• Home
  • »
  • News
  • »
  • mysuru
  • »
  • Mysuru Dasara: ಇದು ಭೂಲೋಕವಲ್ಲ, ಗೊಂಬೆಗಳ ಲೋಕ!

Mysuru Dasara: ಇದು ಭೂಲೋಕವಲ್ಲ, ಗೊಂಬೆಗಳ ಲೋಕ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮೈಸೂರು ದಸರಾಕ್ಕೆ ಸಾಂಸ್ಕೃತಿಕ ನಗರಿ ರಂಗೇರಿದೆ. ಗೊಂಬೆಗಳ ಲೋಕವಂತೂ ಗೊಂಬೆ ಪ್ರಿಯರ ಕೈ ಬೀಸಿ ಕರೆಯುತ್ತಿದೆ. ಹಾಗಿದ್ರೆ ಹೇಗಿದೆ ಗೊತ್ತಾ ಈ ಗೊಂಬೆಗಳ ಲೋಕ? 

  • Share this:

    ಮೈಸೂರು: ಅಬ್ಬಾ! ಅದೆಷ್ಟು ಚಂದ ಅಂತೀರಿ? ಒಂದ್​ಕ್ಷಣ ನಾವೆಲ್ಲೋ ಬೇರೆ ಲೋಕದಲ್ಲೇ ಇದ್ದೇವೇನೋ ಅನಿಸುತ್ತೆ. ದೇವತೆಗಳೇ ಧರೆಗಿಳಿದು ಬಂದಂತೆ ಅನಿಸೋ ಮೈಸೂರು ಗೊಂಬೆಗಳ ಲೋಕವದು. ದಿನೇದಿನೇ ಹೆಚ್ಚುತ್ತಿರೋ ಮೈಸೂರು ದಸರಾ (Mysuru Dasara) ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡುತ್ತಿದ್ದಾವೆ ಗೊಂಬೆಗಳು. ರಾಮಾಯಣ, ಮಹಾಭಾರತ, ದೇವತೆಗಳು, ರಾಜರು, ಅಲಂಕಾರಿಕ ಗೊಂಬೆಗಳಿಗೆ ಭಾರೀ ಬೇಡಿಕೆ ಬರ್ತಿದೆ. ರಾಕ್ಷಸ ರಂಗ ಹೆಸರಿನ ವಿಶೇಷ ಅಂಕಣದಲ್ಲಿ ರಾವಣ, ಬಕಾಸುರ, ಕುಂಭಕರ್ಣ ಗೊಂಬೆಗಳ (Mysuru Dasara Dolls) ಪ್ರದರ್ಶನ ಏರ್ಪಡಿಸಲಾಗಿದೆ.


    ಹತ್ತು ಸಾವಿರಕ್ಕೂ ಹೆಚ್ಚು ಗೊಂಬೆ!
    ರಾಮ್ಸನ್ಸ್ ಕಲಾ ಪ್ರತಿಷ್ಠಾನದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನ ಪ್ರದರ್ಶನಕ್ಕಿಟ್ಟಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.


    ಇದನ್ನೂ ಓದಿ: Drone In Agriculture: ಕೃಷಿಯಲ್ಲಿ ಡ್ರೋನ್ ಬಳಕೆ ಹೇಗೆ? ಈ ರೈತರನ್ನು ನೋಡಿ!


    ಗೊಂಬೆಗಳ ಲೋಕ!
    ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಸೇರಿ 12 ರಾಜ್ಯಗಳಿಂದ ತರಿಸಿರುವ ಬೊಂಬೆಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ.


    ಇದನ್ನೂ ಓದಿ: Positive Story: ವಿಧವೆಯರೇ ನಡೆಸೋ ಹೊಟೇಲ್! ಇಲ್ಲಿದೆ ನೋಡಿ


    ಈ ಗೊಂಬೆಗಳ ಖರೀದಿಗೆ ಮೈಸೂರಿಗರಂತೂ ಭಾರೀ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಮೈಸೂರು ದಸರಾಗೆ ಗೊಂಬೆಗಳು ಇನ್ನಷ್ಟು ಮೆರಗು ನೀಡುತ್ತಿರುವುದು ಸುಳ್ಳಲ್ಲ.

    Published by:ಗುರುಗಣೇಶ ಡಬ್ಗುಳಿ
    First published: