Mysuru Dasara 2022: ದಸರೆಗಾಗಿ ಬಂದಿದ್ದ ಆನೆ, ಮರಿ ಹಾಕಿದಾಗಲೇ ಗೊತ್ತಾಯ್ತು ಗರ್ಭಧಾರಣೆ ವಿಚಾರ! ಇದೆಂಥಾ ನಿರ್ಲಕ್ಷ್ಯ?

ದಸರಾ ಪ್ರಯುಕ್ತ ಆನೆಗಳಿಗೆ ಜಂಬೂ ಸವಾರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ನೀಡುತ್ತಿರುವ 14 ಆನೆಗಳ ಗುಂಪಿನಲ್ಲಿ 21 ವರ್ಷದ ಆನೆ  ಲಕ್ಷ್ಮಿ. ಈ ಆನೆಯು ಮಂಗಳವಾರ ರಾತ್ರಿ ಒಂದು ಆನೆಮರಿಗೆ ಜನ್ಮ ನೀಡಿದ್ದಾಳೆ. ಇದು ಸಂತಸ ಪಡುವ ವಿಚಾರ ಆಗಿದೆ. ಆದರೆ ಯಾರಿಗೂ ಇಲ್ಲಿ ಸಂತಸವಾಗಿಲ್ಲ. ಅದರ ಬದಲಾಗಿ ಆಘಾತಕಾರಿ ಎನಿಸಿದೆ.

ಮರಿ ಆನೆಗೆ ಜನ್ಮವಿತ್ತ ಜಂಬೂ ಲಕ್ಷ್ಮಿ

ಮರಿ ಆನೆಗೆ ಜನ್ಮವಿತ್ತ ಜಂಬೂ ಲಕ್ಷ್ಮಿ

  • Share this:
ಮೈಸೂರು: ಇನ್ನು ಕೆಲವೇ ದಿನಗಳಲ್ಲಿ ಮೈಸೂರು ದಸರಾ (Dasara) ವಿಜೃಂಭಣೆಯಿಂದ ಆರಂಭವಾಗಲಿದೆ. ದಸರಾ ಎಂದರೆ ಎಲ್ಲರಿಗೂ ಮೊದಲಿಗೆ ನೆನಪಾಗೊದು ಜಂಬೂ ಸವಾರಿ. ಈ ಜಂಬೂ ಸವಾರಿಯಿಂದಲೇ (Jamboo Savari) ಮೈಸೂರು ದಸರಾ ವಿಶ್ವ ಪ್ರಸಿದ್ದಿ ಪಡೆದಿದೆ. ದಸರಾ ಆರಂಭವಾಗುವ ಕೆಲವು ತಿಂಗಳ ಮೊದಲು ಆನೆಗಳು ಅರಮನೆಯ ತರಬೇತಿ ಕೇಂದ್ರಕ್ಕೆ ಧಾವಿಸಿ ಬರುತ್ತವೆ. ದಸರಾ ಪ್ರಯುಕ್ತ ಆನೆಗಳಿಗೆ ಜಂಬೂ ಸವಾರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ (Training) ನೀಡುತ್ತಿರುವ 14 ಆನೆಗಳ ಗುಂಪಿನಲ್ಲಿ 21 ವರ್ಷದ ಆನೆ  ಲಕ್ಷ್ಮಿ (Lakshmi). ಈ ಆನೆಯು ಮಂಗಳವಾರ ರಾತ್ರಿ ಒಂದು ಆನೆಮರಿಗೆ ಜನ್ಮ (Birth) ನೀಡಿದ್ದಾಳೆ. ಇದು ಸಂತಸ ಪಡುವ ವಿಚಾರ ಆಗಿದೆ. ಆದರೆ ಯಾರಿಗೂ ಇಲ್ಲಿ ಸಂತಸವಾಗಿಲ್ಲ. ಅದರ ಬದಲಾಗಿ ಆಘಾತಕಾರಿ ಎನಿಸಿದೆ.

ಮಾವುತರ, ಪಶು ಅಧಿಕಾರಿಗಳ ಮತ್ತು ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ
ಏಕೆಂದರೆ, ಆ ಆನೆಯು ಗರ್ಭಿಣಿ ಆಗಿತ್ತು ಎಂಬ ವಿಚಾರವೇ ಅದರ ಮಾವುತರು ಅಥವಾ ಅಧಿಕಾರಿಗಳಿಗೆ ತಿಳಿದೇ ಇರಲಿಲ್ಲ. ಮೈಸೂರು ಅರಮನೆ ಆವರಣದಲ್ಲಿ ಹೆರಿಗೆಯಾಗುವ ಕೆಲವು ಗಂಟೆಗಳ ಮೊದಲೇ ಆನೆ ಇನ್ನೇನು ಮರಿ ಆನೆಗೆ ಜನ್ಮ ನೀಡುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಮತ್ತು ಮಾವುತರಿಗೆ ಗೊತ್ತಾಗಿರುವುದು. ಇದು ನಿಜಕ್ಕೂ ಶೋಚನೀಯ ಸಂಗತಿ ಆಗಿದೆ.

ಇದು ನಿಜವೇ? ಆನೆ ಈ ಮುಂಚೆ ಗರ್ಭಿಣಿ ಆಗಿರುವುದು ಯಾರ ಗಮನಕ್ಕೂ ಬರಲೇ ಇಲ್ವಾ? ಅಥವಾ ಅದರ ಬಗ್ಗೆ ಆನೆ ಆರೈಕೆ ಮಾಡುವವರಿಗೆ ತಿಳಿದೆ ಇರಲಿಲ್ಲವೇ? ಇದು ಮಾವುತರು, ಪಶು ಅಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದ ಕೆಲಸ ಎಂದು ಎಲ್ಲರಿಗೂ ಅರ್ಥವಾಗುತ್ತಿದೆ.

ಇದನ್ನೂ ಓದಿ: Mysore Dasara: ಭರ್ಜರಿಯಾಗಿ ರೆಡಿಯಾಗ್ತಿದೆ ಅಭಿಮನ್ಯು ಆ್ಯಂಡ್​ ಟೀಂ, ಇಲ್ಲಿದೆ ಗಜಪಡೆ ಊಟದ​ ಮೆನು

ಮೈಸೂರಿನಲ್ಲಿ ದಸರಾ ಜಂಬೂ ಸವಾರಿಗಾಗಿ ತರಬೇತಿ ನೀಡಲಾಗುತ್ತಿರುವ 14 ಆನೆಗಳಿಗೆ ಹೆಚ್ಚಿನ ಆರೈಕೆ ಮತ್ತು ಪೋಷಣೆಯನ್ನು ನೀಡಲಾಗಿದ್ದರೂ ಕೂಡ ಅರಣ್ಯ ಅಧಿಕಾರಿಗಳು, ಪಶುವೈದ್ಯರು ಮತ್ತು ಮಾವುತರು ಅವುಗಳಲ್ಲಿ ಒಂದು ಆನೆ ತುಂಬು ಗರ್ಭಿಣಿ ಆಗಿದೆ ಎಂದು ತಿಳಿಯದೇ, ಆ ಆನೆಗೆ ಕಠಿಣ ದೈಹಿಕ ತರಬೇತಿ ಮತ್ತು ಫಿರಂಗಿ ಗುಂಡು ಹಾರಿಸುವ ಚಟುವಟಿಕೆಗಳನ್ನು ಮಾಡಿಸಿದ್ದಾರೆ. ಈ ಸಂರ್ಭದಲ್ಲಿ ಸಹ ಆನೆಯು ಗರ್ಭಿಣಿ ಆಗಿದೆ ಎಂದು ಅರಿತುಕೊಳ್ಳಲು ಇವರೆಲ್ಲರೂ ವಿಫಲರಾಗಿದ್ದಾರೆ.

2017 ರಲ್ಲಿ ದಸರಾ ಹಬ್ಬಕ್ಕೆ ಆನೆ ಲಕ್ಷ್ಮಿಯ ಆಗಮನ 
2017 ರಲ್ಲಿ ಮೊದಲ ಬಾರಿಗೆ ದಸರಾ ಹಬ್ಬಕ್ಕೆ ಆನೆ ಲಕ್ಷ್ಮಿಯನ್ನು ಕರೆತರಲಾಯಿತು. ಆದರೆ ಆ ಮೊದಲ ಕೆಲವು ವರ್ಷಗಳ ಕಾಲ ಈ ಆನೆಯು ಫಿರಂಗಿ ಗುಂಡು ಹಾರಿಸುವಾಗ ಭಯಗೊಳ್ಳುತ್ತಿತ್ತು. ಆದ್ದರಿಂದ ಈ ಲಕ್ಷ್ಮಿ ಆನೆಯನ್ನು ಜಂಬೂ ಸವಾರಿ ಮೆರವಣಿಗೆಯಿಂದ ಹೊರಗೀಡಬೇಕಾಯಿತು.

ತರಬೇತಿಯ ಸಮಯದಲ್ಲೂ ಗರ್ಭಧಾರಣೆಯ ಬಗ್ಗೆ ತಿಳಿದು ಬಂದಿಲ್ಲ
ಅಕ್ಟೋಬರ್ 5 ರಂದು ನಡೆಯಲಿರುವ ವಿಶ್ವ ಪ್ರಸಿದ್ಧ ದಸರಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಈ ಆನೆಗಳಿಗೆ ಸಾಕಷ್ಟು ಪ್ರಚಾರ, ಪೋಷಣೆ ಮತ್ತು ವೈದ್ಯಕೀಯ ಆರೈಕೆಯನ್ನು ನೀಡಿದ್ದರೂ ಸಹ ಲಕ್ಷ್ಮಿಯ ಗರ್ಭಧಾರಣೆ ಪತ್ತೆಯಾಗಿಲ್ಲ. ತರಬೇತಿಗಾಗಿ ಒಂಬತ್ತು ಜಂಬೋಸ್‌ಗಳ ಮೊದಲ ಬ್ಯಾಚ್‌ನಲ್ಲಿ ಲಕ್ಷ್ಮಿಯನ್ನು ಆಗಸ್ಟ್ 7 ಕ್ಕೆ ಮೈಸೂರಿಗೆ ಕರೆತಂದಾಗಿನಿಂದ ಲಕ್ಷ್ಮಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಆದರೆ ಈ ತರಬೇತಿಯ ಸಮಯದಲ್ಲೂ ಕೂಡ ಗರ್ಭಧಾರಣೆಯ ವಿಷಯವನ್ನು ತಿಳಿಯುವಲ್ಲಿ ಮಾವುತರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಬಹುದು.

ತೀವ್ರ ಅಸ್ವಸ್ಥತೆಯಿಂದ ಒದ್ದಾಡಿದ ಲಕ್ಷ್ಮಿ

ಇದೇ ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಮಾವುತರು ಮತ್ತು ಕಾವಾಡಿಗಳು ಆನೆ ಲಕ್ಷ್ಮಿಯ ನಡವಳಿಕೆಯಲ್ಲಿ ಬದಲಾವಣೆಗಳನ್ನು ಗಮನಿಸಿದ್ದಾರೆ. ಅದು ತೀವ್ರವಾಗಿ ಅಸ್ವಸ್ಥತೆಯಿಂದ ಒದ್ದಾಡಿದೆ. ಈ ವಿಷಯವನ್ನು ಅರಣ್ಯಾಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳಿಗೆ ಕೂಡಲೇ ತಿಳಿಸಿದ್ದಾರೆ. ಈ ವಿಷಯ ತಿಳಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಬಂದು ವೈದ್ಯಕೀಯ ತಪಾಸಣೆ ನಡೆಸಿದರು. ಆಗ ವಿಷಯ ಬಹಿರಂಗಗೊಂಡಿದೆ. ಆನೆ ಲಕ್ಷ್ಮಿ ಗರ್ಭಿಣಿಯಾಗಿದೆ, ಅದಕ್ಕೆ ಹೆರಿಗೆ ನೋವಿನಿಂದ ಆನೆ ಬಳಲುತ್ತಿದೆ ಎಂದು ಶಂಕಿಸಿದ್ದಾರೆ.

ಅರಣ್ಯಾಧಿಕಾರಿಗಳು ಆಕೆಯ ಮೂತ್ರ ಮತ್ತು ಮಲದ ಮಾದರಿಗಳನ್ನು ಸಂಗ್ರಹಿಸಿ ಹೈದರಾಬಾದ್‌ನಲ್ಲಿರುವ ಲ್ಯಾಬ್‌ಗೆ ಗರ್ಭಧಾರಣೆಯ ಪತ್ತೆಯ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಇದೇ ವೇಳೆ ಮೈಸೂರು ಅರಮನೆಯ ಬ್ರಹ್ಮಪುರಿ ಗೇಟ್ ಬಳಿ ಇರುವ ಪ್ರತ್ಯೇಕ ಆವರಣಕ್ಕೆ ಆನೆಯನ್ನು ಸ್ಥಳಾಂತರಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಆಕೆಯ ಆರೋಗ್ಯ ಮತ್ತು ನಡವಳಿಕೆಯ ಮೇಲೆ ನಿಗಾ ಇರಿಸಿದರು.

ಇದನ್ನೂ ಓದಿ:  Mysuru Dasara 2022: ದಸರಾ ಗಜಪಡೆಗೆ 5 ಹೊಸ ಆನೆ; ಜಂಬೂ ಪಡೆಗೆ ಭರ್ಜರಿ ತಾಲೀಮು

ಆದರೆ, ಅದೇ ಮಂಗಳವಾರದಂದು ರಾತ್ರಿ 8.10 ರ ಸುಮಾರಿಗೆ ಆನೆ ಲಕ್ಷ್ಮಿಯು ಆರೋಗ್ಯವಂತ ಮರಿ ಆನೆಗೆ ಜನ್ಮ ನೀಡಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ-ವನ್ಯಜೀವಿ ವಿಭಾಗದ ವಿ.ಕರಿಕಾಳನ್, ಪಶುವೈದ್ಯ ಮುಜೀಬ್-ಉರ್-ರೆಹಮಾನ್ ಮತ್ತು ವಲಯ ಅರಣ್ಯಾಧಿಕಾರಿ ಸಂತೋಷ್ ಹೂಗಾರ್ ಸೇರಿದಂತೆ ಸಿಬ್ಬಂದಿ, ಮಾವುತರು ಮತ್ತು ಕಾವಾಡಿಗಳು ಲಕ್ಷ್ಮೀ ಆನೆಯ ಹೆರಿಗೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Published by:Ashwini Prabhu
First published: