ದಕ್ಷಿಣ ಕನ್ನಡ: ಹಲಸು ಸೀಸನ್ ಇನ್ನೇನು ಶುರುವಾಗಿ ಬಿಡುತ್ತೆ. ಕರಾವಳಿಯಲ್ಲಂತೂ (Coastal Karnataka) ಹಲಸು ತಿಂದು ಬಾಯಿ ಚಪ್ಪರಿಸೋಕೆ ಜನರು ರೆಡಿಯಾಗಿದ್ದಾರೆ. ಹಲಸು ತೋಟಗಳು ಕೂಡಾ ಅಷ್ಟೇ, ಹಣ್ಣಿನ ಸುವಾಸನೆ ಬೀರಲು ಮುಂದಾಗಿದೆ. ಕರಾವಳಿಯಲ್ಲಿ ಹಲಸು (Jackfruit) ತಿನ್ನುವವರಿಗೇನೂ ಕಮ್ಮಿಯಿಲ್ಲ. ಆದ್ರೆ ವೆರೈಟಿ (Variety Of jackfruit) ಬಗ್ಗೆ ಜಾಸ್ತಿ ಯಾರಿಗೂ ಗೊತ್ತಿಲ್ಲ.
ಯೆಸ್, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದವರಾದ ಮಹೇಶ್ ಮೀಯಂದೂರು ತೋಟದಲ್ಲಿ ಒಂದಲ್ಲ, ಎರಡಲ್ಲ ಮೂವತ್ತಕ್ಕೂ ಹೆಚ್ಚು ಬಗೆಯ ವೆರೈಟಿ ಹಲಸುಗಳಿವೆ. ಇನ್ನೇನು ಕಾಯಿ ಬಿಟ್ಟಿರೋ ಹಲಸಿನ ಕಾಯಿಗಳು ಮಳೆಗಾಲ ಹತ್ತಿರ ಬರ್ತಿದ್ದಂತೆ ಹಣ್ಣಾಗಿ ಘಮ ಘಮಿಸೋದಕ್ಕೆ ರೆಡಿಯಾಗಿವೆ.
ಸಕ್ಸಸ್ ಫುಲ್ ಸಮಗ್ರ ಕೃಷಿಕರೂ ಹೌದು!
ಮಹೇಶ್ ಮೀಯಂದೂರು ಹಲಸಿನ ಕೃಷಿಯ ಜೊತೆಗೆ ಸಕ್ಸಸ್ ಫುಲ್ ಸಮಗ್ರ ಕೃಷಿಕರೂ ಹೌದು. ರಬ್ಬರ್ , ತೆಂಗು, ಬಾಳೆ, ಕಾಳು ಮೆಣಸು, ಹೀಗೆ ಅನೇಕ ರೀತಿಯ ವಿವಿಧ ಬೆಳೆಗಳನ್ನ ತಮ್ಮ ಇಪ್ಪತ್ತೈದು ಎಕರೆ ದಶಕಗಳಿಂದ ತೋಟದಲ್ಲಿ ಬೆಳೆಯುತ್ತಾ ಬಂದಿದ್ದಾರೆ.
ಒಂದು ಎಕರೆಯಲ್ಲಿ 60 ಹಲಸಿನ ಮರ!
ಮಹೇಶ್ ಅವರು ಸುಮಾರು ಒಂದು ಎಕರೆ ಪ್ರದೇಶದಲ್ಲಿ ಹಲಸಿನ 60 ಮರಗಳನ್ನ ಬೆಳೆಸಿದ್ದಾರೆ. ಇವರು ಅವುಗಳನ್ನ ಸಖತ್ ಕೇರ್ ಕೂಡ ಮಾಡಿದ್ದಾರೆ. ಸ್ವರ್ಣ ಹಲಸು, ಗಮ್ ಲೆಸ್ ಹಲಸು, ಚಂದ್ರ ಹಲಸು ಸೇರಿದಂತೆ ಅನೇಕ ಮೂವತ್ತಕ್ಕೂ ಹೆಚ್ಚು ತಳಿಯ ಗಿಡಗಳು ಇವರ ತೋಟದಲ್ಲಿ ಕಾಣಸಿಗುತ್ತೆ.
ತೋಟದಲ್ಲಿ ಬೆಳೆದ ಹಲಸನ್ನ ಮಾರಾಟ ಮಾಡದ ಮಹೇಶ್ ತಮ್ಮ ಸ್ನೇಹಿತರಿಗೆ, ನೆರೆಹೊರೆಯವರಿಗೆ ಹಂಚುತ್ತಾರೆ.
ಇದನ್ನೂ ಓದಿ: Dakshina Kannada: ಕೆರೆ ಉಳಿಸಲು ರಾಜೀನಾಮೆಗೆ ರೆಡಿಯಾದ ಪಂಚಾಯತ್ ಸದಸ್ಯರು!
ಒಟ್ಟಿನಲ್ಲಿ ದಕ್ಷಿಣ ಕನ್ನಡದ ಕೃಷಿಕರೊಬ್ಬರು ತಮ್ಮ ಒಂದು ಎಕರೆ ಭೂಮಿಯಲ್ಲಿ ಮೂವತ್ತಕ್ಕೂ ಹೆಚ್ಚು ಬಗೆಯ ಹಲಸಿನ ತಳಿಗಳನ್ನ ರಕ್ಷಿಸುವಂತೆ ಮಾಡಿರುವುದು ವಿಶೇಷವೆನಿಸಿದೆ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ