Mysuru: ಅಕ್ರಮ ಬಿಪಿಎಲ್ ಕಾರ್ಡ್ ಇದೆಯೇ? ಮೈಸೂರಿನಲ್ಲಿ 1 ಕೋಟಿ ದಂಡ ಬಿತ್ತು!

ನೀವು ಎಪಿಎಲ್ ಕಾರ್ಡ್ ಪಡೆಯುವ ಅರ್ಹತೆ ಹೊಂದಿದ್ದರೂ ಬಿಪಿಎಲ್ ಕಾರ್ಡ್ ಇಟ್ಟುಕೊಂಡಿದ್ದೀರೇ? ಇನ್ನೂ ತಡಮಾಡಬೇಡಿ. ಏಕೆಂದರೆ ಈಗಾಗಲೇ ಆಗಬಾರದಷ್ಟು ಲೇಟ್ ಆಗಿಬಿಟ್ಟಿದೆ. ಹಾಗಾದರೆ ಏನು ಮಾಡಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮೈಸೂರು ನಾಗರಿಕರೇ, ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ. ನೀವೇನಾದರೂ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದ್ದರೆ ನೀವು ಈ ಸುದ್ದಿಯನ್ನಂತೂ ಮಿಸ್ ಮಾಡಲೇಬಾರದು. ಏಕೆಂದರೆ ಮೈಸೂರು ಜಿಲ್ಲೆ (Mysuru) ಒಂದರಲ್ಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 11,123 ಬಿಪಿಎಲ್ (BPL Card) ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು (Antyodaya Card) ರದ್ದುಗೊಳಿಸಿದೆ! ಅಲ್ಲದೇ ಮೈಸೂರಿನ ಇಷ್ಟು ಜನರಿಂದ ಬರೋಬ್ಬರಿ 1 ಕೋಟಿ ರೂ. ದಂಡವನ್ನೂ ಸಹ ವಿಧಿಸಿದೆ.  ನೀವೂ ಎಪಿಎಲ್ ಕಾರ್ಡ್​ ಅರ್ಹತೆ ಹೊಂದಿದ್ದೂ ಬಿಪಿಎಲ್ ಕಾರ್ಡ್​ ಪಡೆದಿದ್ದರೆ ನಿಮಗೊಂದು ಎಚ್ಚರಿಕೆಯ ಸುದ್ದಿ ಇಲ್ಲಿದೆ.  

    ಈ ಅಭಿಯಾನದ ಮೂಲಕ ಮೈಸೂರು ಜಿಲ್ಲೆ ಒಂದರಲ್ಲೆ ಎಪಿಎಲ್ ಕಾರ್ಡ್ ಪಟ್ಟಿಗೆ ಸೇರಬೇಕಿದ್ದ 581 ಅಂತ್ಯೋದಯ ಕಾರ್ಡ್‌ಗಳು ಮತ್ತು 10,542 ಬಿಪಿಎಲ್ ಕಾರ್ಡ್​ದಾರರು ಪತ್ತೆಯಾಗಿದ್ದಾರೆ.  ಈ ಅಭಿಯಾನ ಇಲ್ಲಿಗೇ ಮುಗಿಯುವುದಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

    ಸರ್ಕಾರಕ್ಕೆ ಮೋಸ ಮಾಡಬೇಡಿ!
    ಹೀಗಾಗಿ, ಒಂದುವೇಳೆ ನೀವೂ ಎಪಿಎಲ್ ಕಾರ್ಡ್​ ಪಟ್ಟಿಗೆ ಸೇರುವ ಅರ್ಹತೆ ಇದ್ದು ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದ್ದರೆ ತಕ್ಷಣ ಕಾರ್ಡ್​ನ್ನು ಹಿಂತಿರುಗಿಸಿ. ಸರ್ಕಾರಕ್ಕೇ ಮೋಸ ಮಾಡಲು ಹೋಗಿ ದಂಡ ಕಟ್ಟುವ ಪರಿಸ್ಥಿತಿ ತಂದುಕೊಳ್ಳಬೇಡಿ ಎಚ್ಚರ!

    ದಂಡದ ಮೊತ್ತ ನಿರ್ಧಾರ ಹೇಗೆ?
    ಇವರೆಲ್ಲರೂ ಇಷ್ಟು ಕಾಲ ಸರ್ಕಾರ ಒದಗಿಸುವ ಬಿಪಿಎಲ್ ಕಾರ್ಡ್​ನಿಂದ ಪಡೆದ ಪ್ರಯೋಜನಗಳನ್ನು ಆಧರಿಸಿ ದಂಡದ ಮೊತ್ತವನ್ನು ನಿರ್ಧಾರ ಮಾಡಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಮಾರಾಟವಾಗುವ ಉಚಿತ ಅಥವಾ ಸಬ್ಸಿಡಿ ಧಾನ್ಯಗಳು ಮತ್ತು ಇತರ ವಸ್ತುಗಳಿಂದ ಕುಟುಂಬಗಳು ಪ್ರತಿ ತಿಂಗಳು ಪಡೆಯುವ ಸಬ್ಸಿಡಿ ಸೌಲಭ್ಯದ ಮೊತ್ತವನ್ನು ಆಧರಿಸಿ ದಂಡವನ್ನು ಲೆಕ್ಕಹಾಕಲಾಗುತ್ತದೆ. 

    ಬಹಳ ಹಿಂದಿನಿಂದಲೇ ತನಿಖೆ ನಡೆಸಲಾಗಿದೆ
    ಮೈಸೂರು ಜಿಲ್ಲೆ ಒಂದರಲ್ಲೇ ಒಟ್ಟು 581 ಅಂತ್ಯೋದಯ ಕಾರ್ಡ್‌ಗಳು ಮತ್ತು 10,542 ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಈ ಕಾರ್ಡ್‌ಗಳ ದುರುಪಯೋಗದ ವಿರುದ್ಧ ನಾವು ಬಹಳ ಹಿಂದಿನಿಂದಲೇ ತನಿಖೆ ನಡೆಸುತ್ತಿದ್ದೇವೆ. ಹೀಗಾಗಿ ಇದೀಗ  581 ಅಂತ್ಯೋದಯ ಕಾರ್ಡ್‌ಗಳು ಮತ್ತು 10,542 ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಸಾಧ್ಯವಾಗಿದೆ  ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: Guledagudda Khana Notebooks: ಗುಳೇದಗುಡ್ಡ ಖಣದಿಂದ ನೋಟ್​ಬುಕ್! ಏನಿದರ ವಿಶೇಷ? ಎಲ್ಲಿ ಸಿಗುತ್ತೆ?

    ಮತ್ತೆ ಎಪಿಎಲ್ ಕಾರ್ಡ್​ ಕೊಡ್ತಾರೆ
    ಹೀಗೆ ಅನರ್ಹ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರನ್ನು ಪತ್ತೆಹಚ್ಚಿ ಅವರಿಗೆ ದಂಡ ವಿಧಿಸುವ ಪ್ರಕ್ರಿಯೆಯು ನಿರಂತರವಾಗಿ ನಡೆಸಲಾಗುತ್ತದೆ. ಜೊತೆಗೆ ರದ್ದಾದ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ಎಪಿಎಲ್ ಕಾರ್ಡ್‌ಗಳೊಂದಿಗೆ ಬದಲಾಯಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಕ್ರಮ ಬಿಪಿಎಲ್ ಕಾರ್ಡ್​ ಇದ್ದರೆ ಏನು ಮಾಡಬೇಕು?
    ನೀವು ಎಪಿಎಲ್ ಕಾರ್ಡ್ ಪಡೆಯುವ ಅರ್ಹತೆ ಹೊಂದಿದ್ದರೂ ಬಿಪಿಎಲ್ ಕಾರ್ಡ್ ಇಟ್ಟುಕೊಂಡಿದ್ದೀರೇ? ಇನ್ನೂ ತಡಮಾಡಬೇಡಿ. ಏಕೆಂದರೆ ಈಗಾಗಲೇ ಆಗಬಾರದಷ್ಟು ಲೇಟ್ ಆಗಿಬಿಟ್ಟಿದೆ. ಈಗಲೇ ನಿಮ್ಮ ಅಕ್ರಮ ಬಿಪಿಎಲ್ ಕಾರ್ಡ್​ನ್ನು ಆಹಾರ ಮತ್ತು ನಾಗರಿಕ ಇಲಾಖೆಗೆ ಈಗಲೇ ಹಿಂತಿರುಗಿಸಿ.

    ಇದನ್ನೂ ಓದಿ:Free Heart Treatment: ಬಡ ಹೃದಯ ರೋಗಿಗಳಿಗೆ ಒಳ್ಳೆ ಸುದ್ದಿ; ಉಚಿತ ಸ್ಟಂಟ್ ಅಳವಡಿಕೆಗೆ ಅವಕಾಶ ಇಲ್ಲಿದೆ

    ಮೈಸೂರಿನಲ್ಲಿ ವಿತರಣೆ ಮಾಡಲಾದ ಕಾರ್ಡ್​ಗಳ ಸಂಖ್ಯೆ ಹೀಗಿದೆ
    ಮೈಸೂರು ಜಿಲ್ಲೆಯಲ್ಲಿ ಇದುವರೆಗೆ 6,57,037 ಬಿಪಿಎಲ್ ಮತ್ತು 50,523 ಅಂತ್ಯೋದಯ ಕಾರ್ಡ್‌ಗಳನ್ನು ಇಲಾಖೆಯಿಂದ ವಿತರಿಸಲಾಗಿದೆ. ಈ ಕಾರ್ಡ್​ಗಳ ಮೂಲಕ ನ್ಯಾಯಬೆಲೆ ಅಂಗಡಿಗಳಿಂದ ಧಾನ್ಯ ಸೇರಿದಂತೆ ಸರ್ಕಾರ ವಿತರಿಸುವ ವಸ್ತುಗಳನ್ನು ಪಡೆಯಲು ಬಳಸಲಾಗುತ್ತದೆ. ಉಚಿತ ಆರೋಗ್ಯ ಸೇವೆ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲು ಈ ಕಾರ್ಡ್‌ಗಳನ್ನು ಬಳಸಲಾಗುತ್ತದೆ.
    Published by:guruganesh bhat
    First published: