Tulu Nadu Ganesha Chaturthi: ತುಳುನಾಡಲ್ಲಿ ಮೂಲತಃ ಗಣಪನ ಮೂರ್ತಿ ಪೂಜೆ ಇಲ್ಲವೇಕೆ?

ತುಳುವರು ಪ್ರಕೃತಿ ಆರಾಧಕರು. ಯಾವುದೇ ಹಬ್ಬಗಳಿದ್ದರೂ ಅದನ್ನ ಪ್ರಕೃತಿ ಜೊತೆಗೆ ಬೆರೆತು ಮಾಡುವುದು ವಿಶೇಷ. ಗಣೇಶ ಚತುರ್ಥಿ ಹಬ್ಬದಲ್ಲೂ ಇಂತಹ ವಿಶೇಷತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ನೋಡಬಹುದಾಗಿದೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಮಂಗಳೂರು: ತುಳುನಾಡಿನ ಆಚರಣೆಗಳೇ ವಿಭಿನ್ನ. ಪ್ರಕೃತಿಯಲ್ಲೇ ದೇವರನ್ನ ಕಾಣುವ ಇಲ್ಲಿನವರ ಆಚರಣೆಗಳು ಇನ್ನಿತರೆಡೆ ಹೋಲಿಸಿದ್ರೆ ಒಂದಿಷ್ಟು ವಿಶೇಷವಾಗಿರುತ್ತೆ. ಉದಾಹರಣೆಗೆ ತುಳುನಾಡಿನ ಚೌತಿ ಹಬ್ಬದಲ್ಲೂ (Ganesh Chaturthi In Tulunad)  ಇಂತಹ ವಿಶೇಷ ಆಚರಣೆ ಕಾಣಬಹುದಾಗಿದೆ. ಕಬ್ಬು ತುಂಡುಗಳ ಮೂಲಕವೇ ಗಣಪತಿಯನ್ನು ಕಾಣುತ್ತಾರೆ. ಹೌದು, ಇಂದಿಗೂ ತುಳುನಾಡಿನ ಗಣಪ ಅಂದ್ರೆ ಅಲ್ಲಿ ಮೂರ್ತಿ ಇಲ್ಲ, ಅದನ್ನು ತಯಾರಿಸೋ ಕಲಾವಿದನೂ ಇರಲ್ಲ‌. ಬದಲಿಗೆ, ಶಾಸ್ತ್ರೋಕ್ತವಾಗಿ ಬಹುತೇಕ ಕೃಷಿ ಹೊಂದಿರುವ ಮನೆ ಮಂದಿಯೇ ತಯಾರಿಸುತ್ತಾರೆ‌‌. ಗಜಮುಖನಿಗೆ (Ganapati) ಪ್ರಿಯವಾದ ಕಬ್ಬು ತುಂಡುಗಳಲ್ಲೇ ಗಣೇಶನನ್ನು (Ganesh Pooja) ನೆನೆಯುತ್ತಾರೆ. ಪ್ರಥಮ ಪೂಜಿತನಿಗೆ ನಮಿಸುತ್ತಾ ತಮ್ಮ ಕೃಷಿ, ಬದುಕು ಹಸನಾಗಲಿ ಅಂತಾ ಪ್ರಾರ್ಥಿಸುವರು.

    ಕಬ್ಬು ತುಂಡುಗಳಲ್ಲಿ ಗಣಪ!
    ಎಷ್ಟೇ ಆಧುನಿಕತೆ ಬೆಳೆದರೂ ತುಳುನಾಡಿನ ಅನಾದಿ ಕಾಲದ ಆಚರಣೆಗಳು ಇನ್ನೂ ಕಡಿಮೆಯಾಗಿಲ್ಲ. ನಗರ ಪ್ರದೇಶಗಳಲ್ಲಿ ಇಂತಹ ಸಂಸ್ಕೃತಿ ಕಂಡು ಬಾರದಿದ್ದರೂ, ಕೃಷಿ ಮಾಡುವವರು, ಮನೆಗಳಲ್ಲಿ ದೈವಗಳನ್ನು ಹೊಂದಿರುವವರು ಇಂತಹ ಆಚರಣೆ ನಡೆಸ್ತಾರೆ.‌ ಕಬ್ಬು ತುಂಡುಗಳನ್ನು ಅಟ್ಟಿ ಕಟ್ಟುವಾಗಲೂ (ಜೋಡಿಸುವುದು) ಅದರದ್ದೇ ಆದ ಕ್ರಮವನ್ನ ಪಾಲಿಸಲಾಗ್ತದೆ.

    ಹೀಗಿರುತ್ತೆ ನೋಡಿ ತುಳುನಾಡ ಗಣಪ
    ಮಣೆ ಮೇಲೆ ಬಾಳೆ ಎಲೆ ಹಾಸಿ, ಅದ್ರ ಮೇಲೆ ಅಕ್ಕಿ, ಇತರೆ ದವಸ ಧಾನ್ಯ, ಹೂ, ತೆಂಗಿನ ಕಾಯಿ ಮುಂತಾದ ಸಾಮಗ್ರಿಗಳನ್ನು ಹಾಕಿದ ನಂತರ ಅದ್ರ ಮೇಲೆ ಒಂದೊಂದಾಗಿ ನಿರ್ದಿಷ್ಟ ಗಾತ್ರದ ಕಬ್ಬು ತುಂಡುಗಳನ್ನು ಜೋಡಿಸಲಾಗುತ್ತದೆ. ನಂತರ ಶಿರ ಭಾಗದಲ್ಲೂ ಹೂ, ಹಣ್ಣು ಹಂಪಲು ಇರಿಸಲಾಗ್ತದೆ.

    ಇದನ್ನೂ ಓದಿ: Uttara Kannada Chakli Kambala: ಜನರ ಒಗ್ಗಟ್ಟು ಬೆಸೆಯುತ್ತೆ ಚಕ್ಕುಲಿ! ಇದು ಉತ್ತರ ಕನ್ನಡದ ಚಕ್ಕುಲಿ ಕಂಬಳದ ಸ್ಪೆಷಲ್

    ಬಳಿಕ ಮನೆ ಮಂದಿಯೆಲ್ಲ ಸೇರಿ ಆರತಿ ಎತ್ತಿ ಪೂಜಿಸುತ್ತಾರೆ. ಈ ವೇಳೆ ಆದಷ್ಟು ಮಟ್ಟಿಗೆ ಸಾಂಪ್ರದಾಯಿಕತೆ ಪಾಲಿಸುವುದು ವಿಶೇಷ. ಜೊತೆಗೆ, ಇಂತಹ ಗಣಪನನ್ನು ವಿಸರ್ಜಿಸುವ ಕ್ರಮ ಎದುರಾಗುವುದಿಲ್ಲ‌. ಹಾಗಾಗಿ, ಮನೆ ಮಂದಿಯೆಲ್ಲ ತಮ್ಮ ಊಟೋಪಚಾರ ಮುಗಿದ ಬಳಿಕ ಅದನ್ನ ಕ್ರಮ ಬದ್ಧವಾಗಿ ತೆಗೆದು ಅದನ್ನ ಪ್ರಸಾದವನ್ನಾಗಿ ಸ್ವೀಕರಿಸುವರು.

    ಇದನ್ನೂ ಓದಿ: Ganesha in Tree: ಮರದಲ್ಲಿ ಮೂಡಿದ ಗಣಪ! ಪ್ರಕೃತಿ ವಿಸ್ಮಯಕ್ಕೆ ಗಣೇಶನೇ ಸಾಕ್ಷಿ!

    ಪ್ರಕೃತಿಯಲ್ಲೇ ಗಣಪನನ್ನು ಕಾಣುವರು
    ತುಳುನಾಡಿನಲ್ಲಿ ಗಣಪತಿ ಕುರಿತ ಮೂರ್ತಿ ಕಲ್ಪನೆ ಇರುವುದಿಲ್ಲ. ಹೀಗಾಗಿ ಈಗಲೂ ಹಳ್ಳಿಯಲ್ಲಿರುವ ಕೃಷಿಕರ ಮನೆಯಲ್ಲಿ ಇಂತಹ ಸಾಂಪ್ರದಾಯಿಕ ಗಣೇಶನನ್ನು ಕಾಣಬಹುದಾಗಿದೆ‌. ಪ್ರಕೃತಿಗೆ ಮಿಗಿಲಾದ ದೇವರು ಉಂಟೇ ಅನ್ನೋ ಹಾಗೆ ತುಳುವರು ತಮ್ಮ ದೇವರನ್ನು ಕಂಡುಕೊಂಡಿರುವ ರೀತಿ ವಿಶೇಷವೇ ಸರಿ.

    ವರದಿ: ಇರ್ಷಾದ್ ಕಿನ್ನಿಗೋಳಿ
    Published by:guruganesh bhat
    First published: