Ujire Ajji Hotel: ಧರ್ಮಸ್ಥಳ ಮಂಜುನಾಥನ ದರ್ಶನ ಆದ್ಮೇಲೆ ಭಕ್ತರು ವಿಸಿಟ್ ಹಾಕುವ ಅಜ್ಜಿ ಹೋಟೆಲ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಎಷ್ಟೇ ಹೋಟೆಲ್​ಗಳು ಈ ಭಾಗದಲ್ಲಿ ತಲೆ ಎತ್ತಿದ್ರೂ ಅದ್ಯಾವುದೂ ಈ ಅಜ್ಜಿಯ ಹೋಟೆಲ್​ಗೆ ಸಾಟಿಯೇ ಇಲ್ಲ. ಪ್ರತಿದಿನ ನೂರಾರು ಜನ ಊಟ, ಚಹಾ, ತಿಂಡಿಗಾಗಿ ಇಲ್ಲಿಗೆ ಬರುತ್ತಾರೆ.

  • Share this:

    ದಕ್ಷಿಣ ಕನ್ನಡ: ಮರದ ಟೇಬಲ್ಲು, ಅದರ ಮೇಲೆ ಹಾಸಿದ ಬಾಳೆ ಎಲೆ, ರುಚಿ ರುಚಿಯಾದ ಊಟ ಸವಿಯಲು ಕಾತರದಲ್ಲಿರೋ ಗ್ರಾಹಕರು. ಯೆಸ್, ನೋಡೋದಕ್ಕೆ ಹಳೆ ಸಿನೆಮಾದಲ್ಲಿ ಬರೋ ಹೋಟೆಲ್​ನಂತಿರೋ ಇದಕ್ಕೂ ಶತಮಾನದ ಇತಿಹಾಸವಿದೆ. ಹಿರಿಯರಿಂದ ಬಳುವಳಿಯಾಗಿ ಸಿಕ್ಕ ಈ ಹೊಟೇಲ್ (Dakshina Kannada Hotel) ಇದೀಗ ಮೂರನೇ ತಲೆಮಾರಿನವರ ಕೈಯ್ಯಲ್ಲಿದ್ದು ಇಂದಿಗೂ ಅದೇ ಟೇಸ್ಟ್​ನ್ನ ಉಳಿಸಿಕೊಂಡು ಬಂದಿದೆ. ಹಾಗಿದ್ರೆ ಈ ಹೋಟೆಲ್ (Ujire Ajji Hotel) ಎಲ್ಲಿದೆ ಅಂತೀರಾ? ಹೇಳ್ತೀವಿ ನೋಡಿ.


    ಯೆಸ್, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಉಜಿರೆಯಲ್ಲಿದೆ ಶತಮಾನ ಕಂಡ ಈ ಹೋಟೆಲ್. ಅಂದಹಾಗೆ ಇದು ದಕ್ಷಿಣ ಕನ್ನಡ ಜಿಲ್ಲೆಯ ಹಳೆಯ ಹೋಟೆಲ್ ಅಂತಾನೂ ಹೆಸರು ಪಡೆದಿದೆ. ಈ ಹೋಟೆಲ್​ಗೆ ಸುಮಾರು 120 ವರ್ಷಗಳ ಇತಿಹಾಸವಿದೆಯಂತೆ.


    ಧರ್ಮಸ್ಥಳ ಮಂಜುನಾಥನ ದರ್ಶನದ ನಂತರ ಇಲ್ಲೇ ಬರ್ತಾರೆ!
    ಹಿಂದೆ ಧರ್ಮಸ್ಥಳ ಮಂಜುನಾಥನನ್ನು ನೋಡಲು ಬಂದವರಿಗೆ ಇದೇ ಹೋಟೆಲ್ ಅಚ್ಚುಮೆಚ್ಚಾಗಿತ್ತು. ಹಾಗಂತ ಈಗಲೂ ಇದ್ರ ವ್ಯಾಲ್ಯೂ ಕಡಿಮೆಯಾಗಿಲ್ಲ. ಊಟದ ಸಮಯಕ್ಕಂತೂ ಮನೆ ಅಡಿಗೆ ರುಚಿ ಉಣ್ಣೋಕೆ ನೂರಾರು ಜನರು ಇಲ್ಲಿಗೆ ಬರುತ್ತಾರೆ. ಅಲ್ಲದೇ, ಕೇವಲ 35 ರೂ.ಗೆ ಇಲ್ಲಿ ಬೇಕಾದಷ್ಟು ಊಟ ಸಿಗೋದು ಸಹ ಜನರ ಆಕರ್ಷಣೆ ಹೆಚ್ಚಿಸಿದೆ.


    ಇದನ್ನೂ ಓದಿ: Mangaluru Parashuram: ಇವರ ಜೀವನವೇ ಸ್ಪೂರ್ತಿ! ಕಷ್ಟಕ್ಕೆ ಹೆದರದ ಛಲದಂಕಮಲ್ಲ ಸ್ವಿಗ್ಗಿ ಡೆಲಿವರಿ ಬಾಯ್ ಮಂಗಳೂರಿನ ಪರಶುರಾಮ!




    ಲಲಿತಮ್ಮ ಸ್ಥಾಪಿಸಿದ ಹೋಟೆಲ್!
    ಈ ಹೋಟೆಲ್​ನ್ನ ಲಲಿತಮ್ಮ ಎಂಬುವವರು ನೂರು ವರ್ಷಗಳ ಹಿಂದೆ ಸ್ಥಾಪಿಸಿದ್ದರು. ಇದೀಗ ಅವರ ಕುಟುಂಬದ ಸದಸ್ಯರು ಮುನ್ನಡೆಸುತ್ತಾ ಬಂದಿದ್ದಾರೆ. ಇಂದಿಗೂ ಇದು ಅಜ್ಜಿಯ ಹೋಟೆಲ್ ಎಂದೇ ಕರೆಸಿಕೊಂಡಿದೆ. ಎಷ್ಟೇ ಹೋಟೆಲ್​ಗಳು ಈ ಭಾಗದಲ್ಲಿ ತಲೆ ಎತ್ತಿದ್ರೂ ಅದ್ಯಾವುದೂ ಈ ಅಜ್ಜಿಯ ಹೋಟೆಲ್​ಗೆ ಸಾಟಿಯೇ ಇಲ್ಲ. ಪ್ರತಿದಿನ ನೂರಾರು ಜನ ಊಟ,ಚಹಾ, ತಿಂಡಿಗಾಗಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ಬಾಳೆಲೆ ಊಟವನ್ನು ಹೆಚ್ಚು ಇಷ್ಟಪಡುವ ಗ್ರಾಹಕರು, ಇಲ್ಲೇ ಮನೆ ರುಚಿ ಸವಿಯುತ್ತಾರೆ.


    ಇದನ್ನೂ ಓದಿ: Dharmasthala: 1,15,000 ಜನರಿಗೆ ಹೊಸ ಜೀವನ ನೀಡಿದ ಮಂಜುನಾಥ! ಇದು ಧರ್ಮಸ್ಥಳ ಮಹಿಮೆ!


    ಒಟ್ಟಿನಲ್ಲಿ ಇಂದಿಗೂ ಹಳೆ ಕಟ್ಟಡ, ಹಳೆಯ ಮೇಜಿನ ಜೊತೆಗೆ ಉತ್ತಮ ಸೇವೆ, ಶುಚಿ ರುಚಿಯಾದ ಆಹಾರ ಈ ಅಜ್ಜಿ ಹೋಟೆಲ್​ನ ಸ್ಪೆಷಲ್ ಆಗಿಯೇ ಉಳಿದಿರುವುದು ವಿಶೇಷ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: