ದಕ್ಷಿಣ ಕನ್ನಡ: ವಿಶಾಲವಾದ ಅಂಗಣ. ಕಲ್ಲಿನಿಂದಲೇ ನಿರ್ಮಾಣವಾದ ದೇಗುಲ. ಇಲ್ಲಿ ಏನೇ ಇದ್ರೂ ಕಲ್ಲಿನಿಂದಲೇ ಕೆತ್ತನೆ. ಕಲ್ಲಿನಿಂದಲೇ ನಿರ್ಮಾಣ. ಹೀಗಾಗಿ ಇದರ ಹೆಸರು ಕೂಡಾ ಕಲ್ಲು ಬಸದಿ (Rock Basadi) ಎಂದೇ ಫೇಮಸ್. ಹಾಗಿದ್ರೆ ಈ ಕಲ್ಲು ಬಸದಿ (Venoor Basadi) ಎಲ್ಲಿದೆ? ಏನಿದರ ಇತಿಹಾಸ ಅನ್ನೋದನ್ನ ಹೇಳ್ತೀವಿ ನೋಡಿ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ ಈ ಬಸದಿಗೆ ಕಲ್ಲು ಬಸದಿ, ಅಥವಾ ದೊಡ್ಡ ಬಸದಿ ಎಂದೇ ಹೆಸರು. ಈ ಬಸದಿ ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಾಣವಾಗಿದ್ದು ಇಲ್ಲಿ ಇಪ್ಪತ್ನಾಲ್ಕು ತೀರ್ಥಂಕರರ ಕಂಚಿನ ವಿಗ್ರಹವೂ ಇದೆ.
ಶಾಂತಿನಾಥರ ಐದು ಅಡಿ ಎತ್ತರದ ಮೂರ್ತಿ
ಈ ಬಸದಿ ಆವರಣ ವಿಶಾಲವಾಗಿರುವುದರಿಂದ ಇದನ್ನ ದೊಡ್ಡ ಬಸದಿ ಅಂತ ಕೂಡ ಕರೀತಾರೆ. ಇಲ್ಲಿ ಶಾಂತಿನಾಥರ ಐದು ಅಡಿ ಎತ್ತರದ ಮೂರ್ತಿ ಇರುವುದು ವಿಶೇಷ.
ಶಾಂತಿನಾಥ ವಿಗ್ರಹದ ಪಕ್ಕದಲ್ಲಿ ಯಕ್ಷಮಹಾಮಾನಸಿ ಹಾಗೂ ಯಶೋ ಗರುಡಗಳಿದ್ದು ಇಲ್ಲಿ ಪದ್ಮಾಸನ ಹಾಕಿ ಕುಳಿತಿರುವ ತೀರ್ಥಂಕರರನ್ನ ಕಾಣಬಹುದಾಗಿದೆ.
ಪದರು ಕಲ್ಲಿನಿಂದ ಬಿಸಿಲೇ ತಟ್ಟಲ್ಲ!
ಇನ್ನು ಇಲ್ಲಿ ಸರಸ್ವತಿ ಹಾಗೂ ಪದ್ಮಾವತಿ ದೇಗುಲಗಳೂ ಇದ್ದು, ಬಸದಿ ಸಂಪೂರ್ಣ ಪದರು ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಬಸದಿಯಲ್ಲಿ ಚಂದ್ರನಾಥ ಹಾಗೂ ಮಹಾವೀರ ವಿಗ್ರಹಗಳಿದ್ದು ಇವುಗಳ ಪೀಠದಲ್ಲಿ ಇಪ್ಪತ್ತ್ನಾಲ್ಕು ತೀರ್ಥಂಕರ ಹೆಸರುಗಳನ್ನ ಸೂಕ್ಷ್ಮವಾಗಿ ಕೆತ್ತಲಾಗಿದೆ. ಹರಿಪೀಠ ಇಲ್ಲಿನ ವಿಶೇಷವಾಗಿದ್ದು, ಸದ್ಯ ಮೂಡುಬಿದಿರೆಯ ಜೈನ ಮಠ ಇದರ ಆಗು ಹೋಗುಗಳನ್ನ ನೋಡಿಕೊಂಡು ಬರುತ್ತಿದೆ. ವೇಣೂರಿನ ಈ ಬಸದಿ ಎಂತಹ ಬಿಸಿಲಲ್ಲೂ ಕೂಡ ಪದರು ಕಲ್ಲು ಬಳಸಿರುವುದರಿಂದ ಸದಾ ತಂಪು ತಂಪಾಗಿರುವುದು ವಿಶೇಷ.
ಇದನ್ನೂ ಓದಿ: Nyaya Basadi: ನ್ಯಾಯ ಬೇಕಂದ್ರೆ ಇಲ್ಲೇ ಬರ್ಬೇಕು! ಮೂಡುಬಿದಿರೆಯಲ್ಲೊಂದು ಅಚ್ಚರಿಯ ತಾಣ
ಚೆಂದದ ವಾತಾವರಣ ಪ್ಲಸ್ ಪಾಯಿಂಟ್!
ಒಟ್ಟಿನಲ್ಲಿ ಕಲ್ಲು ಬಸದಿ ಅಂತಲೇ ಫೇಮಸ್ ಆಗಿರುವ ಈ ಬಸದಿ ನಿಜಕ್ಕೂ ಬಹಳಷ್ಟು ವಿಶಾಲವಾದ ಜಾಗದಲ್ಲಿ ತಲೆ ಎತ್ತಿ ನಿಂತಿದೆ. ಈ ಬಸದಿಯ ಪ್ರಾಂಗಣವೂ ಆಕರ್ಷಕವಾಗಿದ್ದು, ಸುತ್ತಲೂ ಹಚ್ಚ ಹಸಿರ ಭೂಮಿಯ ನಡುವೆ ಚೆಂದದ ರೂಪು ನೀಡಿದಂತಿದೆ.
ಇದನ್ನೂ ಓದಿ: Dakshina Kannada: ತೆಂಗಿನ ನೀರಿನಲ್ಲಿ ಉರಿದ ಆರತಿ! ಕರಾವಳಿಯ ಪ್ರಮುಖ ದೇಗುಲದಲ್ಲಿ ವಿಸ್ಮಯ
ವೇಣೂರು ಬಸದಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ನೀವು ಕೂಡಾ ವೇಣೂರು ಕಡೆ ಬಂದ್ರೆ ಈ ಕಲ್ಲು ಬಸದಿ ಅಥವಾ ದೊಡ್ಡ ಬಸದಿಯನ್ನ ನೋಡುವುದನ್ನ ಮರೆಯಬೇಡಿ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ