Ranbir Kapoor - Alia Bhatt: ರಣಬೀರ್‌ಗೆ ಆಲಿಯಾ ಫಸ್ಟ್ ವೈಫ್ ಅಲ್ವಂತೆ! ಹಾಗಿದ್ರೆ ಯಾರಪ್ಪಾ ಮೊದಲ ಹೆಂಡತಿ?

ರಣಬೀರ್ ಕಪೂರ್​ ತಮ್ಮ ಮೊದಲ ಪತ್ನಿ ಆಲಿಯಾ ಅಲ್ಲ ಎನ್ನುವ ಮೂಲಕ ಸಖತ್ ಚರ್ಚೆಯಲ್ಲಿದ್ದಾರೆ. ಇಷ್ಟೇ ಅಲ್ಲದೇ ರಣಬೀರ್ ತಮ್ಮ ಮೊದಲ ಹೆಂಡತಿಯನ್ನು ಭೇಟಿಯಾಗಲು ಸಾಕಷ್ಟು ಉತ್ಸುಕರಾಗಿದ್ದಾರಂತೆ.

ಆಲಿಯಾ - ರಣಬೀರ್

ಆಲಿಯಾ - ರಣಬೀರ್

  • Share this:
ಸದ್ಯ ಬಾಲಿವುಡ್​ನ (Bollywood) ಕ್ಯೂಟ್ ಕಪಲ್ ಲೀಸ್ಟ್​ಗೆ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Aaliya Bhatt) ಜೋಡಿ ಸೇರಿಸಬುದು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಈ ಜೋಡಿ ದಾಂಪತ್ಯ ಜೀವನಕ್ಕೆ (Life) ಕಾಲಿಟ್ಟಿದ್ದಾರೆ. ಸದ್ಯ ಈ ನವ ವಿವಾಹಿತ ಜೋಡಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಣಬೀರ್ ಕಪೂರ್ ತಮ್ಮ ಬಹುನಿರೀಕ್ಷಿತ ‘ಶಂಶೇರಾ‘ (Shamshera) ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಸಾಲು ಸಾಲು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗೆ ಭಾಗಿಯಾದ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಪತ್ನಿ ಆಲಿಯಾ ಅಲ್ಲ ಎನ್ನುವ ಮೂಲಕ ಸಖತ್ ಚರ್ಚೆಯಲ್ಲಿದ್ದಾರೆ. ಇಷ್ಟೇ ಅಲ್ಲದೇ ರಣಬೀರ್ ತಮ್ಮ ಮೊದಲ ಹೆಂಡತಿಯನ್ನು ಭೇಟಿಯಾಗಲು ಸಾಕಷ್ಟು ಉತ್ಸುಕರಾಗಿದ್ದಾರಂತೆ.

ರಣಬೀರ್ ಮೊದಲ ಪತ್ನಿ ಆಲಿಯಾ ಅಲ್ವಂತೆ:

ಹೌದು, ಈ ರೀತಿ ಹೇಳುವ ಮೂಲಕ ರಣಬೀರ್ ಹೊಸ ಅಂಶವನ್ನು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಸಂದರ್ಶನದಲ್ಲಿ ಮಾತನಾಡುವಾಗ ರಣಬೀರ್ ತಮ್ಮ ಮೊದಲ ಪತ್ನಿಯ ವಿಷಯವನ್ನು ತಿಳಿಸಿದರು. ಅದರಂತೆ ‘ಮುಂಬೈನಲ್ಲಿದ್ದಾಗ ಯಾರೋ ಬಬ್ಬರು ಮಹಿಳಾ ಅಭಿಮಾನಿ ನನ್ನ ಮನೆಯ ಗೇಟ್​ಗೆ ಬಂದು ಮದುವೆಯಾಗಿದ್ದಾಲೆ. ಇದನ್ನು ನನ್ನ ಸೆಕ್ಯೂರಿಟಿ ನನಗೆ ತಿಳಿಸಿದರು. ಅಲ್ಲದೇ ನಾನು ಇನ್ನೂ ಸಹ ಅವಳನ್ನು ಭೇಟಿ ಆಗಿಲ್ಲ. ನನ್ನ ಬದಲಿಗೆ ಗೇಟ್​ನ್ನು ಮದುವೆಯಾಗಿ ನನನ್ನನ್ನು ಮದುವೆಯಾಗಿದ್ದಾಗಿ ಹೇಳಿದ್ದಲಂತೆ. ಗೇಟ್​ಗೆ ಹೂವು, ಹಾರಗಳು ಸಹ ಇದ್ದವು. ನಾನು ಸಹ ನನ್ನ ಮೊದಲ ಹೆಂಡತಿಯನ್ನು ನೋಡಲು ಕಾತುರನಾಗಿದ್ದೇನೆ‘ ಎಂದು ಹಾಸ್ಯಾಸ್ಪದವಾಗಿ ಹೇಳಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ರಣಬೀರ್ ಬ್ಯುಸಿ:

ಈಗಾಗಲೇ ಬಿಡುಗಡೆಯಾಗಿರುವ ರಣಬೀರ್ ಅಭಿನಯದ ಶಂಶೇರಾ ಚಿತ್ರದ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಅಲ್ಲದೇ ಚಿತ್ರವು ಜುಲೈ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಂಜಯ್ ದತ್ ಮತ್ತು ವಾಣಿ ಕಪೂರ್ ಅವರೊಂದಿಗೆ ಅವರು ನಟಿಸಲಿರುವ ಚಿತ್ರದಲ್ಲಿ, ರಣಬೀರ್ ಹಿಂದೆಂದೂ ನೋಡಿರದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವತಾರ ಬ್ರಹ್ಮಾಸ್ತ್ರ , ಅವರ ಮುಂಬರುವ ಚಿತ್ರ, ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: KGF 3 ಕುರಿತು ಬಿಗ್​ ಅಪ್​ಡೇಟ್​ ನೀಡಿದ ನೀಲ್, ಶೂಟಿಂಗ್ ಆರಂಭ ಯಾವಾಗ?

ಅವರು ಮೌನಿ ರಾಯ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ, ಅಮಿತಾಭ್ ಬಚ್ಚನ್,  ನಾಗಾರ್ಜುನ ಮತ್ತು ಆಲಿಯಾ ಭಟ್. ಈ ಚಿತ್ರಗಳ ಜೊತೆಗೆ, ಅವರು ಶ್ರದ್ಧಾ ಕಪೂರ್ ಅವರೊಂದಿಗೆ ಲವ್ ರಂಜನ್ ಅವರ ಹೆಸರಿಸದ ಯೋಜನೆ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗೆ ಸಂದೀಪ್ ರೆಡ್ಡಿ ವಂಗಾ ಅವರ ‘ಅನಿಮಲ್‘ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

ಜಾಗತಿಕ ಮಟ್ಟದ 10 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಆಲಿಯಾ ಹೆಸರು:

ಕಳೆದ ಕೆಲವು ವಾರಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಆಲಿಯಾ ಭಟ್ ಅವರದ್ದೇ ಹವಾ. ತಮ್ಮ ಸೌಂದರ್ಯ ಮತ್ತು ಅದ್ಭುತ ನಟನಾ ಕೌಶಲ್ಯದಿಂದ ಬಾಲಿವುಡ್‍ನಲ್ಲಿ ಪ್ರಸ್ತುತ ಭದ್ರ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಈ ನಟಿ, ಇತ್ತೀಚೆಗೆ ದಕ್ಷಿಣದ ಜನಪ್ರಿಯ ನಿರ್ದೇಶಕ ರಾಜಮೌಳಿ ಅವರ ಆರ್‌ಆರ್‌ಆರ್‌ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸುದ್ದಿ ಮಾಡಿದ್ದರು.

ಇದನ್ನೂ ಓದಿ: Kiccha Sudeep: ಕಿಚ್ಚನಿಗಾಗಿ ಬಂತು ಸ್ಪೆಷಲ್ ಗಿಫ್ಟ್, ಟೀಂ ಇಂಡಿಯಾದ ವಿಶ್ವಕಪ್ ನೆನಪು ಈಗ ಸುದೀಪ್ ಕೈಯಲ್ಲಿ

ಅದಕ್ಕಿಂತಲೂ ಹೆಚ್ಚು ಸುದ್ದಿ ಮಾಡಿದ್ದು, ನಟ ಮತ್ತು ಕಪೂರ್ ಕುಟುಂಬ ಕುಡಿ ರಣಬೀರ್‌ ಕಪೂರ್ ಜೊತೆಗಿನ ಮದುವೆ. ಅಲ್ಲದೇ ಆಲಿಯಾ ಅವರು, ಜೆನಿಫರ್ ಲೋಪೆಜ್, ಕ್ರಿಸ್ ಹೆಮ್ಸ್‌ವರ್ತ್ ಮತ್ತು ರಾಬರ್ಟ್ ಡೌನಿ ಜೂನಿಯರ್ ಅವರನ್ನು ಈ ಸ್ಥಾನದಲ್ಲಿ ಹಿಂದಿಕ್ಕಿದ್ದಾರೆ.
Published by:shrikrishna bhat
First published: