• Home
 • »
 • News
 • »
 • mysuru
 • »
 • Mysuru Dasara: ಆಕಾಶದಿಂದ ನೋಡಿ ಮೈಸೂರು ದಸರಾ!

Mysuru Dasara: ಆಕಾಶದಿಂದ ನೋಡಿ ಮೈಸೂರು ದಸರಾ!

ಆಕಾಶದಿಂದ ಮೈಸೂರು ನೋಡಿ

"ಆಕಾಶದಿಂದ ಮೈಸೂರು ನೋಡಿ"

ವಿಶಾಲವಾದ ಮೈದಾನದಿಂದ ಮುಗಿಲೆತ್ತರಕ್ಕೆ ಹಾರಿ ಮೈಸೂರನ್ನ ಪುಟ್ಟದಾಗಿ ತೋರಿಸೋ ವಿಹಂಗಮ ನೋಟವಂತೂ ಸೂಪರ್.

 • Share this:

  ನೀವೆಲ್ಲ ಮೈಸೂರು ದಸರಾಕ್ಕೆ (Mysuru Dasara) ಬರ್ತೀದ್ದೀರಾ? ಹಾಗಿದ್ರೆ ಆಗಸದೆತ್ತರಕ್ಕೆ ಹಾರೋ ಈ ಚಾನ್ಸ್​​ನ ಮಾತ್ರ ಮಿಸ್ ಮಾಡ್ಬೇಡಿ. ಸಾಂಸ್ಕೃತಿಕ ನಗರಿ ಮೈಸೂರಿನ ಸೌಂದರ್ಯವನ್ನು ಹಾಯಾಗಿ ಹಾರಾಡುತ್ತ (Paragliding in Mysuru Dasara) ಕಣ್ತುಂಬಿಕೊಳ್ಳೋ ಅವಕಾಶ ನಿಮಗಿದೆ. ಹಚ್ಚಹಸಿರಿನ ನಡುವೆ ಅರಳಿ ನಿಂತಂತೆ ಕಾಣೋ ಮೈಸೂರಿನ ಸೌಂದರ್ವನ್ನ (Watch Mysuru Dasara Frm Sky) ಬಾನದಾರಿಯಲ್ಲಿ ನೋಡುತ್ತಾ ಎಂಜಾಯ್ ಮಾಡಬಹುದು


  ನಾಡಹಬ್ಬ ದಸರಾ ಸಂಭ್ರಮ ಈಗಾಗಲೇ ಕಳೆಗಟ್ಟಿದೆ. ಅದರಲ್ಲೂ ಪ್ಯಾರಾ ಮೋಟಾರ್​ನ ಗುಂಯ್ಯನೆ ಹಾರೋ ಶಬ್ದ ಹೊಸ ಅನುಭವ ಮೂಡಿಸುತ್ತಿದೆ. ಪ್ರವಾಸಿಗರಿಗಂತೂ ಈ ಪ್ಯಾರಾ ಮೋಟಾರ್​ನಲ್ಲಿ ಹಾರಾಡುತ್ತಾ ಏರಿಯಲ್ ವೀವ್​ನಲ್ಲಿ ಮೈಸೂರು ನಗರವನ್ನ ಕಣ್ತುಂಬಿಕೊಳ್ಳಬಹುದು.  ಸಿದ್ಧಾರ್ಥ್​, ಬೆಂಗಳೂರು ಏವಿಯೇಷನ್ ಆ್ಯಂಡ್ ಸ್ಪೋರ್ಟ್ಸ್​ ಎಂಟರ್​ಪ್ರೈಸಸ್ ಅವರು ಈ ಅದ್ಭುತ ಅನುಭವದ ವಿಡಿಯೋವನ್ನು ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.


  ಇದನ್ನೂ ಓದಿ: Dasara Good News: ಪೊಲೀಸರಿಂದ ನಾಗರಿಕರಿಗೆ ಖುಷಿ ಸುದ್ದಿ!


  ವಿಶಾಲವಾದ ಮೈದಾನದಿಂದ ಮುಗಿಲೆತ್ತರಕ್ಕೆ ಹಾರಿ ಮೈಸೂರನ್ನ ಪುಟ್ಟದಾಗಿ ತೋರಿಸೋ ವಿಹಂಗಮ ನೋಟವಂತೂ ಸೂಪರ್. ಐದರಿಂದ ಆರು ನಿಮಿಷಗಳಲ್ಲಿ ಮೈಸೂರು ನಗರವನ್ನ ಕಣ್ತುಂಬಿಕೊಳ್ಳೋದೇ ಒಂಥರಾ ಸೋಜಿಗ.


  ಇದನ್ನೂ ಓದಿ: Shivamogga Viral News: ಶಿವಮೊಗ್ಗದಲ್ಲಿ ಈಗ ಈ ಎಮ್ಮೆಯದ್ದೇ ಸುದ್ದಿ!


  ಪ್ರತಿದಿನ ಬೆಳಗ್ಗೆ 7.30 ರಿಂದ ಆರಂಭವಾಗಿ ಸೂರ್ಯ ಮುಳುಗೋವರೆಗೂ ಈ ಪ್ಯಾರಾ ಮೋಟಾರ್ನಲ್ಲಿ ನೀವು ಮಜಾ ಮಾಡಬಹುದು. ತಲಾ ಒಬ್ಬರಿಗೆ 2,500 ರೂಪಾಯಿ ಮಾತ್ರ. ಒಟ್ಟಿನಲ್ಲಿ ಈ ಬಾರಿಯ ದಸರಾ ಹಬ್ಬದಲ್ಲಿ ಬಾನಲ್ಲೂ ನೀನೇ.. ಭುವಿಯಲ್ಲೂ ನೀನೆ ಅಂತಾ ನೀವೂ ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

  Published by:ಗುರುಗಣೇಶ ಡಬ್ಗುಳಿ
  First published: