Mysuru News: ಮಂಡ್ಯ ರಮೇಶ್ ಬಳಿ ನಟನೆ ಕಲಿಯಿರಿ! ಹೀಗೆ ಅರ್ಜಿ ಸಲ್ಲಿಸಿ

ಖ್ಯಾತ ನಟ ಮಂಡ್ಯ ರಮೇಶ್ ನೇತೃತ್ವದ ರಂಗಭೂಮಿ ತರಬೇತಿ ಕೇಂದ್ರ ‘ನಟನಾ ರಂಗಶಾಲೆ‘ಯು ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಅಹ್ವಾನಿಸಿದೆ. ಆಸಕ್ತ ಯುವಕ-ಯುವತಿಯರು ಕೂಡಲೇ ಅರ್ಜಿ ಸಲ್ಲಿಸಿ ಕೋರ್ಸ್​ನಲ್ಲಿ ಅವಕಾಶ ಪಡೆಯಬಹುದಾಗಿದೆ.

ಮಂಡ್ಯ ರಮೇಶ್

ಮಂಡ್ಯ ರಮೇಶ್

  • Share this:
    ಮೈಸೂರು: ರಂಗಭೂಮಿ ಅಭಿನಯದಲ್ಲಿ ಆಸಕ್ತಿ ಹೊಂದಿರುವ ಯುವಕ-ಯುವತಿಯರು ತಮ್ಮ ನಟನಾ ಚಾತುರ್ಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಒಂದು ಉತ್ತಮ ವೇದಿಕೆ. ಮೈಸೂರು ವಿಶ್ವವಿದ್ಯಾನಿಲಯದ (Mysuru University) ಮಾನ್ಯತೆ ಹೊಂದಿರುವ ಡಿಪ್ಲೊಮಾ ಕೋರ್ಸ್ ಮೂಲಕ, ಖ್ಯಾತ ನಟ ಮಂಡ್ಯ ರಮೇಶ್ (Actor Mandya Ramesh) ನೇತೃತ್ವದಲ್ಲಿ ಅಭಿನಯ ತರಬೇತಿ ಪಡೆಯುವ  (Acting Class) ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗ ಶಾಲೆಯಲ್ಲಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಮೂಲಕ ತಮ್ಮ ಕಲಾ ಚಾತುರ್ಯತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಆಸಕ್ತ ಕಲಾವಿದರು ಅರ್ಜಿ ಸಲ್ಲಿಸಬೇಕಾದ ವಿಧಾನ ಹಾಗೂ ವಿವರಗಳ ಬಗ್ಗೆ ಮಾಹಿತಿ ಇಲ್ಲಿದೆ.

    ಆಯ್ಕೆ ಹೇಗೆ?
    2022-23ನೇ ಸಾಲಿನ ರಂಗಭೂಮಿ ನಟನಾ ತರಬೇತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

    ವಯೋಮಿತಿ
    ನಟನಾ ರಂಗಭೂಮಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳ ವಯೋಮಿತಿ 16 ರಿಂದ 30 ವರ್ಷದ ಒಳಗಾಗಿರಬೇಕು.

    ಅರ್ಜಿ ಸಲ್ಲಿಸುವ ವಿಧಾನ
    ಆಸಕ್ತ ಅಭ್ಯರ್ಥಿಗಳು ನಟನಾ ಮೈಸೂರು ಇದರ ಅಧಿಕೃತ ವೆಬ್ ಸೈಟ್ ವೆಬ್​ಸೈಟ್ ಮೂಲಕ ಅಥವಾ ಕಚೇರಿಯಲ್ಲಿ ಅರ್ಜಿ ಪಡೆದು ಅರ್ಜಿ ಸಲ್ಲಿಸತಕ್ಕದ್ದು ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

    ಅರ್ಜಿ ಸಲ್ಲಿಕೆ ಕೊನೆ ದಿನಾಂಕ
    ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸಲ್ಲಿಸಿ, ಮೊತ್ತವನ್ನು ಪಾವತಿಸಿದ ಬಳಿಕ ಆಗಸ್ಟ್ 3ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

    ಸಂದರ್ಶನ ದಿನಾಂಕ
    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಗಸ್ಟ್ 7 ರಂದು ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

    ತರಬೇತಿ ಹೀಗಿರಲಿದೆ
    ಒಂದು ವರ್ಷದ ನಟನಾ ತರಬೇತಿ ಕೋರ್ಸ್ ನಲ್ಲಿ ಅಭ್ಯರ್ಥಿಗಳಿಗೆ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 9ರ ವರೆಗೆ ತರಗತಿಗಳು ನಡೆಯಲಿದೆ. ಅಭಿನಯ, ರಂಗ ಸಿದ್ಧಾಂತ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ, ಪ್ರಸಾದನ, ಬೆಳಕು, ರಂಗ ವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ಪ್ರದರ್ಶನ ಹೀಗೆ ಹತ್ತು ಹಲವು ತರಬೇತಿಗಳನ್ನ ಪಡೆಯಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ
    ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ನಟನಾ ರಂಗ ಶಾಲೆಯ ಕಚೇರಿ ಸಂಖ್ಯೆ 7259037777 ಸಂಪರ್ಕಿಸಬಹುದಾಗಿದೆ.
    Published by:guruganesh bhat
    First published: