• Home
  • »
  • News
  • »
  • mysuru
  • »
  • Mysuru Dasara: ಮೈಸೂರು ದಸರಾ ಎಷ್ಟೊಂದು ಸುಂದರ ಅಂತ ಇಲ್ಲಿದೆ ನೋಡಿ!

Mysuru Dasara: ಮೈಸೂರು ದಸರಾ ಎಷ್ಟೊಂದು ಸುಂದರ ಅಂತ ಇಲ್ಲಿದೆ ನೋಡಿ!

ದಸರಾ ವೈಭವ ನೋಡಿ

"ದಸರಾ ವೈಭವ ನೋಡಿ"

Mysuru Dasara: ಮೈಸೂರು ದಸರಾ ಹೇಗೆ ನಡೀತಿದೆ? ಮೈಸೂರಿನ ಬೀದಿಬೀದಿಗಳು ಹೇಗೆ ಕಂಗೊಳಿಸುತ್ತಿವೆ? ಮೈಸೂರು ದಸರಾ ವೈಭವವ ವಿಡಿಯೋ ಇಲ್ಲಿದೆ ನೋಡಿಬಿಡಿ!

  • Share this:

    ಮೈಸೂರು: ಬೀದಿಬೀದಿಗಳಿಗೂ ಲೈಟಿನ ಸಿಂಗಾರ! ಮೂಲೆಮೂಲೆಯಲ್ಲೂ ಒಂದೊಂದು ಕಾರ್ಯಕ್ರಮ, ಥೇಟ್ ಮದುವಣಗಿತ್ತಿಯೇ ಆಗಿಬಿಟ್ಟಿದೆ ನಮ್ಮ ಮೈಸೂರು! ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru Dasara)  ಕಳೆಗಟ್ಟಿರೋ ದಸರಾ ಸಂಭ್ರಮ (Dasara 2022) ನೋಡೋಕೆ ಎರಡು ಕಣ್ಣು ಸಾಲೋದೇ ಇಲ್ಲ ಬಿಡಿ. ಹಾಗೆ ಮಿಂಚ್ತಾ ಇದೆ ಮೈಸೂರು. ಆ ಚಾಮುಂಡಿ ತಾಯಿಯ (Goddess Chamundi) ದರ್ಶನ ಪಡೆದು ಕೋಟ್ಯಂತರ ಜನ ಪಾವನವಾಗ್ತಿದ್ದಾರೆ. ವಿಶೇಷ ಅಲಂಕಾರವನ್ನು ಕಣ್ತುಂಬಿಸಿಕೊಳ್ತಿದ್ದಾರೆ. ದಸರಾ ದರ್ಬಾರ್ (Dasara In Mysuru) ಗತ್ತು ಗಾಂಭೀರ್ಯ ಕಂಡು ಅಬ್ಬಾ ಅಂತ ಮೂಗಿನ ಮೇಲೆ ಬೆರಳಿಡ್ತಿದ್ದಾರೆ.


    ಮೈಸೂರಲ್ಲಿ ಅಪ್ಪು
    ಚಾಮುಂಡಿ ತಾಯಿ ದರ್ಶನ ಪಡೆದು ಹಾಗೇ ಇತ್ತ ಬಂದ್ರೆ ಒಂದೆಡೆ ಹೂವಿನಲ್ಲಿ ಮೂಡಿರೋ ಅಪ್ಪು, ಗಾಜಿನ ಅರಮನೆಯೊಳಗೆ ಹೂವಿನಿಂದ ರಾಷ್ಟ್ರಪತಿ ಭವನ ನಿರ್ಮಿಸಿರೋದನ್ನ ನೋಡ್ತಿದ್ರೆ ನಿಂತಲ್ಲೇ ಕಳೆದುಹೋಗೋದು ಗ್ಯಾರಂಟಿ.




    ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


    ದಸರಾದಲ್ಲಿ ಏನ್ ಖರೀದಿ ಮಾಡ್ದ್ರಿ?
    ಹೀಗಂತ ಅಂತ ಯಾರಾದ್ರೂ ಕೇಳಿದ್ರೆ ಏನ್ ಹೇಳೋದು? ತಲೆಬಿಸಿ ಮಾಡ್ಕೊಳ್ಬೇಡಿ, ಅರಮನೆ ಬಳಿ ಇರುವ ಎಕ್ಸಿಬೀಷನ್ ಮೈದಾನದಲ್ಲಿ ನಡೆಯುವ ಎಕ್ಸಿಬಿಷನ್ನಲ್ಲಿ ನೀವು ಶಾಪಿಂಗ್ ಮಾಡಬಹುದು! ಇಷ್ಟಬಂದ ಆಹಾರ ಸವಿಯಬಹುದು. ಮಕ್ಕಳಂತೂ ಆಟ ಆಡ್ತಾ ಇಡೀ ಜಗತ್ತನ್ನೇ ಮರಿಯಬಹುದು.


    ಇದನ್ನೂ ಓದಿ: Mysuru Dasara: ಆಕಾಶದಿಂದ ನೋಡಿ ಮೈಸೂರು ದಸರಾ!


    ಇಷ್ಟೆಲ್ಲಾ ನೋಡಿದ ಮೇಲೆ ಏನಾದ್ರೂ ತಿನ್ಲೇಬೇಕಲ್ವಾ? ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನಲ್ಲಿ ರುಚಿಕರವಾದ ಆಹಾರ ಮೇಳ! ಜೋಳದ ರೊಟ್ಟಿ, ಮೇಲುಕೋಟೆ ಪುಳಿಯೋಗರೆ, ರುಮಾಲ್ ರೊಟ್ಟಿ, ಅಪ್ಪು ಧಮ್ ಬಿರಿಯಾನಿ, ಬ್ಯಾಂಬೋ ಬಿರಿಯಾನಿ, ಸ್ವೀಟ್ ಕಾರ್ನ್, ಐಸ್ ಕ್ರೀಮ್ ಏನ್ ಬೇಕು ಎಲ್ಲಾ ಇಲ್ಲಿ ರೆಡಿಯಾಗಿ ಪ್ರವಾಸಿಗರ ನಾಲಿಗೆಗೆ ಭರ್ಜರಿ ಔತಣವನ್ನೇ ಉಣಬಡಿಸುವಂತಿತ್ತು. ಒಟ್ಟಾರೆ ಇವೆಲ್ಲಾ ಅದ್ಭುತಗಳು ಸೇರಿ ಮೈಸೂರು ದಸರಾ ಎಷ್ಟೊಂದು ಸುಂದರಾ ಎಂಬ ಸಾಲು ಮತ್ತೆ ಮತ್ತೆ ನೆನಪಾಗಿದ್ದಂತೂ ಪಕ್ಕಾ!


    ವರದಿ: ಸಂಧ್ಯಾ. ಎಂ.

    Published by:ಗುರುಗಣೇಶ ಡಬ್ಗುಳಿ
    First published: