Nagarahole Tiger: ಅರರೆ, ಹುಲಿರಾಯ! ವೈರಲ್ ಆಗ್ತಿದೆ ನಾಗರಹೊಳೆಯ ವಿಡಿಯೋ

X
ವೈರಲ್ ವಿಡಿಯೋ ನೋಡಿ

"ವೈರಲ್ ವಿಡಿಯೋ ನೋಡಿ"

ಮಳೆ ಜೋರಾಗಿದ್ರಿಂದ ಕಾಡಿನ ಮಧ್ಯ ಭಾಗದಲ್ಲಿರೋ ಪ್ರಾಣಿಗಳು ಕಾಡಂಚಿನ ಭಾಗಗಳಿಗೆ ಬರುತ್ತಿವೆ. ಅಲ್ಲಿ ಹಾಯಾಗಿ ಓಡಾಡುತ್ತ, ನೋಡುಗರ ಕಣ್ಮನ ಸೆಳೆಯುತ್ತಿದೆ.

 • Share this:

  ಅರೆರೆ… ಹುಲಿರಾಯ, ಏನೋ ಇದು ನಿನ್ ಅವತಾರ.. ಹಾಯಾಗಿ ನೆಲದ್ಮೇಲೆ ಮೇಲೆ ಬಿದ್ದು ಹೊರಳಾಡ್ತಿದ್ದೀಯಲ್ವ? ರಸ್ತೆಗೆ ಅಡ್ಡಲಾಗಿ ಮಲಗಿ ಯಾರೂ ದಾಟಿ ಹೋಗದಂತೆ ಮಾಡಿದ್ದೀಯ… ನಿನ್ ಈ ಜಾಲಿ ಮೂಡ್ ನೋಡ್ತಿದ್ರೋ ನಿನ್ನನ್ನು ಮುದ್ದು ಮಾಡ್ಬೇಕು ಅನ್ಸುತ್ತೆ.. ಹಾ… ನೀನು ನಿಜಕ್ಕೂ ವ್ಯಾಘ್ರನಾ? ಅಥವಾ ಶಾಂತರೂಪಿನಾ…? ಅಂತಾ ಕೇಳ್ಬೇಕು ಅನ್ಸುತ್ತೆ.. ಅಷ್ಟಕ್ಕೂ ನಿನ್ ಈ ಖುಷಿಗೆ ಕಾರಣ ಆದ್ರೂ ಏನು ಅಂತೀಯಾ..? ಹೀಗಂತ ಸಫಾರಿಗೆ ತೆರಳಿರೋ ಪ್ರವಾಸಿಗರು ಹುಲಿರಾಯನಿಗೆ ಕೇಳುತ್ತಲೇ ಇದ್ದಾರೆ..


  ಅಂದಹಾಗೆ ಈ ದೃಶ್ಯ ಈಗ ಕಾಮನ್ ಆಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಬಹುದಾಗಿದೆ. ಮೈಸೂರಿಗೆ ತೆರಳಿರೋರು ಪ್ರತಿಯೊಬ್ರು ನಾಗರಹೊಳೆ ಸಫಾರಿಗೆ ತೆರಳಲೇಬೇಕು.


  ಆ ದೃಶ್ಯಗಳು ಚೆಂದವೋ ಚೆಂದ
  ಅಲ್ಲಿ ಈ ದೃಶ್ಯಗಳನ್ನ ಕಣ್ತುಂಬಿಸಿಕೊಳ್ಬೇಕು. ಹುಲಿರಾಯನಿಂದ ಹಿಡಿದು ಸಣ್ಣ ಪುಟ್ಟ ಪ್ರಾಣಿಗಳು ಕೂಡಾ ನಮ್ಮ ಸಫಾರಿ ಹೋಗೋ ಗಾಡಿಗೆ ಅಡ್ಡಲಾಗಿ ರಸ್ತೆ ದಾಟೋ ಆ ದೃಶ್ಯಗಳು ಚೆಂದವೋ ಚೆಂದ.


  ಇದನ್ನೂ ಓದಿ: Bengaluru Lalbagh Flower Show: ಲಾಲ್‌‌ಬಾಗಲ್ಲಿ ನಮ್ಮ ಅಪ್ಪು! ನೀವೇ ವಿಡಿಯೋ ನೋಡಿ!


  ಹಾಯಾಗಿ ಓಡಾಟ
  ಮಳೆ ಜೋರಾಗಿದ್ರಿಂದ ಕಾಡಿನ ಮಧ್ಯ ಭಾಗದಲ್ಲಿರೋ ಪ್ರಾಣಿಗಳು ಕಾಡಂಚಿನ ಭಾಗಗಳಿಗೆ ಬರುತ್ತಿವೆ. ಅಲ್ಲಿ ಹಾಯಾಗಿ ಓಡಾಡುತ್ತ, ನೋಡುಗರ ಕಣ್ಮನ ಸೆಳೆಯುತ್ತಿದೆ.


  ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!


  ನೋಡುಗರ ಕಣ್ಣುಗಳಿಗಂತೂ ಹಬ್ಬವೋ ಹಬ್ಬ.. ಹುಲಿರಾಯನ ಅವತಾರಗಳಂತೂ ಪ್ರತಿಯೊಬ್ಬರು ಸದ್ದು ಗದ್ದಲ ಮಾಡ್ದೇ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವಂತದ್ದೇ.. ಹಾಗಿದ್ರೆ, ಇನ್ನೇಕೆ ತಡ ಈ ಮಳೆಗಾಲದಲ್ಲಿ ನಿಮ್ ಪ್ರಯಾಣವು ನಾಗರಹೊಳೆ ಕಡೆ ಇರಲಿ..

  Published by:guruganesh bhat
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು