Double Decker Bus: ರಾಜ್ಯದ ಈ ನಗರಗಳಲ್ಲೂ ಡಬಲ್ ಡೆಕರ್ ಬಸ್ ಸೇವೆ!

ಡಬಲ್ ಡೆಕರ್ ಬಸ್ (ಸಾಂದರ್ಭಿಕ ಚಿತ್ರ

ಡಬಲ್ ಡೆಕರ್ ಬಸ್ (ಸಾಂದರ್ಭಿಕ ಚಿತ್ರ

ಹಳೆಯ ಕನ್ನಡ ಸಿನಿಮಾಗಳಲ್ಲಿ ಬೆಂಗಳೂರಿನ ಡಬಲ್ ಡೆಕರ್​ ಬಸ್​ಗಳ ಸವಾರಿಯನ್ನು ವೀಕ್ಷಿಸಬಹುದು. 1997ರ ವೇಳೆಗೆ ಅವುಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಗಿತ್ತು.

  • News18
  • 4-MIN READ
  • Last Updated :
  • Mysore, India
  • Share this:

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru News) ಡಬಲ್ ಡೆಕರ್ ಬಸ್​ಗಳನ್ನು ಪರಿಚಯಿಸಲು (Double Decker Bus In Bengaluru) ಬಿಎಂಟಿಸಿ ನಿರ್ಧರಿಸಿದ್ದು ಗೊತ್ತೇ ಇದೆ. ಇದೀಗ ಇದೇ ಡಬಲ್ ಡೆಕರ್ ಬಸ್​ಗಳ ಬಗ್ಗೆ ಇನ್ನೊಂದು ಮಹತ್ವದ ಅಪ್​ಡೇಟ್ ಹೊರಬಿದ್ದಿದೆ. ಕೆಎಸ್​ಆರ್​ಟಿಸಿ (KSRTC Double Decker Bus ) ಸಹ ವಿವಿಧ ನಗರಗಳಲ್ಲಿ ಡಬಲ್ ಡೆಕರ್ ಬಸ್​ಗಳ ಸೌಲಭ್ಯ ಆರಂಭಿಸಲು ಸಜ್ಜಾಗಿದೆ.


    ಬೆಂಗಳೂರು ನಗರದ ಬಿಎಂಟಿಸಿ ವ್ಯಾಪ್ತಿಯಲ್ಲಿ ಜುಲೈ ತಿಂಗಳಲ್ಲಿ ಅತ್ಯಾಧುನಿಕ ಡಬಲ್ ಡೆಕರ್ ಇ-ಬಸ್‌ಗಳು ರಸ್ತೆಗಿಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.


    ಈ ನಗರಗಳ ಸಾರಿಗೆಯಲ್ಲಿ ಡಬಲ್ ಡೆಕರ್ ಬಸ್​
    ಇನ್ನು ಕೆಎಸ್​ಆರ್​ಟಿಸಿ ವತಿಯಿಂದ ಮೈಸೂರು ಮತ್ತು ತುಮಕೂರು ನಗರಗಳಲ್ಲೂ ಡಬಲ್ ಡೆಕರ್ ಬಸ್​ಗಳು ರಸ್ತೆಗೆ ಇಳಿಯಲಿವೆ. 2023ರ ಅಂತ್ಯದ ವೇಳೆಗೆ ಈ ಬಸ್​ಗಳ ಸೇವೆ ಆರಂಭಿಸಲು KSRTC ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ. ಈ ಡಬಲ್ ಡೆಕರ್ ಬಸ್​ಗಳಲ್ಲಿ ಎಸಿ ಸೌಲಭ್ಯವೂ ಇರಲಿದೆ ಎನ್ನಲಾಗಿದೆ. ಜೊತೆಗೆ ಈ ಡಬಲ್ ಡೆಕರ್ ಬಸ್​ಗಳು ಎಲೆಕ್ಟ್ರಿಕ್ ಬಸ್​ಗಳೂ ಆಗಿರಲಿವೆ ಅನ್ನೋದು ಇನ್ನೊಂದು ವಿಶೇಷವಾಗಿದೆ.


    ಬೆಂಗಳೂರಿನ ರಸ್ತೆಗಳನ್ನು ಆಳಿದ್ದ ಡಬಲ್ ಡೆಕರ್ ಬಸ್​ಗಳು
    ಡಬಲ್ ಡೆಕರ್ ಡೀಸೆಲ್ ಬಸ್‌ಗಳು 1970-80ರ ದಶಕದಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯ ದೃಶ್ಯವಾಗಿತ್ತು. 1970-80 ರಲ್ಲಿ ಡಬಲ್ ಡೆಕರ್​ಗಳು ಬೆಂಗಳೂರಿನ ರಸ್ತೆಗಳನ್ನು ಆಳಿದ್ದವು. ಹಳೆಯ ಕನ್ನಡ ಸಿನಿಮಾಗಳಲ್ಲಿ ಬೆಂಗಳೂರಿನ ಡಬಲ್ ಡೆಕರ್​ ಬಸ್​ಗಳ ಸವಾರಿಯನ್ನು ವೀಕ್ಷಿಸಬಹುದು. 1997ರ ವೇಳೆಗೆ ಅವುಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಗಿತ್ತು.




    ಮೂರು ಸಂಸ್ಥೆಗಳು - ಅಶೋಕ್ ಲೇಲ್ಯಾಂಡ್-ಬೆಂಬಲಿತ ಸ್ವಿಚ್ ಮೊಬಿಲಿಟಿ, ಕಾಸಿಸ್ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ ಯೋಜನೆಯಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿವೆ.


    ಮೊದಲ ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್ ಅನ್ನು ಏಪ್ರಿಲ್ ಮತ್ತು ಜೂನ್ ನಡುವೆ ಪರಿಚಯಿಸಲಾಗುವುದು ಎಂದು BMTC ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


    ಡಬಲ್ ಡೆಕರ್ ಬಸ್​ಗಳಿಗೂ ಇದೆ ಕೆಲವು ಮಿತಿ
    ಡಬಲ್ ಡೆಕರ್ ಬಸ್​ಗಳು ಎಲ್ಲ ರಸ್ತೆಗಳಲ್ಲೂ ಸಂಚರಿಸಲಾರವು. ರಸ್ತೆ ಬದಿ ಮರ ಇರುವಲ್ಲಿ, ಮೇಲ್ಸೇತುವೆ, ಕೆಳಸೇತುವೆ ಇರುವಲ್ಲಿ ಡಬಲ್ ಡೆಕರ್ ಬಸ್ ಸಂಚಾರ ಅಸಾಧ್ಯ.


    ಇದನ್ನೂ ಓದಿ: Hubballi Vande Bharat Train: 5 ಗಂಟೆಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ- ಧಾರವಾಡ!


    ಎಲ್ಲಿ ಮೊದಲ ಸಂಚಾರ?
    ಸದ್ಯ ಆರಂಭವಾಗಲಿರುವ ಡಬಲ್ ಡೆಕರ್ ಬಸ್‌ಗಳ ಉದ್ದವು 9,500 ಎಂಎಂ ಮತ್ತು 11,000 ಎಂಎಂ ನಡುವೆ ಇರಲಿದೆ. ಮೊದಲ ಡಬಲ್ ಡೆಕರ್ ಇ-ಬಸ್ ಬೆಂಗಳೂರಿನ ಔಟರ್ ರಿಂಗ್ ರೋಡ್​ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.


    ಇದನ್ನೂ ಓದಿ: Bengaluru News: ಬೆಂಗಳೂರು ಉಪನಗರ ರೈಲಿಗೆ ಮೆಟ್ರೋ ರೀತಿಯ ಬೋಗಿ!


    70 ಜನರ ಆಸನ ಸಾಮರ್ಥ್ಯ
    ಈ ಬಸ್‌ಗಳು ಸುಮಾರು 70 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: