• ಹೋಂ
 • »
 • ನ್ಯೂಸ್
 • »
 • ಮೈಸೂರು
 • »
 • Mysuru Bonda Recipe: ಬಾಯಲ್ಲಿ ನೀರೂರಿಸುವ ಮೈಸೂರು ಬೋಂಡಾ ಮಾಡೋದು ತುಂಬಾ ಸುಲಭ, ಇಲ್ಲಿದೆ ರೆಸಿಪಿ

Mysuru Bonda Recipe: ಬಾಯಲ್ಲಿ ನೀರೂರಿಸುವ ಮೈಸೂರು ಬೋಂಡಾ ಮಾಡೋದು ತುಂಬಾ ಸುಲಭ, ಇಲ್ಲಿದೆ ರೆಸಿಪಿ

ಮೈಸೂರು ಬೋಂಡಾ

ಮೈಸೂರು ಬೋಂಡಾ

ಬಿಸಿ ಬಿಸಿ ಬೋಂಡಾ ಸಿಕ್ಕರೆ ಎಷ್ಟೊತ್ತಿಗೆ ಬೇಕಿದ್ರು, ಎಷ್ಟು ಬೇಕಿದ್ರೂ ತಿನ್ನಬಹುದು. ಮೈಸೂರು ಬೋಂಡಾ ತಿನ್ನೋವಷ್ಟೇ ಸುಲಭ ಮಾಡೋದು ಕೂಡಾ. ಹೇಗೆ ಅಂತೀರ?

 • News18 Kannada
 • 3-MIN READ
 • Last Updated :
 • Mysore, India
 • Share this:

ಮೈಸೂರು: ಬೆಳಗಿನ ಚಾ ಅಥವಾ ಸಾಯಂಕಾಲದ ಚಾ ಕುಡಿಯುತ್ತಾ ತಿನ್ನೋದಕ್ಕೆ ಮೈಸೂರು ಬೋಂಡಾ (Mysuru Bonda) ಇಷ್ಟಪಡದವರು ಯಾರು ಹೇಳಿ? ಎಣ್ಣೆಯಲ್ಲಿ ಕರಿದ ಮೈಸೂರು ಬೋಂಡಾ ಬಾಯಿಗೆ ಸೂಪರ್‌ ರುಚಿ ನೀಡಬಲ್ಲದು. ಅಷ್ಟಕ್ಕೂ ಮೈಸೂರು ಬೋಂಡಾ ತಿನ್ನೋದಕ್ಕೆ (Mysuru Bonda Recipe) ಟೈಮ್ ಲಿಮಿಟ್‌ ಇರದು. ಬಿಸಿ ಬಿಸಿ ಬೋಂಡಾ ಸಿಕ್ಕರೆ ಎಷ್ಟೊತ್ತಿಗೆ ಬೇಕಿದ್ರು, ಎಷ್ಟು ಬೇಕಿದ್ರೂ ತಿನ್ನಬಹುದು.


ಮಂಗಳೂರು ಭಾಗದಲ್ಲಿ ಗೋಳಿಬಜೆ ಅಂತಾ ಕರೆಯೋ ಈ ಬೋಂಡಾ ಮೈಸೂರಿನಲ್ಲಿ ಇನ್ನೊಂದಿಷ್ಟು ಹೆಚ್ಚುವರಿ ರೆಸಿಪಿ ಜೊತೆಗೆ ಸೂಪರ್‌ ಟೇಸ್ಟಿ ಆಗಿರೋ ʼಮೈಸೂರು ಬೋಂಡಾʼ ಆಗಿದೆ.
ಸಿಂಪಲ್ ಆಗಿ ಮನೆಯಲ್ಲೇ ಮಾಡಿ
ಇನ್ನು ಈ ಮೈಸೂರು ಬೋಂಡಾ ಮಾಡೋದು ಇದೆಯಲ್ವ ವೆರಿ ಸಿಂಪಲ್.‌ ಹಾಗಂತ ಸ್ವಲ್ಪ ಎಚ್ಚರ ತಪ್ಪಿದ್ರು ಬೋಂಡಾ ರಿಯಲ್‌ ಟೇಸ್ಟ್‌ ಸಿಗದೇ ಹೋಗ್ಬಹುದು. ಅದಕ್ಕಾಗಿಯೇ ಈ ಮೈಸೂರು ಬೋಂಡಾ ಮಾಡೋದು ಹೇಗೆ ಅಂತಾ ನಾವ್‌ ಹೇಳಿಕೊಡ್ತೀವಿ ನೋಡಿ.


ಏನೆಲ್ಲಾ ಬೇಕು?
2.5 ಕಪ್‌ ಮೈದಾಹುಡಿ, ¼ ಕಪ್ ಕಡ್ಲೆ ಹಿಟ್ಟು‌, ¼ ಕಪ್‌ ಮೊಸರು, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಶುಂಠಿ, ಸ್ಪ್ರಿಂಗ್‌ ಆನಿಯನ್‌, ಹಸಿಮೆಣಸಿನ ಕಾಯಿ, ಅಡುಗೆ ಉಪ್ಪು, ಅಡುಗೆ ಸೋಡಾ ರೆಡಿ ಇಟ್ಟುಕೊಳ್ಳಬೇಕು.
ಮಾಡೋದು ಹೇಗೆ?
ಮೊದಲಿಗೆ ಮೈದಾಹುಡಿಯನ್ನು ಒಂದು ಬೌಲ್​ಗೆ ಹಾಕಿಕೊಳ್ಳಬೇಕು. ನಂತರ ಕಡ್ಲೆ ಹಿಟ್ಟು, ಕೊತ್ತಂಬರಿ ಸೊಪ್ಪು, ಶುಂಠಿ, ಸ್ಪ್ರಿಂಗ್‌ ಆನಿಯನ್‌, ಹಸಿಮೆಣಸಿನ ಕಾಯಿಗಳನ್ನು ಕ್ರಮ ಪ್ರಕಾರವಾಗಿ ಮಿಶ್ರಣ ಮಾಡಬೇಕು. ಬಳಿಕ ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಅದನ್ನು ಹದಗೊಳಿಸುತ್ತಾ ಹೋಗಬೇಕು. ಯಾವುದೇ ಕಾರಣಕ್ಕೂ ಗಂಟು ಗಂಟು ಆಗದಂತೆ ಅದನ್ನು ಕಲಸಬೇಕು. ಹೆಚ್ಚು ಗಟ್ಟಿಯೂ ಆಗದಂತೆ, ತೆಳು ಆಗದಂತೆ ಮಿಶ್ರಣ ಮಾಡಬೇಕು. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮತ್ತಷ್ಟು ಕಲಸಬೇಕು. ಹೀಗೆ ಮಿಶ್ರಣ ಮಾಡಿದ ಬಳಿಕ ಕೊನೆಯದಾಗಿ ಅರ್ಧ ಟೀ ಸ್ಪೂನ್ ಅಡುಗೆ ಸೋಡಾ ಹಾಕಬೇಕು. ಅಡುಗೆ ಸೋಡಾ ಹಾಕಿದ ನಂತರ ಯಾವುದನ್ನು ಮಿಶ್ರಣ ಮಾಡುವಂತಿಲ್ಲ.


ಹತ್ತು ನಿಮಿಷ ಇಡಿ
ಹೀಗೆ ಮಿಶ್ರಣ ಮಾಡಿದ ಮೈಸೂರು ಬೋಂಡಾ ಹಿಟ್ಟನ್ನು ಅಡುಗೆ ಸೋಡಾ ಮಿಶ್ರಣ ಮಾಡಿದ ಬಳಿಕ ಹತ್ತು ನಿಮಿಷ ಕಾಲ ಹಾಗೆಯೇ ಇಡಬೇಕು. ಹೀಗೆ ಇಟ್ಟಲ್ಲಿ ಹಿಟ್ಟು ರುಬ್ಬುವುದರ ಜೊತೆಗೆ ಮೈಸೂರು ಬೋಂಡಾದ ರುಚಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮೈಸೂರು ಬೋಂಡಾಕ್ಕೆ ಬೇಕಾದ ತೆಂಗಿಕಾಯಿ ತುರಿಯ ಚಟ್ನಿಯನ್ನು ರೆಡಿ ಮಾಡಬಹುದಾಗಿದೆ.


ಇದನ್ನೂ ಓದಿ: Pundi Gasi Recipe: ಪುಂಡಿ ಬೇಯಿಸ್ಬೇಡಿ, ಮನೆಯಲ್ಲೇ ಮಾಡ್ಕೊಂಡು ತಿನ್ನಿ! ರೆಸಿಪಿ ಇಲ್ಲಿದೆ


ಕೊನೆಯದಾಗಿ ಹೀಗೆ ಮಾಡಿ
ಹತ್ತು ನಿಮಿಷಗಳ ಬಳಿಕ ಮಿಶ್ರಣ ಮಾಡಿದ ಹಿಟ್ಟನ್ನು ತಮ್ಮ ಕೈಗಳಿಂದ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ತೆಗೆಯುತ್ತಾ ಬಿಸಿಯಾದ ಎಣ್ಣೆಯಲ್ಲಿ ಬಿಡಬೇಕು. ಕುದಿಯುತ್ತಿರುವ ಎಣ್ಣೆಯಲ್ಲಿ ಏಕಕಾಲಕ್ಕೆ ಎಷ್ಟು ಸಾಧ್ಯವೋ ಅಷ್ಟು ಹಿಟ್ಟನ್ನು ಅದ್ರಲ್ಲಿ ಬಿಡಬೇಕು.


ಹೀಗೆ ಐದಾರು ನಿಮಿಷಗಳಲ್ಲಿ ಕುದಿಯುವ ಎಣ್ಣೆಯಲ್ಲಿ ಬೋಂಡಾವು ಕೆಂಪು ಬಣ್ಣಕ್ಕೆ ತಿರುಗುತ್ತಾ ಬೇಯುತ್ತದೆ. ನಂತರ ಅದನ್ನು ಎಣ್ಣೆಯಿಂದ ಪ್ರತ್ಯೇಕಿಸಬೇಕು. ಹೊರಗೆ ತೆಗೆಯುವಾಗಲೂ ಅಷ್ಟೇ ಆದಷ್ಟು ಎಣ್ಣೆ ಪ್ರಮಾಣ ಬಾಣಲೆಯಲ್ಲಿ ಇರುವಂತೆಯೇ ಮಾಡಿ ಬೋಂಡಾ ಹೊರತೆಗೆಯಬೇಕು. ಆವಾಗ ರೆಡಿಯಾಗುತ್ತೆ ನೋಡಿ ಈ ʼಮೈಸೂರು ಬೋಂಡಾʼ.


ಇದನ್ನೂ ಓದಿ: Pundi Gasi Recipe: ಪುಂಡಿ ಬೇಯಿಸ್ಬೇಡಿ, ಮನೆಯಲ್ಲೇ ಮಾಡ್ಕೊಂಡು ತಿನ್ನಿ! ರೆಸಿಪಿ ಇಲ್ಲಿದೆ

top videos


  ಚಟ್ನಿ ಇದ್ದರೆ ಸೂಪರ್‌
  ನಾವು ಮೊದಲೇ ಹೇಳಿದ ಹಾಗೆ ಹಿಟ್ಟಿನ ಮಿಶ್ರಣ ಆದ ಬಳಿಕ ಹತ್ತು ನಿಮಿಷ ಇಡುವ ಹೊತ್ತಿಗೆ ತೆಂಗಿನಕಾಯಿ ತುರಿಯ ಚಟ್ನಿ ರೆಡಿ ಮಾಡಿಕೊಳ್ಳಬಹುದು. ಮೈಸೂರು ಬೋಂಡಾದ ರಿಯಲ್‌ ರುಚಿ ಗೊತ್ತಾಗಬೇಕೆಂದರೆ ಚಟ್ನಿಯ ಕಾಂಬಿನೇಶನ್‌ ಇದ್ದರಷ್ಟೇ ಸಾಧ್ಯ. ಹೀಗೆ ʼಮೈಸೂರು ಬೋಂಡಾʼವನ್ನು ಯಾವಾಗ ಬೇಕೋ ಆವಾಗ ಮಾಡಿ ಸಖತ್‌ ಟೇಸ್ಟ್ ನೋಡಿ.

  First published: