Mysuru Rangayana: ನಟ ನಟಿಯರಾಗೋಕೆ ಇಲ್ಲಿದೆ ಸುವರ್ಣಾವಕಾಶ! ತಕ್ಷಣ ಅರ್ಜಿ ಹಾಕಿ

ಕಲಾವಿದರು (ಸಾಂದರ್ಭಿಕ ಚಿತ್ರ)

ಕಲಾವಿದರು (ಸಾಂದರ್ಭಿಕ ಚಿತ್ರ)

ʼರಂಗಾಯಣʼ ಸಂಸ್ಥೆಯು ಒಂದು ವರ್ಷದ ರಂಗಶಿಕ್ಷಣ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

  • News18
  • 2-MIN READ
  • Last Updated :
  • Gulbarga, India
  • Share this:

ರಂಗ ತರಬೇತಿ ಅಂದ್ರೇನೆ ಮೈಸೂರು ʼರಂಗಾಯಣʼ ಬಹಳ ಹೆಸರುವಾಸಿ. ಅದೆಷ್ಟೋ ವೃತ್ತಿಪರ ಕಲಾವಿದರನ್ನು ನಾಟಕ, ಸಿನೆಮಾಗಳಿಗೆ ನೀಡಿದ ಖ್ಯಾತಿ ಈ ಸಂಸ್ಥೆಗಿದೆ. ಇದೀಗ ʼರಂಗಾಯಣʼ ಸಂಸ್ಥೆಯು ಒಂದು ವರ್ಷದ ರಂಗಶಿಕ್ಷಣ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು 2023-24ನೇ ಸಾಲಿಗೆ ಒಂದು ವರ್ಷದ ರಂಗ ಶಿಕ್ಷಣ ತರಬೇತಿಗೆ (ಡಿಪ್ಲೋಮಾ) ಪ್ರವೇಶ ಪಡೆಯುವ ಮೂಲಕ ಈ ಅವಕಾಶವನ್ನು ಪಡೆಯಬಹುದಾಗಿದೆ. ಹಾಗಿದ್ರೆ ಮೈಸೂರು ರಂಗಾಯಣದಲ್ಲಿ (Mysuru Rangayana) ಪ್ರವೇಶ ಪಡೆಯಬೇಕಾದರೆ ಇರುವ ನಿಬಂಧನೆಗಳು ಏನು ಅನ್ನೋದನ್ನ ಇಲ್ಲಿದೆ ನೋಡಿ.

ಸಂಸ್ಥೆಯ ಹೆಸರುಮೈಸೂರು ರಂಗಾಯಣ
ವಿದ್ಯಾರ್ಹತೆಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ
ಅರ್ಜಿ ಸಲ್ಲಿಕೆ ಹೇಗೆ?ರಂಗಾಯಣ ವೆಬ್‌ಸೈಟ್
ಕೊನೆಯ ದಿನಾಂಕ2023ರ ಜೂನ್ 5ರ ಸಂಜೆ 5.30
ಹೆಚ್ಚಿನ ಮಾಹಿತಿಗಾಗಿ0821-2512639,  9448938661, 9148827720, 8867514311

ಯಾರು ಅರ್ಜಿ ಸಲ್ಲಿಸಬಹುದು?
ಈ ರಂಗ ತರಬೇತಿ ಕೋರ್ಸ್​ಗೆ ಸೇರಬಯಸುವ ಅಭ್ಯರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವದರ ಜೊತೆಗೆ ಪ್ರತೀ ತಿಂಗಳು  5,000 ರೂ.ಗಳ ವಿದ್ಯಾರ್ಥಿ ವೇತನ ಪಾವತಿಸಲಾಗುವುದು.


ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಅಭ್ಯರ್ಥಿಗಳು ರಂಗಾಯಣ ವೆಬ್‌ಸೈಟ್​ನಿಂದ ನಿಗದಿತ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ವೆಬ್​ಸೈಟ್​ಗಾಗಿ ಇಲ್ಲಿ ಕ್ಲಿಕ್ ಮಾಡಿ. ಅಥವಾ ರಂಗಾಯಣದ ಕಚೇರಿಯಲ್ಲಿ ಕೆಲಸದ ದಿನಗಳ ಕಚೇರಿ ಅವಧಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.


ಕೊನೆಯ ದಿನಾಂಕ
ಅರ್ಜಿ ಸಲ್ಲಿಸಲು 2023ರ ಜೂನ್ 5ರ ಸಂಜೆ 5.30 ಗಂಟೆ ಕೊನೆಯ ಸಮಯವಾಗಿರುತ್ತದೆ. ತದನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.


ಇದನ್ನೂ ಓದಿ: Bengaluru Mysuru Expressway: ಪ್ರಯಾಣಿಕರಿಗೆ ಮಹತ್ವದ ಸೂಚನೆ


ಅರ್ಜಿಯನ್ನು ಎಲ್ಲಿಗೆ ಸಲ್ಲಿಸಬೇಕು?
ಭರ್ತಿ ಮಾಡಿದ ಅರ್ಜಿಯನ್ನು ಉಪನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು ಈ ವಿಳಾಸಕ್ಕೆ ತಲುಪುವಂತೆ ಅಂಚೆ ಮೂಲಕ ಕಳುಹಿಸಬೇಕು. ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗಳಿಗೆ ಪತ್ರ ಮೂಲಕ ತಿಳಿಸಲಾಗುವುದು.




ಇದನ್ನೂ ಓದಿ: Mysuru Pak History: ಕಾಕಾಸುರ ಮಾದಪ್ಪ ಭಟ್ಟರ ನಳಪಾಕ!


ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ಅರ್ಜಿ ಶುಲ್ಕ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2512639, ಮೊಬೈಲ್ ಸಂಖ್ಯೆ 9448938661,9148827720, 8867514311 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

top videos
    First published: