• Home
  • »
  • News
  • »
  • mysuru
  • »
  • Mysuru: ಅಮ್ಮ ಮೃತಪಟ್ಟ ನಂತರ ಮರಿಹುಲಿಗಳ ಮೊದಲ ಬೇಟೆ!

Mysuru: ಅಮ್ಮ ಮೃತಪಟ್ಟ ನಂತರ ಮರಿಹುಲಿಗಳ ಮೊದಲ ಬೇಟೆ!

ಮರಿಹುಲಿಗಳು

ಮರಿಹುಲಿಗಳು

Nagarahole Tiger Reserve: ಈ ಪ್ರದೇಶದಲ್ಲಿ 130 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 30 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿತ್ತು. ಹುಲಿ ಮರಿಗಳನ್ನು ಹುಡುಕಲು ಎರಡು ಕ್ವಾಡ್‌ಕಾಪ್ಟರ್‌ಗಳನ್ನು ಬಳಸಲಾಗಿತ್ತು.

  • News18 Kannada
  • Last Updated :
  • Mysore, India
  • Share this:

    ಮೈಸೂರು: ಖಾಸಗಿ ಜಮೀನಿನಲ್ಲಿ ಹುಲಿಯೊಂದರ ಮೃತದೇಹ ಪತ್ತೆಯಾಗಿ ಮೂರು ದಿನಗಳ ನಂತರ ಕರ್ನಾಟಕ ಅರಣ್ಯ ಇಲಾಖೆ (Karnataka Forest Department) ಮರಿಹುಲಿಗಳನ್ನು ಪತ್ತೆ ಮಾಡಿದೆ. ಮೃತ ಹುಲಿಯ ಎರಡು ಮರಿಗಳು ಅಂತರಸಂತೆ ವ್ಯಾಪ್ತಿಯ ಬಳಿ ಬೇಟೆಯಾಡಿದ ಜಿಂಕೆಯನ್ನು ಸೇವಿಸುತ್ತಿರುವುದು ಬುಧವಾರ ಬೆಳಗ್ಗೆ ಕ್ಯಾಮರಾ ಟ್ರ್ಯಾಪ್‌ನಲ್ಲಿ ಕಂಡುಬಂದಿದೆ. ಮೂರನೇ ಮರಿ ಪತ್ತೆಯಾಗದಿದ್ದರೂ ಮೂರು ಮರಿಗಳು ಜೀವಂತವಾಗಿವೆ ಎಂದು ಅರಣ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.  ಸುಮಾರು 10 ರಿಂದ 11 ತಿಂಗಳ ವಯಸ್ಸಿನ ಎಲ್ಲಾ ಮೂರು ಮರಿಗಳು ಜೀವಂತವಾಗಿದ್ದು, ತಾಯಿ ಸತ್ತಿರುವ ಪ್ರದೇಶದ ಸುತ್ತಮುತ್ತ ಕಾಣಿಸಿಕೊಂಡಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ (Nagarahole Tiger Reserve)  ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ತಿಳಿಸಿದ್ದಾರೆ.


    ಮರಿಗಳು ಜಿಂಕೆಯನ್ನು ಬೇಟೆಯಾಡಿದಂತಿದ್ದು, ಅದನ್ನು ತಿನ್ನುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮರಿಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಅವುಗಳ ಚಲನವಲನದ ಮೇಲೆ ನಿಗಾ ಇಡಲಿದೆ ಎಂದು ಡಿಸಿಎಫ್ ತಿಳಿಸಿದ್ದಾರೆ.


    130 ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
    ತಾಯಿ ಹುಲಿಯ ಮೃತದೇಹ ಪತ್ತೆಯಾದ ನಂತರ ಆರಂಭದಲ್ಲಿ ಮರಿಗಳು ಎಲ್ಲಿಯೂ ಕಾಣದ ಕಾರಣ ಅರಣ್ಯಾಧಿಕಾರಿಗಳು ಆತಂಕಗೊಂಡಿದ್ದರು. ಈ ಪ್ರದೇಶದಲ್ಲಿ 130 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 30 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿತ್ತು. ಹುಲಿ ಮರಿಗಳನ್ನು ಹುಡುಕಲು ಎರಡು ಕ್ವಾಡ್‌ಕಾಪ್ಟರ್‌ಗಳನ್ನು ಬಳಸಲಾಗಿತ್ತು.


    ಹುಲಿ ಸುಮಾರು ಎರಡು ವಾರಗಳ ಹಿಂದೆ ಸಾವನ್ನಪ್ಪಿರಬಹುದು. ಅಂದಿನಿಂದ ಮರಿಗಳು ತಾವಾಗಿಯೇ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಜಿಂಕೆಯ ಮೃತದೇಹದಿಂದ ಸಿಕ್ಕ ಸುಳಿವು!
    ನವೆಂಬರ್ 15 ರಂದು ಅದೇ ಪ್ರದೇಶದಲ್ಲಿ ಜಿಂಕೆಯ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಜಿಂಕೆಯ ದೇಹದ ಸುತ್ತ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಒಂದೇ ದಿನದಲ್ಲಿ ಮಂಗಳವಾರ ಮುಂಜಾನೆ 4.58ಕ್ಕೆ ಮರಿಗಳು ಪತ್ತೆಯಾಗಿವೆ.


    ಇದನ್ನೂ ಓದಿ: Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ


    ಈ ಮೊದಲು ಸೆಪ್ಟೆಂಬರ್​ನಲ್ಲಿ ಪತ್ತೆಯಾಗಿದ್ದ ಹುಲಿ ಕುಟುಂಬ
    ತಾಯಿ ಹುಲಿ ಮೃತಪಡುವ ಮೊದಲು ಸೆಪ್ಟೆಂಬರ್‌ನಲ್ಲಿ ತಾಯಿ ಮತ್ತು ಮರಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಆ ಮಾಹಿತಿ ಆಧರಿಸಿ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಸುಮಾರು 260 ಮೀಟರ್ ದೂರದಲ್ಲಿ ತಾಯಿ ಹುಲಿಯ ಮೃತದೇಹ ಪತ್ತೆಯಾದ ಬಳಿಕ ಶೋಧ ನಡೆಸಲಾಯಿತು.


    ಇದನ್ನೂ ಓದಿ: Jobs In Hubballi: ಹುಬ್ಬಳ್ಳಿಯಿಂದಲೇ ದೇಶ ರಕ್ಷಿಸೋಕೆ ಚಾನ್ಸ್! ಉತ್ತರ ಕರ್ನಾಟಕ ಜನರಿಗೆ ಸುವರ್ಣಾವಕಾಶ


    ಇದು ಹುಲಿಮರಿಗಳ ಬೆಳವಣಿಗೆ ಸೂಚನೆ
    ಹುಲಿಮರಿಗಳು ಸ್ವಯಂಪ್ರೇರಣೆಯಿಂದ ಬೇಟೆಯಾಡಿ ತಿನ್ನುವುದು ಅವುಗಳ ಬೆಳವಣಿಗೆಯ ಸೂಚನೆಯಾಗಿದೆ. ಕಾಡಿನಲ್ಲಿ ಅವುಗಳ ಉಳಿವಿಗಾಗಿ ಈ ಪ್ರವೃತ್ತಿ ಸಾಕು ಎಂದು ಅಧಿಕಾರಿ ಹೇಳಿದರು. ಈ ಹುಲಿಮರಿಗಳು ಮೀಸಲು ಅರಣ್ಯ ಪ್ರದೇಶದ ಹೊರಗೆ ವಾಸವಿರುವುದರಿಂದ ಅಧಿಕಾರಿಗಳು ಮರಿಗಳನ್ನು ದೊಡ್ಡದಾಗುವವರೆಗೆ ರಕ್ಷಿಸಲು ಮತ್ತು ಅವು ಜನವಸತಿಯತ್ತ ಸುಳಿಯದಂತೆ ತಡೆಯಲು ವಿಶೇಷ ಕ್ರಮ ಕೈಗೊಂಡಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: