• Home
 • »
 • News
 • »
 • mysuru
 • »
 • Mysuru News: ಚಾಮುಂಡೇಶ್ವರಿ ದರ್ಶನ ನಿರ್ಬಂಧ, ಮಲೆ ಮಹದೇಶ್ವರ ದೇಗುಲ ಓಪನ್

Mysuru News: ಚಾಮುಂಡೇಶ್ವರಿ ದರ್ಶನ ನಿರ್ಬಂಧ, ಮಲೆ ಮಹದೇಶ್ವರ ದೇಗುಲ ಓಪನ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗ್ರಹಣ ಸಂದರ್ಭದಲ್ಲಿ ಹಿಂದೆ ಎಂದೂ ಸಹ ದೇವಾಲಯ ಬಂದ್ ಮಾಡಿಲ್ಲ. ಈಗ ಅದೇ ಸಂಪ್ರದಾಯ ಮುಂದುವರಿಯಲಿದೆ ಎಂದು ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ಸ್ಪಷ್ಟಪಡಿಸಿದ್ದಾರೆ.

 • Share this:

  ಮೈಸೂರು: ದೀಪಾವಳಿ ರಜೆಯಲ್ಲಿ ಮೈಸೂರು ಪ್ರವಾಸ  (Mysuru Trip)ಮಾಡ್ಬೇಕು ಅಂದ್ಕೊಂಡಿದ್ದೀರಾ? ಹಾಗಾದ್ರೆ ಈ ಸುದ್ದಿಯನ್ನ ನೀವು ತಪ್ಪದೇ ಓದಬೇಕು. ಅಕ್ಟೋಬರ್ 25 ರಂದು 27 ವರ್ಷಗಳ ನಂತರ ಮೊದಲ ಬಾರಿಗೆ ದೀಪಾವಳಿ ದಿನವೇ ಅಮವಾಸ್ಯೆ ಬಂದಿರುವ ಕಾರಣ ಮಧ್ಯಾಹ್ನ 1 ಗಂಟೆಯಿಂದ ಭಕ್ತರಿಗೆ ಚಾಮುಂಡೇಶ್ವರಿ ತಾಯಿಯ ದರ್ಶನ (Chamundeshwari Temple Darshan) ನಿರ್ಬಂಧಿಸಲಾಗಿದೆ.


  ಅಕ್ಟೋಬರ್ 25 ರಂದು ಗ್ರಹಣದ ಪ್ರಾರಂಭ ಸ್ಪರ್ಷಕಾಲ ಮತ್ತು ಮೋಕ್ಷಕಾಲದಲ್ಲಿ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜಾ ಕಾರ್ಯಗಳು ಜರುಗಲಿವೆ. ಅಲ್ಲದೇ ಚಾಮುಂಡೇಶ್ವರಿ ದೇಗುಲದ ಸ್ವಚ್ಛತಾ ಕಾರ್ಯಗಳು ಸಹ ಇದೇ ಸಂದರ್ಭದಲ್ಲಿ ನಡೆಯಲು ಉದ್ದೇಶಿಲಾಗಿದೆ. ಈ ಕಾರಣಗಳಿಂದ ಮಧ್ಯಾಹ್ನ 1 ಗಂಟೆಯಿಂದ ಭಕ್ತರಿಗೆ ಚಾಮುಂಡೇಶ್ವರಿ ತಾಯಿಯ ದರ್ಶನ ಇರುವುದಿಲ್ಲ ಎಂದು ದೇಗುಲದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.


  ಮಲೆ ಮಹದೇಶ್ವರ ದೇಗುಲ ಬಂದ್ ಇರುತ್ತಾ? ಇಲ್ವಾ?
  ಮಲೆ ಮಹದೇಶ್ವರ ದೇಗುಲದಲ್ಲಿ ಸೂರ್ಯಗ್ರಹಣದ ನಿಮಿತ್ತ ದರ್ಶನದ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸೂರ್ಯಗ್ರಹಣದ ಸಮಯದಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ದೇಗುಲ ಬಂದ್ ಇರುವುದಿಲ್ಲ. ಭಕ್ತರಿಗೆ ಎಂದಿನಂತೆ ದರ್ಶನಾವಕಾಶ ಇರಲಿದೆ. ಎಂದಿನಂತೆ ಪ್ರಸಾದ ವ್ಯವಸ್ಥೆಯು ಇರಲಿದೆ ಎಂದು ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ಮಾಹಿತಿ ನೀಡಿದ್ದಾರೆ.


  ಇದನ್ನೂ ಓದಿ: Sahasralinga: ಇಲ್ಲಿ ಕೈಲಾಸವೇ ಧರೆಗಿಳಿದಿದೆ! ಪ್ರತಿ ಕಲ್ಲಿನಲ್ಲೂ ಪರಶಿವ!


  ಈ ಹಿಂದೆಯೂ ಎಂದೂ ಬಂದ್ ಮಾಡಿರಲಿಲ್ಲ
  ಗ್ರಹಣ ಸಂದರ್ಭದಲ್ಲಿ ಹಿಂದೆ ಎಂದೂ ಸಹ ದೇವಾಲಯ ಬಂದ್ ಮಾಡಿಲ್ಲ. ಈಗ ಅದೇ ಸಂಪ್ರದಾಯ ಮುಂದುವರಿಯಲಿದೆ. ಭಕ್ತರಿಗೆ ಯಾವುದೇ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವುದಿಲ್ಲ ಎಂದು ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ಸ್ಪಷ್ಟಪಡಿಸಿದ್ದಾರೆ.


  ಕಟೀಲಿಗೆ ಬರುವವರು ಗಮನಿಸಿ
  ಕರಾವಳಿಯ ಪ್ರಸಿದ್ಧ ದೇವಿ ದೇವಸ್ಥಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಸಣ್ಣ ಮಟ್ಟಿನ‌ ಬದಲಾವಣೆ ಅಷ್ಟೇ ಕಾಣಬಹುದಾಗಿದೆ. ಸೂರ್ಯಗ್ರಹಣ ದಿನ ಮಧ್ಯಾಹ್ನ ಎಂದಿನಂತೆ ಅನ್ನಪ್ರಸಾದವಿರುತ್ತದೆ. ಗ್ರಹಣ‌ ಸಮಯದಲ್ಲೂ‌ ದೇಗುಲಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಗ್ರಹಣದಿಂದ ಮೋಕ್ಷದ ಅವಧಿವರೆಗೂ ಭಕ್ತರಿಗೆ ದೇವಳಕ್ಕೆ ಸುತ್ತು ಬರಲು ಹಾಗೂ ಜಪ ಮಾಡಬಹುದಷ್ಟೇ. ಅದರ ಹೊರತಾಗಿ ಈ ಅವಧಿಯಲ್ಲಿ ಯಾವುದೇ ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ.


  ಇದನ್ನೂ ಓದಿ: Sabarimala Temple: ಉತ್ತರ ಕನ್ನಡದ ಶಬರಿಮಲೆ! ಇದು ಅಯ್ಯಪ್ಪ ಭಕ್ತರ ಮೆಚ್ಚಿನ ತಾಣ


  ಬಪ್ಪನಾಡಲ್ಲಿ ಸೇವೆ ಸ್ಥಗಿತ
  ದೇವಿ ದೇವಸ್ಥಾನ ಮಂಗಳೂರು ಹೊರವಲಯದ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೂರ್ಯ ಗ್ರಹಣ ಸಮಯದಲ್ಲಿ ಯಾವುದೇ ಸೇವೆ, ಪೂಜೆ, ಪ್ರಸಾದ ವಿತರಣೆ ನಡೆಯದು. ಅಂದು ಸಂಜೆ 4.45ರಿಂದ 6.45ರ ವರೆಗೆ ಯಾವುದೇ ಪೂಜೆ, ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ. ಸಂಜೆ 6.45ರ ಬಳಿಕ ನಿತ್ಯ ಪೂಜೆ ಜರುಗಲಿದೆ. ಆದರೆ, ಮಧ್ಯಾಹ್ನ ಜರುಗುವ ಅನ್ನಪ್ರಸಾದ ಇರುವುದಿಲ್ಲ.


  ಕುಕ್ಕೆಯಲ್ಲಿ ದರ್ಶನ, ಅನ್ನ ಪ್ರಸಾದವಿಲ್ಲ
  ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೂರ್ಯ ಗ್ರಹಣ ದಿನ ಅಕ್ಟೋಬರ್ 25 ರಂದು ಯಾವುದೇ ಸೇವೆಗಳು, ದರ್ಶನ ಹಾಗೂ ಭೋಜನ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಮರುದಿನ‌ ಅಕ್ಟೋಬರ್ 26ರಂದು ಕ್ಷೇತ್ರದಲ್ಲಿ ನಿತ್ಯ ಪೂಜಾ ಸಮಯಗಳಲ್ಲೂ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ ಗಂಟೆ 9 ಯಿಂದ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ.


  ಧರ್ಮಸ್ಥಳದ ಬದಲಾವಣೆ ಹೀಗಿದೆ
  ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನದ ಸಮಯದಲ್ಲಿ ಕೊಂಚ ಬದಲಾವಣೆಯನ್ನಷ್ಟೇ ಮಾಡಲಾಗಿರುತ್ತದೆ. ಸೂರ್ಯ ಗ್ರಹಣವು ಸಾಯಂಕಾಲ ಘಟಿಸುವುದರಿಂದ ಮಧ್ಯಾಹ್ನದವರೆಗೆ ಎಂದಿನಂತೆ ದೇವರ ದರ್ಶನ, ಅನ್ನ ಪ್ರಸಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2.30ರಿಂದ ರಾತ್ರಿ 7.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅಲ್ಲದೇ, ಅನ್ನಛತ್ರದಲ್ಲಿ ಮಧ್ಯಾಹ್ನ 2.30 ರವರೆಗೆ ಭೋಜನದ ವ್ಯವಸ್ಥೆಯೂ ಇರಲಿದೆ. ಮಾತ್ರವಲ್ಲದೇ ರಾತ್ರಿ 7.30 ರ ನಂತರ ಮತ್ತೆ ಅನ್ನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕ್ಷೇತ್ರದ ಪ್ರಕಟಣೆಯು ತಿಳಿಸಿದೆ.

  Published by:ಗುರುಗಣೇಶ ಡಬ್ಗುಳಿ
  First published: