Mysuru: ಮಂಟಪದಲ್ಲಿ ತಾಯಿಯ ಪಕ್ಕ ತಂದೆಯ ಮೇಣದ ಪ್ರತಿಮೆ ಇರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೈದ್ಯ

ತಂದೆಯ ಪ್ರತಿರೂಪದ ಸಿಲಿಕಾನ್ ತಂತ್ರಜ್ಞಾನದ ಪ್ರತಿಮೆ ಮಾಡಿಸಿ, ಅದಕ್ಕೆ ಅಲಂಕಾರ ಮಾಡಿಸಿ ಪ್ಯಾಂಟು, ಕೋಟು ತೊಡಿಸಿ ಕಲ್ಯಾಣ ಮಂಟಪಕ್ಕೆ ತಂದು ಆ ಪ್ರತಿಮೆಯನ್ನು ಕುರ್ಚಿ ಮೇಲೆ ಪ್ರತಿಷ್ಠಾಪಿಸಿ ಮದುವೆಯಾಗಿದ್ದಾರೆ.

ತಂದೆಯ ಮೇಣದ ಪ್ರತಿಮೆ ಜೊತೆ ಫೋಟೋ

ತಂದೆಯ ಮೇಣದ ಪ್ರತಿಮೆ ಜೊತೆ ಫೋಟೋ

  • Share this:
ಮೈಸೂರು (ಮೇ 8): ಕೋವಿಡ್ (Covid19) ಮಹಾಮಾರಿ ಮನೆ ಯಜಮಾನನ್ನ  ಬಲಿ ಪಡೆಯಿತೇ ಹೊರತು ಮನೆಯವರಿಗೆ ಅವರ ಮೇಲಿದ್ದ ಪ್ರೀತಿಯನ್ನು (Love) ಕಿತ್ತುಕೊಳ್ಳೋಕೆ ಆಗಲಿಲ್ಲ. ಕೊರೊನಾ ಮಾರಿಗೆ ತಂದೆ ತೀರಿಕೊಂಡರೂ ಮಕ್ಕಳು (Children) ಮಾತ್ರ ಅವರನ್ನು ಪ್ರತಿಮೆ (Statue) ರೂಪದಲ್ಲಿ ಜೀವಂತವಾಗಿ ಇರಿಸುವ ಕೆಲಸ ಮಾಡಿದ್ದಾರೆ. ಮಕ್ಕಳ ಮದುವೆಗೆ ಮುಂದೆ ನಿಂತು ಧಾರೆ ಎರೆಯಬೇಕಾದ ತಂದೆ ಕಾಲವಾದರೆ ಏನಂತೆ ಮೇಣದಲ್ಲಿ  ತಂದೆಯ ಪ್ರತಿರೂಪ ಸೃಷ್ಟಿಸಿ ಅದರ ಮುಂದೆ ಸಪ್ತಪದಿ (Saptapadi) ತುಳಿದಿದ್ದಾರೆ. ಇದು ಅವ್ರ ಮಕ್ಕಳು ತಂದೆಯ ಮೇಲಿಟ್ಟಿರೋ  ಪ್ರೀತಿಯನ್ನು ತೋರಿಸುತ್ತಿದೆ. 

ವಿಶಿಷ್ಟ ಮದುವೆಗೆ ಸಾಕ್ಷಿಯಾದ ನಂಜನಗೂಡು

ಹೀಗೊಂದು ವಿಶಿಷ್ಟ ಮದುವೆಗೆ ಸಾಕ್ಷಿಯಾಗಿದ್ದು, ಮೈಸೂರು ಜಿಲ್ಲೆಯ ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾದ ನಂಜನಗೂಡು.  ಪ್ರತಿಮೆ ಮುಂದೆ ಫ್ಯಾಮಿಲಿ  ಪಿಕ್ ತಮ್ಮೊಟ್ಟಿಗೆ ಇಲ್ಲ ಅಂದ್ರೂ ತಂದೆಯನ್ನ ಮೇಣದ ಪ್ರತಿಮೆ ಮುಂಭಾಗ ಪುತ್ರನ ವಿವಾಹ. ಇಂತಹಾ ಅಪರೂಪದ ಮದುವೆ ಸಾಕ್ಷಿ  ಆಗಿದ್ದು ಮೈಸೂರು ಜಿಲ್ಲೆಯ ದಕ್ಷಿಣ ಕಾಶಿ ನಂಜನಗೂಡು. ತಂದೆಯನ್ನು ಕಳೆದು ಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಗ್ರಾಮದ  ಡಾ. ಯತೀಶ್ ಹಾಗೂ ನಂಜನಗೂಡು ತಾಲ್ಲೂಕಿನ ಮಲ್ಕುಂಡಿಯ ಶಿವಕುಮಾರ್ ಹಾಗೂ ಭ್ರಮರಾಂಬ ಅವರ ಪುತ್ರಿ ಡಾ.ಅಪೂರ್ವ ಮದುವೆಗೆ  ಸಾಕ್ಷಿಯಾಗಿದ್ದು ಯತೀಶ್​ ತಂದೆ ರಮೇಶ್​ರ ಮೇಣದ ಪ್ರತಿಮೆ.ಹೊಸ ತಂತ್ರಜ್ಞಾನ ಮೂಲಕ ಪ್ರತಿಮೆ ನಿರ್ಮಾಣ

ಕಳೆದ ವರ್ಷ ಕೊರೊನಾದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಡಾ. ಯತೀಶರಿಗೆ ತಂದೆಯ ಕಣ್ಣ ಮುಂದೆಯೇ, ಮದುವೆಯಾಗುವ ಹಂಬಲವಿತ್ತಂತೆ. ಆದರೆ ತಂದೆ ರಮೇಶ ಕೊರೊನಾದಿಂದ ಅಸುನೀಗಿದ್ದರು. ತಂದೆ ಇಲ್ಲದೆ ಮದುವೆಯಾಗುವುದು ಹೇಗೆ ಎಂಬ ಜಿಜ್ಞಾಸೆಗೆ ಬಿದ್ದ ಯತೀಶ್‌ಗೆ ನೆರವಾಗಿದ್ದು ಹೊಸ ತಂತ್ರಜ್ಞಾನ. ತಂದೆಯ ಪ್ರತಿರೂಪದ ಸಿಲಿಕಾನ್ ತಂತ್ರಜ್ಞಾನದ ಪ್ರತಿಮೆ ಮಾಡಿಸಿ, ಅದಕ್ಕೆ ಅಲಂಕಾರ ಮಾಡಿಸಿ ಪ್ಯಾಂಟು, ಕೋಟು ತೊಡಿಸಿ ಕಲ್ಯಾಣ ಮಂಟಪಕ್ಕೆ ತಂದು ಆ ಪ್ರತಿಮೆಯನ್ನು ಕುರ್ಚಿ ಮೇಲೆ ಪ್ರತಿಷ್ಠಾಪಿಸಿ ಪಕ್ಕದ ಕುರ್ಚಿಯಲ್ಲಿ ತಾಯಿ ಗಾಯತ್ರಿಯವರನ್ನು ಸಹ ಕುಳ್ಳಿರಿಸಿಕೊಂಡು ಬಳಿಕ ಮದುವೆಯಾಗಿದ್ದಾರೆ.

ಇದನ್ನೂ ಓದಿ: Pramod Mutalik: ಬಿಜೆಪಿ ಬಡ್ಡಿ ಮಕ್ಕಳಿಗೆ ದುಡ್ಡಿನದ್ದೇ ಚಿಂತೆ; ಮಠಾಧೀಶರನ್ನ ಭಿಕ್ಷುಕರು ಎಂದ ಮುತಾಲಿಕ್

ಪ್ರತಿಮೆ ನಿರ್ಮಿಸುವವರಿಗಾಗಿ ಹುಡುಕಾಟ

ರಾತ್ರಿ ಶಾಸ್ತ್ರ ಮುಗಿಸಿ ಹಸೆಮಣೆ ಏರುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು. ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪಕ್ಕೆ ಬಂದವರೆಲ್ಲರೂ ಮೇಣದ ಪ್ರತಿಮೆ ಕಂಡು ಅಚ್ಚರಿಗೊಂಡರು. ಯತೀಶ್ ಅನೇಕ ಕಡೆ ಪ್ರತಿಮೆ ಮಾಡಿಸಲು ಹುಡುಕಾಟ ನಡೆಸಿ ಕೊನೆಗೆ ಬೆಂಗಳೂರಿನಲ್ಲಿ ಸಿಲಿಕಾನ್‌ ತಂತ್ರಜ್ಞಾನ ಅಳಡಿಸಿ ತಂದೆಯ ಗೊಂಬೆ ಮಾಡಿಸಿದ್ದಾರೆ.

5 ಲಕ್ಷ ಖರ್ಚು ಮಾಡಿ ಪ್ರತಿಮೆ ನಿರ್ಮಾಣ

ಸುಮಾರು 5 ಲಕ್ಷ ಖರ್ಚು ಮಾಡಿ ತಯಾರಿಸಿರುವ ಪ್ರತಿಮೆ 10 ವರ್ಷ ಇದೇ ಸ್ಥಿತಿಯಲ್ಲಿರುತ್ತದೆ. ಒಂದೆಡೆ ಕೊರೊನಾ ಮಹಾ ಮಾರಿಯಿಂದ ತಂದೆ ಕಳೆದು ಕೊಂಡ ದುಖಃ ಇದೆ. ಮದುವೆ ಎಂಬ ಪ್ರಮುಖ ಘಟ್ಟದಲ್ಲಿ ಮನೆಯ ಯಜಮಾನ ಇಲ್ಲ ಎನ್ನುವ ನೋವೂ ಇದೆ. ಇವುಗಳ ನಡುವೆ ಅವರ ಪ್ರತಿಬಿಂಬದ ಮುಂದೆ ಹೊಸ ದಾಂಪತ್ಯಕ್ಕೆ ಕಾಲಿಟ್ಟ ಸಮಾಧಾನ ಮಗನಿಗೆ ಇದೆ.

ಇದನ್ನೂ ಓದಿ: PSI Recruitment Scam: ಹಾಸನದಲ್ಲಿ ತಂದೆ-ಮಗ ಸೇರಿ ಮೂವರ ಬಂಧನ; ಒಂದೇ ಕುಟುಂಬದ ಮೂವರು ಪೊಲೀಸ್ ಅಧಿಕಾರಿಗಳ ವಿಚಾರಣೆ

ಒಟ್ಟಿನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿ ಎಲ್ಲರ ಆಶೀರ್ವಾದ ಪಡೆದ ಮದುವೆ ಆಗೋದು ಕಾಮನ್ ಆದ್ರೆ ತಂದೆಯ ಪ್ರತಿಮೆಯ ಎದುರು ಮದುವೆಯಾಗಿದ್ದು ಒಂದು ವಿಶೇಷವೇ ಸರಿ. ಇನ್ನು ಫ್ಯಾಮಿಲಿ ಫೋಟೋದಲ್ಲಿ ತಂದೆ ಮಿಸ್​ ಆಗೋದು ಬೇಡ ಎಂದು ಮಕ್ಕಳು ಮಾಡಿದ  ಪ್ರಯತ್ನ ನಿಜಕ್ಕೂ ಮೆಚ್ಚುವಂತಹದ್ದು ಮದುವೆಯಲ್ಲಿ ಅಮ್ಮ, ಅಪ್ಪ ಕುಳಿತು ಫುಲ್​ ಫ್ಯಾಮಿಲಿ ಫೋಟೋ ತೆಗೆದುಕೊಂಡಿದ್ದು ಎಲ್ಲರೂ ಖುಷ್ ಆಗಿದ್ದಾರೆ.
Published by:Pavana HS
First published: