• Home
  • »
  • News
  • »
  • mysuru
  • »
  • Success Story: ಕಲಿತ ವಿಶ್ವವಿದ್ಯಾಲಯಕ್ಕೇ ಕುಲಸಚಿವೆಯಾದ ವಿದ್ಯಾರ್ಥಿ!

Success Story: ಕಲಿತ ವಿಶ್ವವಿದ್ಯಾಲಯಕ್ಕೇ ಕುಲಸಚಿವೆಯಾದ ವಿದ್ಯಾರ್ಥಿ!

KAS ಅಧಿಕಾರಿ ವಿಆರ್ ಶೈಲಜಾ

KAS ಅಧಿಕಾರಿ ವಿಆರ್ ಶೈಲಜಾ

ಪದವಿಯಲ್ಲಿ ಒಟ್ಟು 9 ಚಿನ್ನದ ಪದಕ ಮತ್ತು 9 ನಗದು ಪುರಸ್ಕಾರಕ್ಕೂ ಭಾಜನರಾಗಿದ್ದ ಅವರು ಇದೀಗ ತಾವು ಅಂದು ಓದಿದ ಮೈಸೂರು ವಿಶ್ವವಿದ್ಯಾಲಯಕ್ಕೇ ಕುಲಸಚಿವೆಯಾಗಿ ನೇಮಕವಾಗಿದ್ದಾರೆ.

  • News18 Kannada
  • Last Updated :
  • Mysore, India
  • Share this:

    ಮೈಸೂರು: ಕಲಿತ ವಿಶ್ವವಿದ್ಯಾಲಯದಲ್ಲೇ ಕುಲಸಚಿವೆಯ ಸ್ಥಾನಅಲಂಕರಿಸುವುದು ಅಂದ್ರೆ!?  ಅಬ್ಬಾ! ಎಂಥಾ ಅದ್ಭುತ ಸಾಧನೆ (Success Story) ಅಲ್ವಾ? ಇಂತಹುದೇ ಸಾಧನೆಯೊಂದನ್ನು ಹಿರಿಯ ಕೆಎಎಸ್ ಅಧಿಕಾರಿ ವಿ.ಆರ್. ಶೈಲಜಾ ಅವರು  (KAS Officer VR Shailaja) ಮಾಡಿದ್ದಾರೆ. ತಾವು ವ್ಯಾಸಂಗ ಮಾಡಿದ್ದ ಮೈಸೂರು ವಿಶ್ವವಿದ್ಯಾಲಯದಲ್ಲೇ (Mysore University)  ಉನ್ನತ ಹುದ್ದೆಯನ್ನು ಅವರು ಅಲಂಕರಿಸಿದ್ದಾರೆ.


    ಕೆಎಎಎಸ್ ಅಧಿಕಾರಿ ವಿ.ಆರ್.ಶೈಲಜಾ ಅವರು ಮೈಸೂರು ವಿಶ್ವವಿದ್ಯಾಲಯದಲ್ಲೇ ವಿವಿಧ ಪದವಿಗಳನ್ನು ಪೂರೈಸಿದ್ದರು. ಮೈಸೂರು ವಿಶ್ವವಿದ್ಯಾಲದಲ್ಲಿ ಓದುವಾಗಿ ವಿವಿಧ ಪದಕಗಳಿಗೂ ಭಾಜನರಾಗಿದ್ದರು.


    ಮೈಸೂರು ವಿವಿಯಲ್ಲಿ ವಿವಿಧ ಪದವಿಗಳನ್ನು ಪೂರೈಸಿದ್ದರು
    ಬ್ಯಾಚುಲರ್ ಆಫ್ ಆರ್ಟ್ಸ್​ ಪದವಿಯನ್ನು 1998ರಲ್ಲಿ, ಬಿಎಡ್ ಪದವಿಯನ್ನು 1999ರಲ್ಲಿ 2001ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು.


    ಒಟ್ಟು 9 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದ  ಶೈಲಜಾ
    ಪದವಿಯಲ್ಲಿ ಒಟ್ಟು 9 ಚಿನ್ನದ ಪದಕ ಮತ್ತು 9 ನಗದು ಪುರಸ್ಕಾರಕ್ಕೂ ಭಾಜನರಾಗಿದ್ದ ಅವರು ಇದೀಗ ತಾವು ಅಂದು ಓದಿದ ಮೈಸೂರು ವಿಶ್ವವಿದ್ಯಾಲಯಕ್ಕೇ ಕುಲಸಚಿವೆಯಾಗಿ ನೇಮಕವಾಗಿದ್ದಾರೆ.


    ಇದನ್ನೂ ಓದಿ: Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ


    ಈ ಹಿಂದೆ ಬೆಂಗಳೂರಿನ ರಾಜೀವ್ ಗಾಂಧಿ ವಸತಿ ನಿಗಮದ ಕಂದಾಯ ಕೋಶದ ಮುಖ್ಯಸ್ಥೆಯಾಗಿ ವರ್ಗಾವಣೆಗೊಂಡಿದ್ದ ಶೈಲಜಾ ಅವರನ್ನು ಈಗ ಸಾರ್ವಜನಿಕ ಮತ್ತು ಆಡಳಿತದ ಹಿತದೃಷ್ಟಿಯಿಂದ ಯುಒಎಂ ರಿಜಿಸ್ಟ್ರಾರ್ ಆಗಿ ನೇಮಿಸಿ, ಹಿಂದಿನ ಆದೇಶವನ್ನು ಮಾರ್ಪಡಿಸಲಾಗಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಕೆ.ವಿ. ಅಶೋಕ್ ಆದೇಶ ಹೊರಡಿಸಿದ್ದರು.

    Published by:ಗುರುಗಣೇಶ ಡಬ್ಗುಳಿ
    First published: