• ಹೋಂ
  • »
  • ನ್ಯೂಸ್
  • »
  • ಮೈಸೂರು
  • »
  • Harassment: ಆನ್‌ಲೈನ್ ಮೀಟಿಂಗ್‌ನಲ್ಲೇ ಗಾಳ, ಬೆತ್ತಲೆ ಫೋಟೋ ಕಳಿಸಿ ಕಿರುಕುಳ! ಕೊನೆಗೂ ಖಾಕಿ ಬಲೆಗೆ ಬಿದ್ದ ಕಾಮುಕ

Harassment: ಆನ್‌ಲೈನ್ ಮೀಟಿಂಗ್‌ನಲ್ಲೇ ಗಾಳ, ಬೆತ್ತಲೆ ಫೋಟೋ ಕಳಿಸಿ ಕಿರುಕುಳ! ಕೊನೆಗೂ ಖಾಕಿ ಬಲೆಗೆ ಬಿದ್ದ ಕಾಮುಕ

ಬಂಧಿತ ಆರೋಪಿ

ಬಂಧಿತ ಆರೋಪಿ

ಮೈಸೂರಿನಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಾಮುಕನೊಬ್ಬ ಆನ್‌ಲೈನ್‌ ಮೀಟಿಂಗ್‌ನಲ್ಲಿ ಯುವತಿಯರಿಗೆ ಗಾಳ ಹಾಕಿ, ಬಳಿಕ ಬೆತ್ತಲೆ ಫೋಟೋ ಕಳಿಸಿ ಕಿರುಕುಳ ಕೊಡುತ್ತಿದ್ದನಂತೆ. ಇದೀಗ ಆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

  • Share this:

ಮೈಸೂರು: ಈಗೆಲ್ಲ ಕೊರೋನ (Corona) ಬಂದ ಮೇಲೆ ವರ್ಕ್ ಫ್ರಂ ಹೋಂ (Work from Home) ಸೌಲಭ್ಯಗಳು ಹೆಚ್ಚಾಯ್ತು. ಆಗ ಆಫೀಸ್‌ ಮೀಟಿಂಗ್ (Office Meeting) ಇತ್ಯಾದಿಗಳು ಆನ್‌ಲೈನ್‌ನಲ್ಲೆ (Online) ಹೆಚ್ಚು ಹೆಚ್ಚು ನಡೆದವು. ಮುಖ್ಯವಾಗಿ ಗೂಗಲ್ ಮೀಟ್ (Google Meet), ಝೂಮ್ (Zoom) ಇತ್ಯಾದಿ ಆ್ಯಪ್‌ಗಳಲ್ಲಿ (App) ಆನ್‌ ಲೈನ್ ಮೀಟಿಂಗ್ ನಡೆಯೋದು ಕಾಮನ್ ಆಯ್ತು. ಆದರೆ ಇದನ್ನೂ ಕಾಮುಕರು ತಮ್ಮ ಚಪಲ ತೀರಿಸಿಕೊಳ್ಳಲು ಬಳಸಿಕೊಂಡ್ರು ಅಂದ್ರೆ ನಂಬುತ್ತೀರಾ? ನಂಬಲೇ ಬೇಕು, ಯಾಕೆಂದ್ರೆ ಮೈಸೂರಿನಲ್ಲಿ (Mysuru) ಇಂಥದ್ದೊಂದು ಪ್ರಕರಣ (Case) ಬೆಳಕಿಗೆ ಬಂದಿದೆ. ಕಾಮುಕನೊಬ್ಬ ಆನ್‌ಲೈನ್‌ ಮೀಟಿಂಗ್‌ನಲ್ಲಿ ಯುವತಿಯರಿಗೆ (Ladies) ಗಾಳ ಹಾಕಿ, ಬಳಿಕ ಬೆತ್ತಲೆ ಫೋಟೋ (Photos) ಕಳಿಸಿ ಕಿರುಕುಳ ಕೊಡುತ್ತಿದ್ದನಂತೆ. ಇದೀಗ ಆ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.


ಮೈಸೂರಿನಲ್ಲಿ ಕಾಮುಕ ಅಂದರ್


ಆನ್‌ಲೈನ್ ಮೀಟಿಂಗ್‌ನಲ್ಲಿ ಯುವತಿಯರ ಗಮನ ಸೆಳೆದು, ಬಳಿಕ ಅವರ ಹತ್ತಿರ ಸಲುಗೆ ಬೆಳೆಸಿ, ಆ ಮೇಲೆ ಅವರಿಗೆ ಕಿರುಕುಳ ನೀಡುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯವಾಗಿ ಈತ ಗೂಗಲ್ ಮೀಟ್, ಫೇಸ್‌ಬುಕ್​ನಲ್ಲಿ ಯುವತಿಯರಿಗೆ ಗಾಳ ಹಾಕಿ, ಬೆತ್ತಲೆ ಫೋಟೋ ಕಳುಹಿಸುತ್ತಿದ್ದನಂತೆ. ಈ ಆರೋಪದ ಮೇಲೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ಬಿ.ಜಿ.ಶಿವಪ್ರಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಪ್ರೀತಿ ಪ್ರೇಮದ ನಾಟಕವಾಡಿ, ಲೈಂಗಿಕ ಕಿರುಕುಳ


ಬಂಧಿತ ಆರೋಪಿ ಶಿವಪ್ರಕಾಶ್ ಯುವತಿಯರನ್ನು ಪರಿಚಯಿಸಿಕೊಂಡು ಪ್ರೀತಿ, ಪ್ರೇಮದ ನಾಟಕವಾಡುತ್ತಿದ್ದನಂತೆ. ಬೆತ್ತಲೆ ಫೋಟೋ ಕಳುಹಿಸಿ, ಕಿರುಕುಳ ನೀಡುತ್ತಿದ್ದನಂತೆ.  ಬಳಿಕ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ಹಣ ಪೀಕುತ್ತಿದ್ದನಂತೆ.


ಇದನ್ನೂ ಓದಿ: IPL Betting: ಅವಳಿ ನಗರದಲ್ಲಿ ಜೋರಾದ ಬೆಟ್ಟಿಂಗ್ ದಂಧೆ! 58 ಪ್ರಕರಣ ದಾಖಲು, 4.23 ಲಕ್ಷ ರೂಪಾಯಿ ಜಪ್ತಿ


ಯುವತಿಯಿಂದ 20 ಲಕ್ಷ ರೂಪಾಯಿ ಪಡೆದಿದ್ದ ಖದೀಮ


ಈತ ಮೈಸೂರು ಮೂಲದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು 20 ಲಕ್ಷ ರೂ ವರೆಗೆ ಹಣ ಪಡೆದಿದ್ದ ಎಂದು ದೂರು ದಾಖಲಾಗಿತ್ತು. ಈ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಹಲವು ಯುವತಿಯರನ್ನು ದುರುಪಯೋಗ ಮಾಡಿಕೊಂಡು ಏಕಾಂತದಲ್ಲಿರುವ ವಿಡಿಯೋ ಮಾಡಿಕೊಂಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇದೀಗ ಈತನ್ನು ಬಂಧಿಸಿರುವ ಮೈಸೂರಿನ ಮಹಿಳಾ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.


ಹನಿಟ್ರ್ಯಾಪ್​ಗೆ ಬಿಜೆಪಿ ಮುಖಂಡ ಬಲಿ; ಡೆತ್​ ನೋಟ್​ನಲ್ಲಿ ಯಾರ ಹೆಸರಿದೆ ಗೊತ್ತಾ?


ಬಿಜೆಪಿ ಮುಖಂಡ ಅನಂತ ರಾಜು (BJP Leader Anant Raju) ಆತ್ಮಹತ್ಯೆ ಸಾಕಷ್ಟು ಅನುಮಾನ ಮೂಡಿತ್ತು. ಪೊಲೀಸರ ತನಿಖೆ ವೇಳೆ ಈಗ ಸಾವಿನ‌ ಹಿಂದೆ ಹೆಣ್ಣಿನ ಕರಿನೆರಳು ಪತ್ತೆಯಾಗಿದೆ. ಅನಾರೋಗ್ಯದಿಂದ ಅನಂತರಾಜು ಸತ್ತಿಲ್ಲ , ಬದಲಾಗಿ ಹನಿಟ್ರ್ಯಾಪ್ (Honeytrap)​ ಬಲೆಯಲ್ಲಿ ಸಿಲುಕಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಇದೀಗ ಗೊತ್ತಾಗಿದ್ದು, ಡೆತ್ ನೋಟ್​ನಲ್ಲಿ (Death Note) ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಲಾಗಿದೆ.  ಬಿಜೆಪಿ ಮುಖಂಡ ಅನಂತ ರಾಜು ಪತ್ನಿ ದೂರಿನನ್ವಯ FIR ದಾಖಲು ಮಾಡಲಾಗಿದೆ. ಬಿಜೆಪಿ ಮುಖಂಡ  ಅನಂತರಾಜು ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್​ನಲ್ಲಿ ರೇಖಾ , ವಿನೋದ್ , ಸ್ಪಂದನ ಎಂಬುವವರ ಹೆಸರು ಉಲ್ಲೇಖ ಮಾಡಿದ್ದಾರೆ.


ಇದನ್ನೂ ಓದಿ: Murder: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನೇ ಕೊಂದ ಅಕ್ಕ! ಪೊಲೀಸರನ್ನು ಯಾಮಾರಿಸೋಕೆ ಹೋಗಿ ಖೆಡ್ಡಕ್ಕೆ ಬಿದ್ದ ಕಿಲಾಡಿ ಜೋಡಿ


ಡೆತ್ ನೋಟ್ ಬರೆದಿತ್ತು ಬಿಜೆಪಿ ಮುಖಂಡ‌ ಸೂಸೈಡ್!


ಪ್ರಿಯ ಪತ್ನಿ  ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ.‌ ನಿನ್ನಲ್ಲಿ ಕ್ಷಮೆ ಕೇಳಲು ನಾನು ಅರ್ಹನಲ್ಲ.‌ ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ ವೀಡಿಯೊಗಳ ಟ್ರ್ಯಾಪ್ ಗೆ ಸಿಲುಕಿದ್ದೆ. ಬ್ಲ್ಯಾಕ್ ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ಮಕ್ಕಳನ್ನ ಚೆನ್ನಾಗಿ ನೋಡಿಕೊ. ಇಂತಿ ನಿನ್ನ ಮೋಸಗಾರ.. ಇನ್ಸ್ ಪೆಕ್ಟರ್, ನನಗೆ ಕಿರುಕುಳ ನೀಡಿ ಬ್ಲ್ಯಾಕ್ ಮೇಲ್ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ. ಈಗಂತ ಡೆತ್ ನೋಟ್ ಬರೆದು ಬಿಜೆಪಿ ಮುಖಂಡ ಅನಂತರಾಜು ಮೇ 13 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು