• Home
  • »
  • News
  • »
  • mysuru
  • »
  • Mysuru Trin Trin Cycle: ಸೈಕಲ್ ಸವಾರರಿಗೆ ಸಂತಸದ ಸುದ್ದಿ; ಇನ್ಮೇಲೆ ಈ ಮಾರ್ಗಗಳಲ್ಲೂ ಬೈಸಿಕಲ್ ಓಡಿಸಿ!

Mysuru Trin Trin Cycle: ಸೈಕಲ್ ಸವಾರರಿಗೆ ಸಂತಸದ ಸುದ್ದಿ; ಇನ್ಮೇಲೆ ಈ ಮಾರ್ಗಗಳಲ್ಲೂ ಬೈಸಿಕಲ್ ಓಡಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗಾಗಲೇ ಮೈಸೂರಿನ 17,300 ನಾಗರಿಕರು ಸೈಕಲ್ ಬಳಸಲು ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲದೇ ಮೈಸೂರಿನಲ್ಲಿ 450 ಟ್ರಿಣ್ ಟ್ರಿಣ್ ಸೈಕಲ್​ಗಳು ಸಾರ್ವಜನಿಕರ ಬಳಕೆಗೆ ಎಂದೇ ಇದೆ.

  • News18 Kannada
  • Last Updated :
  • Mysore, India
  • Share this:

    ಮೈಸೂರು ಅಂದ್ರೇನೇ ಸಾಕು, ಅರಮನೆ, ಚಾಮುಂಡಿ ಬೆಟ್ಟ ಜೊತೆಗೆ ಟ್ರಿಣ್ ಟ್ರಿಣ್ ಸೈಕಲ್ ಸಹ ಥಟ್ ಅಂತ ನೆನಪಾಗುತ್ತೆ. ಇದೀಗ ಮೈಸೂರಿನ ಮುಖ್ಯಭಾಗದಲ್ಲಿ ಬರೋಬ್ಬರಿ 8.7 ಕಿಲೋ ಮೀಟರ್ ಸೈಕಲ್ ಟ್ರ್ಯಾಕ್ ನಿರ್ಮಾಣ ಆರಂಭಿಸಲು ನಿರ್ಧರಿಸಲಾಗಿದೆ ಮುನ್ನವೇ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ (Mysuru Trin Trin Cycle) ಎಂಬ ಹೆಸರಿನ ಸೈಕಲ್ ಬಳಕೆ ಯೋಜನೆಯನ್ನು ಆರಂಭಿಸಲಾಗಿತ್ತು. ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪಿ.ಎಸ್.ವಸ್ತ್ರದ್ ಅವರು ಯೋಜನೆ ಆರಂಭಿಸಿದ್ದರು. ಅಲ್ಲದೇ ಪ್ರತಿ ಸೋಮವಾರ ಕಚೇರಿಗೆ ಸೈಕಲ್ ಸವಾರಿ ಮಾಡಿ ಟ್ರಿಣ್ ಟ್ರಿಣ್ಗೆ (Trin Trin Cycle Project) ಮುನ್ನುಡಿ ಬರೆದಿದ್ದರು. ಇದೀಗ ಟ್ರಿಣ್ ಟ್ರಿಣ್ ಯೋಜನೆಗಾಗಿ 8.7 ಕಿಲೋ ಮೀಟರ್ ಸೈಕಲ್ ಟ್ರ್ಯಾಕ್ ನಿರ್ಮಿಸಲು ಇನ್ನೇನು ಕಾಮಗಾರಿ ಆರಂಭವಾಗಲಿದೆ.


    ಮೈಸೂರಿನಲ್ಲಿ ಈಗಲೂ ಸೈಕಲ್ ಓಡಿಸಲು ಎಂದೇ ಪ್ರತ್ಯೇಕ ರಸ್ತೆಯಿದೆ. ಸದ್ಯ ಮೈಸೂರಿನ ಲಲಿತಮಹಲ್ರಸ್ತೆ ಮತ್ತು ಕೆ.ಆರ್‌.ಎಸ್‌. ರಸ್ತೆಯ ಚೆಲುವಾಂಬ ಪಾರ್ಕ್ ಬಳಿ ಸೈಕಲ್ಟ್ರ್ಯಾಕ್​ಗಳಿವೆ. ಈಗಾಗಲೇ ಮೈಸೂರಿನ 17,300 ನಾಗರಿಕರು ಸೈಕಲ್ ಬಳಸಲು ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲದೇ ಮೈಸೂರಿನಲ್ಲಿ 450 ಟ್ರಿಣ್ ಟ್ರಿಣ್ ಸೈಕಲ್​ಗಳು ಸಾರ್ವಜನಿಕರ ಬಳಕೆಗೆ ಎಂದೇ ಇದೆ.


    ಮೈಸೂರಿನ ಈ ಭಾಗಗಳಲ್ಲಿ ಹೊಸ ಸೈಕಲ್ ಟ್ರ್ಯಾಕ್ ನಿರ್ಮಾಣ
    ಮೈಸೂರಿನಲ್ಲಿ ಸೈಕಲ್ ಬಳಕೆದಾರರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಎಂದೇ ಹೊಸ ಸೈಕಲ್ ಟ್ರ್ಯಾಕ್ ನಿರ್ಮಾಣ ಕೈಗೊಳ್ಳಲಾಗುತ್ತಿದೆ. ರಮಾ ವಿಲಾಸ ರಸ್ತೆ, ಕೌಟಿಲ್ಯ ವೃತ್ತದ ರಸ್ತೆ, ರಾಮಸ್ವಾಮಿ ವೃತ್ತದಿಂದ ದಾಸಪ್ಪ ವೃತ್ತ, ಮೈಸೂರು ವಿಶ್ವವಿದ್ಯಾಲಯದ ರಸ್ತೆ, ಕೌಟಿಲ್ಯ ವೃತ್ತದಿಂದ ಮುಡಾ ಕಚೇರಿ, ರಾಮಸ್ವಾಮಿ ವೃತ್ತದಿಂದ ಬಲ್ಲಾಳ್ಸರ್ಕಲ್, ಕುಕ್ಕರಹಳ್ಳಿಯಿಂದ ವಿಶ್ವ ಮಾನವ ಜೋಡಿ ರಸ್ತೆ ಮಾರ್ಗವಾಗಿ ರಿಂಗ್ರಸ್ತೆಗೆ ಸೇರುವ ರಸ್ತೆ, ಮಾನಸ ಗಂಗೋತ್ರಿ ಪ್ರವೇಶದ್ವಾರದ ಕುವೆಂಪು ಪ್ರತಿಮೆಯಿಂದ ಕುಕ್ಕರಹಳ್ಳಿ ರಸ್ತೆ, ಅಶೋಕ ವೃತ್ತದಿಂದ ಟೆನಿಸ್ಕೋರ್ಟ್‌, ಚಾಮರಾಜ ಜೋಡಿ ರಸ್ತೆ, ತನಕ ಸೈಕಲ್ಟ್ರ್ಯಾಕ್ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.


    ಇದನ್ನೂ ಓದಿ: Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ


    ನೀವೂ ಟ್ರಿಣ್ ಟ್ರಿಣ್ ಸೈಕಲ್ ಚಲಾಯಿಸಲು ಎಲ್ಲಿ ನೋಂದಣಿ ಮಾಡಬಹುದು?
    ಸೈಕಲ್ ಸವಾರಿಯನ್ನು ಮೈಸೂರು ನಗರದಲ್ಲಿ ಉತ್ತೇಜಿಸಲು ಆರಂಭಿಸಲಾದ ಟ್ರಿಣ್ ಟ್ರೀಣ್ ಸೈಕಲ್ ಯೋಜನೆಯಡಿ ನೀವೂ ಸೈಕಲ್ ಓಡಿಸಬಹುದು.


    ಇದನ್ನೂ ಓದಿ: Uttara Kannada: ಸ್ವತಃ ಕರೆಂಟ್ ತಯಾರಿಸೋ ಶಿರಸಿಯ ಗ್ರಾಮಸ್ಥರು! ಇವರಿಗೆ ಸರ್ಕಾರಿ ವಿದ್ಯುತ್ ಬೇಕಂತಿಲ್ಲ!


    ಮೈಸೂರು ಚಾಮರಾಜೇಂದ್ರ ಮೃಗಾಲಯ, ಮೈಸೂರು ಅರಮನೆಯ ಹತ್ತಿರ, ಮೈಸೂರು ನಗರದ ಬಸ್‌ ನಿಲ್ದಾಣ, ಮೈಸೂರು ಗ್ರಾಮಾಂತರ ಬಸ್‌ ನಿಲ್ದಾಣ, ಮೈಸೂರು ರೈಲ್ವೆ ನಿಲ್ದಾಣ ಮತ್ತು ಮೈಸೂರು ಪ್ರಾದೇಶಿಕ ಸಾರಿಗೆ ಕಚೇರಿಯ ಬಳಿ ಇರುವ ಟ್ರಿಣ್ ಟ್ರಿಣ್ ಸೈಕಲ್ ನೋಂದಣಿ ಕೇಂದ್ರಗಳಲ್ಲಿ ನೀವೂ ಸಹ ನೋಂದಣಿ ಮಾಡಿಕೊಳ್ಳಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: