Tomato Flu: ಕೇರಳದಲ್ಲಿ ನಿಗೂಢ ಕಾಯಿಲೆ ಟೊಮಾಟೋ ಜ್ವರ; ಮೈಸೂರು ಗಡಿಯಲ್ಲಿ ಕಟ್ಟೆಚ್ಚರ

ಸೋಂಕಿಗೆ ಒಳಗಾಗಿರುವ ಮಕ್ಕಳ ಚರ್ಮದ ಮೇಲೆ ಗುಳ್ಳೆಗಳು ಎದ್ದಿರುವುದು, ಕೆರೆತ ಉಂಟಾಗಿದೆ. ಇದರೊಂದಿಗೆ ಕೆಮ್ಮು, ನೆಗಡಿ, ಹೊಟ್ಟೆ ನೋವು, ವಾಂತಿ ಅಥವಾ ಬೇಧಿ, ಹೊಟ್ಟೆ ತೊಳಸುವಿಕೆ, ಕೈಗಳು, ಮಂಡಿಗಳಲ್ಲಿ ಬಣ್ಣ ಬದಲಾವಣೆ ಉಂಟಾಗುವ ಲಕ್ಷಣಗಳು ಕಾಣಿಸಿಕೊಳ್ಳಬಹುದಾಗಿದೆ.

ಮಕ್ಕಳ ಆರೋಗ್ಯ ಪರಿಶೀಲನೆ

ಮಕ್ಕಳ ಆರೋಗ್ಯ ಪರಿಶೀಲನೆ

  • Share this:
ಮೈಸೂರು: ಕೇರಳದ ಕೊಲ್ಲಂ (Kollam, Kerala) ಜಿಲ್ಲೆಯಲ್ಲಿ ಐದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ (Children) ನಿಗೂಢ ಕಾಯಿಲೆ (Rare Viral Disease) ಕಾಣಿಸಿಕೊಂಡಿದೆ. ಮಕ್ಕಳ ಮೈಮೇಲೆ ಕೆಂಪು ಗುಳ್ಳೆ ಕಾಣಿಸಿಕೊಂಡಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. 80ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಕಾಯಿಲೆಯನ್ನು 'ಟೊಮಾಟೊ ಜ್ವರ' (Tomato flu) ಎಂದು ಕರೆಯಲಾಗಿದೆ.  ಹಿನ್ನೆಲೆಯಲ್ಲಿ  ಮೈಸೂರು (Mysuru) ಜಿಲ್ಲೆಯ ಗಡಿ ಭಾಗವಾದ ಬಾವಲಿ ಚೆಕ್ ಪೋಸ್ಟ್ (Check Post) ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ರತ್ನಾಂಬಿಕ ,ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ ಟಿ.ರವಿಕುಮಾರ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಕರ್ನಾಟಕ-ಕೇರಳ ಗಡಿಯ (Kerala- Karnataka Border) ಭಾಗವಾದ ಬಾವಲಿ ಚೆಕ್ ಪೋಸ್ಟ್ ಮೂಲಕ  ಪ್ರವೇಶಿಸುವ ಜನರನ್ನು ವೈದ್ಯಕೀಯ ತಂಡವು (Medical Team) ಪರೀಕ್ಷೆಗೆ ಒಳಪಡಿಸುತ್ತಿದೆ. ಜ್ವರ, ಚರ್ಮದ ಮೇಲೆ ಗುಳ್ಳೆಗಳು ಎದ್ದಿರುವುದು ಹಾಗೂ ಇತರೆ ಅನಾರೋಗ್ಯದ ಬಗ್ಗೆ ಪರಿಶೀಲಿಸುತ್ತಿರುವುದಾಗಿ ವರದಿಯಾಗಿದೆ.

ಕೋವಿಡ್‌ ನಡುವೆ ಮತ್ತೊಂದು ಆತಂಕಕ್ಕೆ ಕಾರಣವಾಗಿರುವ ಟೊಮೆಟೊ ಜ್ವರದ ಲಕ್ಷಣಗಳೇನು? ಅದರ ಚಿಕಿತ್ಸೆ ಹೇಗೆ? ಸೂಕ್ತ ಔಷಧ ಲಭ್ಯವಿದೆಯೇ? ರೋಗ ತಡೆಗಟ್ಟುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.

Tomato Flu High Alert in Kerala Karnataka Border dymys mrq
ಮಕ್ಕಳ ಆರೋಗ್ಯ ಪರಿಶೀಲನೆ


ಇದನ್ನೂ ಓದಿ:  Elephant Fight: ಕಾರವಾರದಲ್ಲಿ ಕಾಡಾನೆಗಳ ಕಾದಾಟ; ಗಾಯಗೊಂಡಿದ್ದ ಒಂದು ಆನೆ ಸಾವು

ಚಿಕುನ್ ಗುನ್ಯಾ ರೀತಿಯ ಲಕ್ಷಣಗಳು

ಹಲವು ವರ್ಷಗಳಿಂದ ದೇಶದಾದ್ಯಂತ ಆಗಾಗ್ಗೆ ಬಾಧಿಸುತ್ತಿರುವ 'ಚಿಕುನ್‌ ಗುನ್ಯಾ' ರೀತಿಯ ಕೆಲವು ಲಕ್ಷಣಗಳು ಟೊಮಾಟೊ ಜ್ವರದಲ್ಲೂ ಕಾಣಿಸಿಕೊಂಡಿದೆ. ತೀವ್ರ ಜ್ವರ, ಇಡೀ ದೇಹದಲ್ಲಿ ನೋವು, ಕೀಲುಗಳಲ್ಲಿ ಊತ, ಅತಿಯಾದ ಆಯಾಸದಂತಹ ಲಕ್ಷಣಗಳನ್ನು ಗಮನಿಸಲಾಗಿದೆ.

ಸೋಂಕಿಗೆ ಒಳಗಾಗಿರುವ ಮಕ್ಕಳ ಚರ್ಮದ ಮೇಲೆ ಗುಳ್ಳೆಗಳು ಎದ್ದಿರುವುದು, ಕೆರೆತ ಉಂಟಾಗಿದೆ. ಇದರೊಂದಿಗೆ ಕೆಮ್ಮು, ನೆಗಡಿ, ಹೊಟ್ಟೆ ನೋವು, ವಾಂತಿ ಅಥವಾ ಬೇಧಿ, ಹೊಟ್ಟೆ ತೊಳಸುವಿಕೆ, ಕೈಗಳು, ಮಂಡಿಗಳಲ್ಲಿ ಬಣ್ಣ ಬದಲಾವಣೆ ಉಂಟಾಗುವ ಲಕ್ಷಣಗಳು ಕಾಣಿಸಿಕೊಳ್ಳಬಹುದಾಗಿದೆ. ಈ ಟೊಮೆಟೊ ಜ್ವರಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಆರೋಗ್ಯ ಅಧಿಕಾರಿಗಳು ಈ ಸೋಂಕಿನ ಕುರಿತು ತನಿಖೆ ಕೈಗೊಂಡಿದ್ದಾರೆ.

5 ವರ್ಷಕ್ಕಿಂತ ಕಡಿಮೆ ಮಕ್ಕಳಲ್ಲಿ ಲಕ್ಷಣಗಳು

ಕೇರಳದ ಕೊಲ್ಲಂ ಸೇರಿದಂತೆ ಹಲವು ಭಾಗಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಕೆಮ್ಮೆಂದು‌ ಕೆಮ್ಮುವಂತಿಲ್ಲ. ಇದನ್ನು ತಡೆಗಟ್ಟುವ ಬಗೆ? ಸೋಂಕು ತಡೆಗಟ್ಟಲು ಶುಚಿತ್ವ ಮತ್ತು ಸ್ವಚ್ಚತೆ ಕಾಯ್ದುಕೊಳ್ಳುವುದು ಬಹು ಮುಖ್ಯವಾಗುತ್ತದೆ. ದೇಹಕ್ಕೆ ಅಗತ್ಯ ನೀರಿನ ಅಂಶ ಸೇರುವಂತೆ ಮಾಡಿಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದ ಕೂಡಲೇ ಮಕ್ಕಳ ಪಾಲಕರು ಸ್ಥಳೀಯ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಸೋಂಕಿಗೆ ಒಳಗಾಗಿರುವ ಮಕ್ಕಳಿಗೆ ತುರಿಕೆಯ ಲಕ್ಷಣಗಳು ಹಾಗೂ ಗುಳ್ಳೆಗಳು ಕಾಣಿಸಿಕೊಂಡರೆ, ಕೆರೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ಇಲ್ಲವಾದರೆ, ಇನ್ನಷ್ಟು ತುರಿಕೆ ಹೆಚ್ಚಾಗಿ ವಿಪರೀತಕ್ಕೆ ಹೋಗುವ ಸಾಧ್ಯತೆ ಇರುತ್ತದೆ.

Tomato Flu High Alert in Kerala Karnataka Border dymys mrq
ಚೆಕ್ ಪೋಸ್ಟ್


ಸೋಂಕು ಹರಡುವಿಕೆ ತಡೆಯೋದು ಹೇಗೆ?

ಸೋಂಕಿತ ವ್ಯಕ್ತಿಯೊಂದಿಗೆ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವುದನ್ನು ತಡೆಯಬಹುದಾಗಿದೆ. ಸೋಂಕು ಬಹುಬೇಗ ಹರಡುವುದರಿಂದ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡುವುದನ್ನು ಅನುಸರಿಸಲಾಗುತ್ತಿದೆ.

ಇದನ್ನೂ ಓದಿ:  Omicron: ರಾಜ್ಯಕ್ಕೆ ಕಾಲಿಟ್ಟೇ ಬಿಡ್ತಾ ಕೋವಿಡ್ 4ನೇ ಅಲೆ? ಪತ್ತೆಯಾಯ್ತು ಒಮಿಕ್ರಾನ್ ಹೊಸ ಉಪ ತಳಿ!

ಜ್ವರದಿಂದಾಗುವ ಬಳಲಿಕೆಯ ಪರಿಣಾಮಗಳಿಂದ ಹೊರಬರಲು ರೋಗಿಗಳು ಅಗತ್ಯ ವಿಶ್ರಾಂತಿ ತೆಗೆದು ಕೊಳ್ಳಬೇಕಾಗುತ್ತದೆ. ಸಹಜ ಸೌಂದರ್ಯಕ್ಕೆ ಸರಳ ಸಾಧನಗಳು ವರದಿಗಳ ಪ್ರಕಾರ, ಈ ಜ್ವರಕ್ಕೆ ನಿರ್ದಿಷ್ಟವಾದ ಔಷಧ ಇಲ್ಲ. ಸೂಕ್ತ ಆರೈಕೆ ಮತ್ತು ವಿಶ್ರಾಂತಿಯಿಂದ ರೋಗ ಗುಣಮುಖವಾಗುವುದು ಎನ್ನಲಾಗುತ್ತಿದೆ.
Published by:Mahmadrafik K
First published: