ಆಕೆ ನೀನು ನನಗೆ ಇಷ್ಟವಿಲ್ಲ, ನಿನ್ನನ್ನು ನಾನು ಪ್ರೀತಿ ಮಾಡುವುದಿಲ್ಲ ಅಂತ ತಿಳಿಸಿದ್ದಳು ಎನ್ನಲಾಗಿದೆ. ಆದರೂ ಆಕೆ ಹಿಂದೆ ಮು್ಂದೆ ಸುತ್ತಾಡುತ್ತಾ, ಪ್ರೀತಿಸುವಂತೆ ಪೀಡಿಸುತ್ತಿದ್ದ. ಕೊನೆಗೆ ಸುಧೀರ್ ಕಿರುಕುಳ ಸಹಿಸಲು ಸಾಧ್ಯವಾಗದೇ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪರಿಣಾಮ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಧೀರ್ ಟವರ್ ಏರಿದ್ದ.
ಮಂಗಳೂರು: ಆತ ಆಕೆಯ ಹಿಂದೆ ಬಂದಿದ್ದ, ಆಕೆ ನೀನು ನಂಗೆ ಇಷ್ಟವಿಲ್ಲ (Like) ಅಂದ್ರೂ ಎಕ್ಸ್ಕ್ಯೂಸ್ ಮೀ (Excuse Me) ಅಂತ ಫಾಲೋ (Follow) ಮಾಡ್ತಿದ್ದ. ನಿನ್ ಕನಸಲ್ಲಿ (Dreams) ಬರ್ತೀನಿ ಅಂತ ಹಾಡ್ತಿದ್ದ. ಆದ್ರೆ ಅದ್ಯಾವುದಕ್ಕೂ ಆಕೆ ಬಗ್ಗಲೇ ಇಲ್ಲ. ಹೀಗಾಗಿ ಆಕೆ ಹಿಂದೆ ಮುಂದೆ ಸುತ್ತೋದನ್ನ ಜಾಸ್ತಿ ಮಾಡಿದ. ಕೊನೆಗೆ ಬೇಸತ್ತ ಆಕೆ ಪೂಲೀಸ್ ಠಾಣೆಗೆ (police Station) ದೂರು ನೀಡಿದ್ದಳು. ಇದೀಗ ನೊಂದ ಆತ ಪ್ರಾಣ ಕಳೆದುಕೊಳ್ಳುತ್ತೇನೆ ಅಂತ ಮೊಬೈಲ್ ಟವರ್ (Mobile Tower) ಏರಿದ. ಕೊನೆಗೆ ಏನಾಯ್ತು? ಇಲ್ಲಿದೆ ಓದಿ, ಭಗ್ನ ಪ್ರೇಮಿಯ ಹುಚ್ಚಾಟದ ಕಥೆ…
ಮೊಬೈಲ್ ಟವರ್ ಏರಿ ಭಗ್ನ ಪ್ರೇಮಿ ಹುಚ್ಚಾಟ
ಪ್ರೇಮ ವೈಫಲ್ಯ ಹಿನ್ನೆಲೆ ಮೊಬೈಲ್ ಟವರ್ ಏರಿದ ಯುವಕನೊಬ್ಬ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಅಡ್ಯಾರು ಎಂಬಲ್ಲಿ ಘಟನೆ ನಡೆದಿದ್ದು, ಸುಧೀರ್ ಎಂಬಾತನೇ ಹುಚ್ಚಾಟ ನಡೆಸಿದ ಭಗ್ನ ಪ್ರೇಮಿ.
ಪ್ರೀತ್ಸೆ ಅಂತ ಪ್ರಾಣ ತಿಂದಿದ್ದ ಯುವಕ
ಅಡ್ಯಾರ್ ಬಳಿಯ ನಿವಾಸಿ ಸುಧೀರ್ ಎಂಬಾತ ಬಸ್ ಕ್ಲಿನರ್. ಈತ ಪರಂಗಿಪೇಟೆಯ ಮಾರಿಪಳ್ಳದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ನಿರ್ಲಕ್ಷ್ಯ ತೋರಿದರೂ ಸುಧೀರ್ ಪದೇ-ಪದೇ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಆಕೆ ನೀನು ನನಗೆ ಇಷ್ಟವಿಲ್ಲ, ನಿನ್ನನ್ನು ನಾನು ಪ್ರೀತಿ ಮಾಡುವುದಿಲ್ಲ ಅಂತ ತಿಳಿಸಿದ್ದಳು ಎನ್ನಲಾಗಿದೆ. ಆದರೂ ಆಕೆ ಹಿಂದೆ ಮು್ಂದೆ ಸುತ್ತಾಡುತ್ತಾ, ಪ್ರೀತಿಸುವಂತೆ ಪೀಡಿಸುತ್ತಿದ್ದ. ಕೊನೆಗೆ ಸುಧೀರ್ ಕಿರುಕುಳ ಸಹಿಸಲು ಸಾಧ್ಯವಾಗದೇ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪರಿಣಾಮ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಧೀರ್ ಟವರ್ ಏರಿದ್ದ.
1 ಗಂಟೆ ಮೊಬೈಲ್ ಟವರ್ ಮೇಲೆಯೇ ಯುವಕನ ಹುಚ್ಚಾಟ
ಮೊಬೈಲ್ ಟವರ್ ಏರಿದ ಯುವಕ ಸುಧೀರ್, ಪ್ರೇಯಸಿ ಬರುವಂತೆ ಕೇಳಿಕೊಂಡ. ಪೊಲೀಸರಿಗೆ ಕೊಟ್ಟ ದೂರು ವಾಪಸ್ ಪಡೆದು, ತನ್ನನ್ನು ಪ್ರೀತಿಸುವಂತೆ ಡಿಮ್ಯಾಂಡ್ ಮಾಡಿದ, ಇಲ್ಲವಾದ್ರೆ ಇಲ್ಲಿಂದ ಬಿದ್ದು ತಾನು ಪ್ರಾಣ ಕಳೆದುಕೊಳ್ಳುವುದಾಗಿ ಹೇಳಿದ. ಸುಮಾರು 1 ಗಂಟೆಗಳ ಕಾಲ ಮೊಬೈಲ್ ಟವರ್ ಮೆಲೆಯೇ ಭಗ್ನ ಪ್ರೇಮಿ ಸುಧೀರ್ ಹುಚ್ಚಾಟ ನಡೆಸಿದ್ದ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಯುವಕನನ್ನು ಕೆಳಕ್ಕೆ ಇಳಿಸಲು ಪೊಲೀಸರಿಂದ ಹರಸಾಹಸ
ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದರು. ಆತನ ಮನವೊಲಿಸಿ ಕೆಳಕ್ಕೆ ಇಳಿಸಲು ಯತ್ನಿಸಿದ್ರು. ಆದ್ರೆ ಯುವಕ ಮಾತ್ರ ಪೊಲೀಸರ ಮಾತಿಗೂ ಬಗ್ಗದೇ ಹುಚ್ಚಾಟ ಮುಂದುವರೆಸಿದ್ದ. ಸುಮಾರು 1 ತಾಸು ಯುವಕನ್ನು ಕೆಳಕ್ಕೆ ಇಳಿಸಲು ಪೊಲೀಸರು ಹರಸಾಹರಸ ಪಟ್ಟು, ಸುಸ್ತಾದರು.
ಅಂತಿಮವಾಗಿ ಪೊಲೀಸರು ಆತ ಪ್ರೀತಿಸುತ್ತಿದ್ದ ಯುವತಿಯನ್ನೇ ಸ್ಥಳಕ್ಕೆ ಕರೆಸಿದರು. ಕೊನೆಗೆ ಯುವತಿಯೇ ಬಂದು ದೂರು ವಾಪಸ್ ತೆಗೆದುಕೊಳ್ಳುವೆ ಎಂದು ಹೇಳಿದ ಬಳಿಕ ಟವರ್ನಿಂದ ಇಳಿದಿದ್ದಾನೆ. ಸುಮಾರು 1 ಗಂಟೆಗಳ ಈ ಪ್ರಹಸನಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರೂ ಯುವಕನಿಗೆ ಎಚ್ಚರಿಕೆ ಕೊಟ್ಟು ಪ್ರೇಯಸಿ ಜೊತೆ ಕಳುಹಿಸಿದ್ದಾರೆ.