• Home
 • »
 • News
 • »
 • mysuru
 • »
 • Yuva Dasara Mysuru: ಯುವ ದಸರಾ ವಿಶೇಷಗಳಿವು! ಕಾರ್ಯಕ್ರಮ ಲಿಸ್ಟ್ ಇಲ್ಲಿದೆ

Yuva Dasara Mysuru: ಯುವ ದಸರಾ ವಿಶೇಷಗಳಿವು! ಕಾರ್ಯಕ್ರಮ ಲಿಸ್ಟ್ ಇಲ್ಲಿದೆ

ಯುವ ದಸರಾ

ಯುವ ದಸರಾ

ಇತ್ತೀಚೆಗೆ ಅಗಲಿದ ಕನ್ನಡ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪು ಇಲ್ಲೂ ಮೇಳೈಸಲಿದೆ. ಮೊದಲನೆ ದಿವಸದ ಕಾರ್ಯಕ್ರಮದಲ್ಲಿಯೇ "ಅಪ್ಪು ನಮನ" ನಡೆಯಲಿದೆ.

 • Share this:

  ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಈಗಾಗಲೇ ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು (President Draupadi Murmu) ಅವರು ದಸರಾ ಹಬ್ಬಕ್ಕೆ (Mysuru Dasara) ಚಾಲನೆ ನೀಡಿದ್ದಾರೆ. ಇದರೊಂದಿಗೆ ಹತ್ತು ಹಲವು ಕಾರ್ಯಕ್ರಮಗಳಿಗೂ ಹಸಿರು ನಿಶಾನೆ ಸಿಕ್ಕಂತಾಗಿದೆ. ನಾಡಹಬ್ಬದ ಹಿನ್ನೆಲೆ ನಡೆಯಲಿರುವ 'ಯುವ ದಸರಾ' (Yuva Dasara Mysuru) ಕಾರ್ಯಕ್ರಮವು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 3ರ ವರೆಗೆ ನಡೆಯಲಿದೆ. ಪ್ರತಿದಿನ ಸಾಯಂಕಾಲ 6 ಗಂಟೆ ಆರಂಭವಾಗಿ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. 6 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮ ಹೇಗಿರಲಿದೆ ಅನ್ನೋದರ ಮಾಹಿತಿ ಇಲ್ಲಿದೆ.


  ಸೆಪ್ಟೆಂಬರ್ 28 ರಂದು ಅಪ್ಪು ನೆನಪು
  ಇತ್ತೀಚೆಗೆ ಅಗಲಿದ ಕನ್ನಡ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪು ಇಲ್ಲೂ ಮೇಳೈಸಲಿದೆ. ಮೊದಲನೆ ದಿವಸದ ಕಾರ್ಯಕ್ರಮದಲ್ಲಿಯೇ "ಅಪ್ಪು ನಮನ" ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಗೀತ ದಿಗ್ಗಜರಾದ ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ ಮತ್ತು ಗುರುಕಿರಣ್ ಅವರ ನೇತೃತ್ವದಲ್ಲಿ ಸಂಗೀತಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಅಪ್ಪು ಸಿನಿಮಾದ ಗೀತೆಗಳು ರಾರಾಜಿಸಲಿದೆ. ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಹಾಗೂ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅತಿಥಿಗಳಾಗಿ‌ ಆಗಮಿಸಲಿದ್ದಾರೆ.


  ಸೆಪ್ಟೆಂಬರ್ 29 ರಂದು ಏನಿರಲಿದೆ?
  ಖ್ಯಾತ ಹಿನ್ನೆಲೆ ಗಾಯಕಿ ಕನ್ನಿಕಾ ಕಪೂರ್ ಅವರಿಂದ ಎರಡು ಗಂಟೆಗಳ‌ ಕಾಲ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮುನ್ನ ಸ್ಥಳೀಯ ನೃತ್ಯ ತಂಡ ಹಾಗೂ ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ ನಡೆಯಲಿದೆ‌.


  ಸೆಪ್ಟೆಂಬರ್ 30 ರಂದು ಏನಿರಲಿದೆ?
  ಸ್ಥಳೀಯ ಕಲಾವಿದರ ಕಾರ್ಯಕ್ರಮದ ಜೊತೆಗೆ ಲೇಸರ್ ಆ್ಯಕ್ಟ್ ಮತ್ತು ಸಿಗ್ನೇಚರ್ ತಂಡದ ನೃತ್ಯ ಹಾಗೂ 'ಸ್ಯಾಂಡಲ್ ವುಡ್ ನೈಟ್' ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದೆ.


  ಇದನ್ನೂ ಓದಿ: Mysuru Dasara: ಮೈಸೂರು ರಾಜ ವಂಶಸ್ಥರ ಖಾಸಗಿ ದರ್ಬಾರ್; ಫೋಟೋ ನೋಡಿ


  ಅಕ್ಟೋಬರ್ 1 ರಂದು ಏನಿರಲಿದೆ?
  ಖ್ಯಾತ ಬಾಲಿವುಡ್ ಗಾಯಕ ಹನಿ ಸಿಂಗ್ ಹಾಗೂ ಕರುನಾಡ ಖ್ಯಾತ ಗಾಯಕಿ ಡಾ. ಶಮಿತಾ ಮಲ್ನಾಡ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಲಿದೆ. ಇದಕ್ಕೂ‌ ಮುನ್ನ ಯುವ ಸಂಭ್ರಮ ವಿಜೇತರಿಂದ ನೃತ್ಯ ಸಂಭ್ರಮ ನಡೆಯಲಿದೆ.


  ಇದನ್ನೂ ಓದಿ: Dasara Good News: ಪೊಲೀಸರಿಂದ ನಾಗರಿಕರಿಗೆ ಖುಷಿ ಸುದ್ದಿ!


  ಅಕ್ಟೋಬರ್ 2 ರಂದು ಏನಿರಲಿದೆ?
  ಐದನೇ ದಿನದ ಕಾರ್ಯಕ್ರಮದಲ್ಲಿ ಹರ್ಷಿಕಾ ಪೂಣಚ್ಚ ಹಾಗೂ ವಿಜಯ ರಾಘವೇಂದ್ರ ಅವರಿಂದ 'ಕನ್ನಡ ಸ್ಟಾರ್ ನೈಟ್' ಕಾರ್ಯಕ್ರಮ ಹಾಗೂ ವೃತ್ತಿಪರ ನೃತ್ಯಪಟುಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.


  ಅಕ್ಟೋಬರ್ 3 ರಂದು ಏನು ವಿಶೇಷ?
  ಕೊನೆಯ ದಿವಸದ ಕಾರ್ಯಕ್ರಮದಲ್ಲಿ ಸುಪ್ರಿಯಾ ರಾಮ್  ಮತ್ತು ಮಹಿಳಾ ತಂಡದಿಂದ ಬ್ಯಾಂಡ್ ಪ್ರದರ್ಶನ, ಫ್ಯಾಷನ್ ಶೋ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಸುನಿಧಿ ಚೌಹಾಣ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

  Published by:ಗುರುಗಣೇಶ ಡಬ್ಗುಳಿ
  First published: