Mysuru Top 5 News: ಮೂರು ವಿಶೇಷ ರೈಲುಗಳು, ಯುವ ದಸರಾಗೆ ಸುದೀಪ್; ಮೈಸೂರಿನ ಟಾಪ್ ನ್ಯೂಸ್​ಗಳು

ನಾಡಹಬ್ಬ ಹಿನ್ನೆಲೆ ಆಯೋಜಿಸಲಾಗುವ ಯುವ ದಸರಾ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಸೆ.26ರಂದು ರಾಷ್ಟ್ರಪತಿಗಳು ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಮೈಸೂರು ದಸರಾಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.ರಾಷ್ಟ್ರಪತಿಗಳ ಸಂಚರಿಸುವ ಮಾರ್ಗದಲ್ಲಿ ವಾಹನ ಸಂಚಾರ ಬಂದ್

ಈ ಬಾರಿಯ ಮೈಸೂರು ದಸರಾಗೆ (Mysuru Dasara 2022) ಚಾಲನೆ ನೀಡಲು ಸಾಂಸ್ಕೃತಿಕ ನಗರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murumu) ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಪೊಲೀಸ್ ಇಲಾಖೆ (Police Department) ಬಿಗಿಭದ್ರತೆಯತ್ತ ಕಾರ್ಯೋನ್ಮುಖವಾಗಿದೆ. ಸೆಪ್ಟೆಂಬರ್ 26ರಂದು ಮೈಸೂರಿಗೆ ಆಗಮಿಸುವ ರಾಷ್ಟ್ರಪತಿಗಳು ವಿಮಾನ ನಿಲ್ದಾಣದಿಂದ (Mysuru Airport) ನೇರವಾಗಿ ಚಾಮುಂಡೇಶ್ವರಿ ಬೆಟ್ಟಕ್ಕೆ (Chamundeshwari Hill) ತೆರಳಿಯ ತಾಯಿಯ ದರ್ಶನ ಪಡೆಯಲಿದ್ದಾರೆ. ಅಂದು ಬೆಳಗ್ಗೆ ಆಹ್ವಾನಿತರನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಜನರಿಗೆ ಬೆಟ್ಟಕ್ಕೆ ಪ್ರೇವಶ ನಿರ್ಬಂಧಿಸಲಾಗಿದೆ. ಇದರ ಜೊತೆ ರಾಷ್ಟ್ರಪತಿಗಳು ಪ್ರಯಾಣಿಸುವ ಮಾರ್ಗ ಸಹ ಕೆಲ ಸಮಯ ಬಂದ್ ಆಗಲಿದೆ.

ರಾಷ್ಟ್ರಪತಿಗಳು ಬಂಡೀಪಾಳ್ಯ, ಗುಂಡೂರಾವ್‌ನಗರ, ಎಲೆತೋಟ, ರೇಸ್‌ಕೋರ್ಸ್ ರಸ್ತೆ, ಕುರುಬಾರಹಳ್ಳಿ ಸರ್ಕಲ್ ಮಾರ್ಗವಾಗಿ ಬೆಟ್ಟಕ್ಕೆ ತೆರಳಲಿದ್ದಾರೆ. ಈಗಾಗಲೇ ಪೊಲೀಸರು ರಾಷ್ಟ್ರಪತಿಗಳು ತೆರಳುವ ಮಾರ್ಗದ ರೂಟ್ ಮ್ಯಾಪ್ ಸಿದ್ಧಪಡಿಸಲಿದ್ದಾರೆ. ಮತ್ತೆ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ತೆರಳುವವರೆ ಬೇರೆ ಮಾರ್ಗಗಳಲ್ಲಿ ವಾಹನಕ್ಕೆ ಸಂಚಾರಕ್ಕೆ ನಿರ್ಬಂಧ ಹಾಕಲಾಗುತ್ತದೆ. ಈ ವೇಳೆ ಸುಮಾರು 25 ಅಧಿಕಾರಿಗಳು ಮಫ್ತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

mysuru today news update 22 september 2022 mrq
ರಾಷ್ಟ್ರಪತಿಗಳಿಗೆ ಆಹ್ವಾನ


2.ಮೈಸೂರಿಗೆ ಆಗಮಿಸುತ್ತಿರುವ ರಾಷ್ಟ್ರಪತಿಗಳ ಕಾರ್ಯಕ್ರಮ ಪಟ್ಟಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೈಸೂರು ದಸರಾಗೆ ಚಾಲನೆ ನೀಡಲು ಆಗಮಿಸಲಿದ್ದಾರೆ. ಈ ಸಂಬಂಧ ರಾಷ್ಟ್ರಪತಿಗಳ ಕಾರ್ಯಕ್ರಮ ಪಟ್ಟಿ ಬಿಡುಗಡೆಯಾಗಿದೆ. ಸೆಪ್ಟೆಂಬರ್ 26ರ ಬೆಳಗ್ಗೆ 6.15ಕ್ಕೆ ದೆಹಲಿಯಿಂದ ಹೊರಟು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 9 ಗಂಟೆಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ:  HD Deve Gowda Health: ಹೇಗಿದೆ ದೇವೇಗೌಡರ ಆರೋಗ್ಯ? ಅವರೇ ಕೊಟ್ರು ಅಪ್​ಡೇಟ್

ಇಲ್ಲಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಬೆಳಗ್ಗೆ 10 ಗಂಟೆಗೆ ದಸರಾ ಉದ್ಘಾಟಿಸಿ, ಚಾಮುಂಡೇಶ್ವರಿಗೆ ತಾಯಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಮೈಸೂರು ಪ್ರವಾಸದ ಬಳಿಕ ದ್ರೌಪದಿ ಮುರ್ಮು ಹುಬ್ಬಳ್ಳಿಗೆ ತೆರಳಲಿದ್ದಾರೆ. ಬೆಳಗ್ಗೆ 10.45ಕ್ಕೆ ಚಾಮುಂಡಿ ಬೆಟ್ಟದಿಂದ ಹೊರಟು, 11.15ಕ್ಕೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.

mysore chamundeshwari temple vardhanthotsava in chamundi hill

3.ರಾಷ್ಟ್ರಪತಿಗಳನ್ನು ಆಹ್ವಾನಿಸಿದ ಸಚಿವರು, ಸಂಸದರು

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಸಚಿವ ಎಸ್.ಟಿ.ಸೋಮಶೇಖರ್, ಶಶಿಕಲಾ ಜೊಲ್ಲೆ ಮತ್ತು ಸಂಸದರಾದ ಪ್ರತಾಪ್ ಸಿಂಹ, ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ಮಹಾಪೌರ ಶಿವಕುಮಾರ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

4.ಮೈಸೂರು ದಸರೆಗೆ ಮೂರು ವಿಶೇಷ ರೈಲುಗಳು

ಕೋವಿಡ್-19 ಕರಿ ಛಾಯೆ ಹಿನ್ನೆಲೆ ಎರಡು ವರ್ಷ ಸರಳವಾಗಿ ದಸರಾ ಆಚರಿಸಲಾಗಿತ್ತು. ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ದಸರಾ ಆಚರಣೆಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ದಸರಾ ಹಿನ್ನೆಲೆ ಮೈಸೂರು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಈ ಹಿನ್ನೆಲೆ ಪ್ರವಾಸಿಗರಿಗಾಗಿ ರೈಲ್ವೇ ಇಲಾಖೆ ಮೂರು ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ಕಲ್ಪಿಸಿದೆ. ರೈಲುಗಳ ಸಂಖ್ಯೆ ಹೀಗಿದೆ 06215, 07302 ಮತ್ತು 06248

ಇದನ್ನೂ ಓದಿ:  Explained: ಏನಿದು PFI ಸಂಘಟನೆ? ಇದರ ಹಿಂದೆ ಇರೋದಾದರೂ ಯಾರು?

5.ಯುವ ದಸರಾ ವೇಳಾಪಟ್ಟಿ ಬಿಡುಗಡೆ

ಯುವ ದಸರಾ ವೇಳಾಪಟ್ಟಿ ಬಿಡುಗಡೆಯಾಗಿದೆ. ನಟ ಸುದೀಪ್ ಯುವ ದಸರಾಗೆ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸೆ.27ರಿಂದ ಅ.3ರವರೆಗೆ ಯುವ ದಸರಾ ನಡೆಯಲಿದೆ. ಬಾಲಿವುಡ್ ಗಾಯಕರಾದ ಅಮಿತ್ ತ್ರಿವೇದಿ, ಸುನಿಧಿ ಚೌಹಾನ್, ಮಂಗ್ಲಿ, ವಿಜಯ ಪ್ರಕಾಶ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಪಟ್ಟಿ ಹೀಗಿದೆ.

kiccha sudeep special interview talks about his fans and films
ಕಿಚ್ಚ ಸುದೀಪ್


1. ಕಿಚ್ಚ ಸುದೀಪ್ ಅವರಿಂದ ಉದ್ಘಾಟನೆ, ಶ್ರೀಧರ್ ಜೈನ್ ನೃತ್ಯ, ರಘು ದೀಕ್ಷಿತ್,
ಮಂಗ್ಲಿ ಗಾಯನ
2.ಅಪ್ಪು ನಮನ- ಗುರುಕಿರಣ್, ವಿಜಯ ಪ್ರಕಾಶ್, ಕುನಾಲ್ ಗಾಂಜಾವಾಲ ಗಾಯನ
3.ಲೇಷರ್ ಶೋ, ಸಿಗ್ನೇಚರ್ ಗ್ರೂಪ್ ನೃತ್ಯ, ಕನ್ನಿಕಾ ಕಪೂರ್, ಅಸೆಂಟ್ ಬ್ಯಾಂಡ್
4..ಸ್ಯಾಂಡಲ್‌ವುಡ್ ನೈಟ್ಸ್: ಕನ್ನಡ ಚಲನಚಿತ್ರ ನಟ- ನಟಿಯರು ಭಾಗಿ
5.ಶಮಿತಾ ಮಲ್ನಾಡ್, ನೃತ್ಯ ರೂಪಕ
6.ಪವನ್ ಡ್ಯಾನ್ಸರ್, ಹರ್ಷಿಕಾ ಪೂಣಚ್ಚ& ವಿಜಯ ರಾಘವೇಂದ್ರ, ಅಮಿತ್ ತ್ರಿವೇದಿ ಗಾಯನ
7.ಸುಪ್ರಿಯಾ ರಾಮ್ ಮಹಿಳಾ ಬ್ಯಾಂಡ್, ಫ್ಯಾಶನ್ ಶೋ, ಸುನಿಧಿ ಚೌಹಾನ್ ಗಾಯನ
Published by:Mahmadrafik K
First published: