂತೆ ಮನವಿ ಮಾಡಲಾಗಿದೆ. ಈ ಸಮೀಕ್ಷೆಯಿಂದ ಮುಂದಿನ ದಿನಗಳಿಂದ ಮಂಗಳಮುಖಿಯರು ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಮೀಕ್ಷೆಯಲ್ಲಿ ತಪ್ಪಿಸದೇ ಪಾಲ್ಗೊಳ್ಳುವಂತೆ ಮೈಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು. ಬಿ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ