Dakshina Kannada News: ಬಂಟ್ವಾಳದಲ್ಲಿ ಡ್ರೋನ್ ನಿಷೇಧ, ಪುತ್ತೂರಿನಲ್ಲಿ ಸಂಚಾರ ಬದಲಾವಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯೋಗಿ ಆದಿತ್ಯನಾಥ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸ ಹಿನ್ನೆಲೆ ಹಲವು ಬದಲಾವಣೆ ಮಾಡಲಾಗಿದೆ. ಇಲ್ಲಿದೆ ಈ ಕುರಿತು ಸಂಪೂರ್ಣ ವಿವರ.

  • Share this:

ದಕ್ಷಿಣ ಕನ್ನಡ: ರಾಜ್ಯ ವಿಧಾನಸಭೆ ಚುನಾವಣೆಯ (Karnataka Elections 2023) ಕೊನೆಯ ಗಳಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ರಾಷ್ಟ್ರೀಯ ಪಕ್ಷಗಳ ಸ್ಟಾರ್‌ ಪ್ರಚಾರಕರ ಆಗಮನ ಕಂಡು ಬರ್ತಿವೆ. ಮೇ 6ರ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ (CM Yogi Adityanath To Dakshina Kannada)  ಎರಡು ಕಡೆಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾ ಆಗಮಿಸಲಿದ್ದಾರೆ. ಈ ಸಂದರ್ಭ ಜಿಲ್ಲೆಯಲ್ಲಿ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಪುತ್ತೂರು ಹಾಗೂ ಬಂಟ್ವಾಳಕ್ಕೆ ಯೋಗಿ ಆದಿತ್ಯನಾಥ ಅವರು (Uttar Pradesh CM Yogi Adityanath) ಆಗಮಿಸಲಿದ್ದಾರೆ. ಪುತ್ತೂರು (Puttur)  ಹಾಗೂ ಬಂಟ್ವಾಳದ (Bantwal)  ಅಭ್ಯರ್ಥಿಗಳ ಪರವಾಗಿ ಸಭೆ ಹಾಗೂ ರೋಡ್‌ ಶೋನಲ್ಲಿ ಅವರು ಭಾಗವಹಿಸಲಿದ್ದಾರೆ.


ಹೆಲಿಕಾಪ್ಟರ್‌, ಡ್ರೋನ್‌ ನಿಷೇಧ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ರೋಡ್‌ ಶೋ ಬಂಟ್ವಾಳದ ಕೈಕಂಬ-ಬಿ.ಸಿ. ರೋಡ್‌ ಸಹಿತ ಹಲವೆಡೆ ಡ್ರೋನ್‌ ಹಾಗೂ ಹೆಲಿಕಾಪ್ಟರ್‌ ಹಾರಾಟ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್.‌ ಆದೇಶಿಸಿದ್ದಾರೆ.


ಮಂಡ್ಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಭಾಷಣ


ಈ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್
ಹೀಗಾಗಿ ಮೊಡಂಕಾಪು, ಕೈಕಂಬ, ಬಿ.ಸಿ. ರೋಡ್‌ ಹಾಗೂ ಎಸ್ ವಿಎಸ್‌ ಕಾಲೇಜು ಹೆಲಿಪ್ಯಾಡ್‌ ಸುತ್ತಮುತ್ತ ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆ ತನಕ ಹೆಲಿಕಾಪ್ಟರ್‌ ಹಾಗೂ ಡ್ರೋನ್​ಗಳ ಹಾರಾಟವನ್ನು ನಿಷೇಧಿಸಿ ಆದೇಶಿಸಿಲಾಗಿದೆ.


ಇದನ್ನೂ ಓದಿ: Mangaluru News: ಕೃಷಿ ಮೇಳ ನಡೆದ ಜಾಗದಲ್ಲಿ ಹೊಸ ಹೆಲಿಪ್ಯಾಡ್, ಮಂಗಳೂರಿನಲ್ಲೊಂದು ಯಶಸ್ವಿ ಪ್ರಯೋಗ


ಪುತ್ತೂರಿನಲ್ಲಿ ರಸ್ತೆ ಬದಲಾವಣೆ
ಪುತ್ತೂರಿನಲ್ಲಿ ರೋಡ್‌ ಶೋ ಹಾಗೂ ಕಿಲ್ಲೆ ಮೈದಾನದಲ್ಲಿ ಉತ್ತರ ಪ್ರದೇಶ ಸಿಎಂ ಮತಪ್ರಚಾರ ನಡೆಸುವ ಹಿನ್ನೆಲೆ ಭದ್ರತೆ ಹಿತದೃಷ್ಟಿಯಿಂದ ಬೆಳಿಗ್ಗೆಯಿಂದಲೇ ಸಮಾವೇಶ ನಡೆಯುವ ಕಿಲ್ಲೆ ಮೈದಾನ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಜೊತೆಗೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ.




1. ಮಂಗಳೂರು ಮತ್ತು ಕಡಬ ಕಡೆಯಿಂದ ಸಂಚರಿಸುವ ವಾಹನಗಳು ಸುಳ್ಯ ಮತ್ತು ಸಂಪ್ಯ ಕಡೆ ಸಂಚರಿಸಲು ಲಿನೆಟ್‌ ಜಂಕ್ಷನ್,‌ ಬೊಳುವಾರು ಜಂಕ್ಷನ್‌, ಪಡೀಲ್‌, ಕೊಟೇಚಾ ಹಾಲ್‌, ಸಾಲ್ಮರ, ಪುರುಷರಕಟ್ಟೆ, ಪಂಜಳ, ಪರ್ಪುಂಜ ಮಾರ್ಗವನ್ನು ಬಳಸುವುದು.


ಇದನ್ನೂ ಓದಿ: Water Rationing In Mangaluru: ಮಂಗಳೂರು ನಗರಕ್ಕೆ ನೀರು ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ನಿರ್ಧಾರ


2. ಸುಳ್ಯ ಕಡೆಯಿಂದ ಸಂಚರಿಸುವ ವಾಹನಗಳು ಪರ್ಪುಂಜ ಕ್ರಾಸ್‌, ಪಂಜಳ, ಪುರುಷರ ಕಟ್ಟೆ, ದರ್ಬೆ, ಅರುಣಾ ಥಿಯೇಟರ್‌, ಸಾಲ್ಮರ, ಬೊಳುವಾರು, ಲಿನೆಟ್ ಜಂಕ್ಷನ್‌ ಮಾರ್ಗವಾಗಿ ಸಂಚರಿಸುವುದು.

First published: