• Home
 • »
 • News
 • »
 • mangaluru
 • »
 • Dharmasthala: ರಾಷ್ಟ್ರೀಯ ಹೆದ್ದಾರಿಯಾಗಲಿವೆ ಧರ್ಮಸ್ಥಳವನ್ನು ಸಂಪರ್ಕಿಸುವ ಈ ರಸ್ತೆಗಳು

Dharmasthala: ರಾಷ್ಟ್ರೀಯ ಹೆದ್ದಾರಿಯಾಗಲಿವೆ ಧರ್ಮಸ್ಥಳವನ್ನು ಸಂಪರ್ಕಿಸುವ ಈ ರಸ್ತೆಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಧರ್ಮಸ್ಥಳ ಕ್ಷೇತ್ರದ ಭಕ್ತರ ಅನುಕೂಲ ಹಾಗೂ ಸ್ಥಳೀಯ ಜನರ ಅಗತ್ಯ ಮನಗಂಡು ಈಗಿರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಉಜಿರೆಯಿಂದ ಧರ್ಮಸ್ಥಳವರೆಗೆ ಚತುಷ್ಪಥ ನಿರ್ಮಾಣವಾಗಲಿದೆ.

 • News18 Kannada
 • Last Updated :
 • Mangalore, India
 • Share this:

  ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿ‌ನಲ್ಲಿ ಹಲವು ಪುಣ್ಯಕ್ಷೇತ್ರಗಳು ಇದ್ದು, ಅದು ಮಾತ್ರವಲ್ಲದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada News) ಹಲವಾರು ಧಾರ್ಮಿಕ ಕೇಂದ್ರಗಳಿವೆ. ರಜೆ ಹಾಗೂ ಬಿಡುವಿನ ಸಮಯದಲ್ಲೆಲ್ಲ ದೇಗುಲಗಳಿಗೆ (Dakshina Kannada Temples) ತೆರಳಬೇಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯೇ ಭಕ್ತರ ಮೊದಲ ಆದ್ಯತೆಯೂ ಆಗಿರುತ್ತದೆ. ಆದರೆ ಕಿರಿದಾದ ರಸ್ತೆಗಳು ಪ್ರಯಾಣಿಕರ ವೇಗವನ್ನು ನಿಯಂತ್ರಿಸುತ್ತಲೇ ಬಂದಿದೆ. ಇದೀಗ ಧರ್ಮಸ್ಥಳ (Dharmasthala) ಸೇರುವ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ರಸ್ತೆಯನ್ನು ಅಭಿವೃದ್ಧಿಪಡಿಸಲು ಸರಕಾರ ಮುಂದಾಗಿದೆ. ಇದು ಸಾರ್ವಜನಿಕರಿಗೆ ಹೆಚ್ಚಿನ‌ ಅನುಕೂಲ ಉಂಟು ಮಾಡಲಿದೆ.


  ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿ
  ಧರ್ಮಸ್ಥಳವನ್ನು ಸಂಪರ್ಕಿಸುವ ಶಿರಾಡಿ ರಸ್ತೆಯ ಮೂಲಕ ಪೆರಿಯಶಾಂತಿ- ಕೊಕ್ಕಡ ಮೂಲಕ ಧರ್ಮಸ್ಥಳವನ್ನು ಸೇರುವ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಲಿದೆ. ಜೊತೆಗೆ ಚಾರ್ಮಾಡಿ ಮಾರ್ಗವಾಗಿ ಬಂದು ಉಜಿರೆಯಿಂದ ಧರ್ಮಸ್ಥಳಕ್ಕೆ ಸಾಗುವ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಲಿದೆ.


  ಇದನ್ನೂ ಓದಿ: Kantara: ಕಾಂತಾರ ಎಫೆಕ್ಟ್! ದೈವಾರಾಧಕರಿಗೆ ಕರ್ನಾಟಕ ಸರ್ಕಾರದಿಂದ ಶುಭಸುದ್ದಿ


  ಇದೀಗ ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿಯನ್ನು ಸಂಪರ್ಕಿಸುವ ಉಜಿರೆಯಿಂದ ಪೆರಿಯಶಾಂತಿವರೆಗಿನ 30 ಕಿ.ಮೀ. ವ್ಯಾಪ್ತಿಯನ್ನು ರಾ.ಹೆ. 73ರ ಸ್ಪರ್‌ ರಸ್ತೆಯಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. ರಸ್ತೆಯನ್ನು ರಾಜ್ಯ ಹೆದ್ದಾರಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.


  ಸ್ಪರ್‌ ಯೋಜನೆಯಡಿ ಮೇಲ್ದರ್ಜೆಗೆ
  ಐತಿಹಾಸಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ, ಒಳದಾರಿಗಳು ಅಥವಾ ಸಮೀಪದ ದಾರಿಗಳನ್ನು ಮೇಲ್ದರ್ಜೆ ಗೇರಿಸಿಕೊಂಡು ಅವುಗಳಿಗೆ ಸಮರ್ಪಕವಾದ ಅನುದಾನ ಒದಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಮಾದರಿಯ ರಸ್ತೆಯಂತೆ ಸುಸಜ್ಜಿತ ವಾಗಿ ನಿರ್ಮಾಣ ಮಾಡುವುದು ಈ ಸ್ಪರ್‌ ಯೋಜನೆಯ ಪ್ರಮುಖ ಉದ್ದೇಶವಾಗಿದೆ.


  ಉಜಿರೆ-ಧರ್ಮಸ್ಥಳ ಚತುಷ್ಪಥಕ್ಕೆ ಬೇಡಿಕೆ
  ಉಜಿರೆಯಿಂದ ಧರ್ಮಸ್ಥಳವರೆಗೆ ಚತುಷ್ಪಥದ ಬೇಡಿಕೆಯಿದ್ದು, ಧರ್ಮಸ್ಥಳ – ನಿಡ್ಲೆ–ಕೊಕ್ಕಡ ಮಾರ್ಗವಾಗಿ ಪೆರಿಯಶಾಂತಿವರೆಗೆ 10 ಮೀಟರ್‌ ಅಗಲದ ರಸ್ತೆ ನಿರ್ಮಾಣ ಸಾಧ್ಯತೆಯಿದೆ. ಪ್ರಸ್ತುತ ಲೋಕೋಪ‌ಯೋಗಿ ಇಲಾಖೆಯ ಅಧೀನದಲ್ಲಿರುವ ಈ ರಸ್ತೆಯು ಧರ್ಮಸ್ಥಳದಿಂದ ಪೆರಿಯಶಾಂತಿವರೆಗಿನ ದುರಸ್ತಿ ಕಾರ್ಯಕ್ಕೆ ಪ್ರಸಕ್ತ ವರ್ಷದಲ್ಲಿ ಅನುದಾನ ದೊರೆತಿದ್ದು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ.


  ಹೀಗಾಗುತ್ತೆ ಬದಲಾವಣೆ ಉಜಿರೆಯಿಂದ ಧರ್ಮಸ್ಥಳ ಚತುಷ್ಪಥ
  ಧರ್ಮಸ್ಥಳ ಕ್ಷೇತ್ರದ ಭಕ್ತರ ಅನುಕೂಲ ಹಾಗೂ ಸ್ಥಳೀಯ ಜನರ ಅಗತ್ಯ ಮನಗಂಡು ಈಗಿರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಉಜಿರೆಯಿಂದ ಧರ್ಮಸ್ಥಳವರೆಗೆ ಚತುಷ್ಪಥ ನಿರ್ಮಾಣವಾಗಲಿದೆ.


  ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದರ್ಶನ ಈ ದಿನದಂದು ನಿರ್ಬಂಧ
  ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಅಕ್ಟೋಬರ್ 25 ರಂದು ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ (Kukke Subrahmanya Temple Darshan) ಮತ್ತು ಧರ್ಮಸ್ಥಳದಲ್ಲಿ (Dharmasthala Temple Darshan) ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಅಕ್ಟೋಬರ್ 26 ರಂದು ಬೆಳಿಗ್ಗೆ 9 ಗಂಟೆ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲು ಅವಕಾಶ ನೀಡಲಾಗಿದೆ. ಈ ಕುರಿತು ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಕ್ಷೇತ್ರಗಳ ಆಡಳಿತ ಮಂಡಳಿಗಳು ಅಧಿಕೃತ ಮಾಹಿತಿ ಬಿಡುಗಡೆ ಮಾಡಿವೆ.


  ಇದನ್ನೂ ಓದಿ: Mangaluru: ಗಿಡವಾಗಿ ಬೆಳೆಯೋ ಪಟಾಕಿ! ಢಂಢಂ ಅಂತ ಬೇಕಾದಷ್ಟು ಸಿಡಿಸಿ!


  ಧರ್ಮಸ್ಥಳದಲ್ಲಿ ರಾತ್ರಿ 7.30 ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅದೇ ರೀತಿ ಸುಬ್ರಹ್ಮಣ್ಯದಲ್ಲಿ ಅಕ್ಟೋಬರ್ 26 ರಂದು ಬೆಳಿಗ್ಗೆ 9 ಗಂಟೆ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ದೇಗುಲಗಳ ಆಡಳಿತ ಮಂಡಳಿಗಳು ಮಾಹಿತಿ ನೀಡಿವೆ.


  ಕಾಕತಾಳೀಯವೆಂಬಂತೆ ದೀಪಾವಳಿಯಂದೇ ಸೂರ್ಯಗ್ರಹಣ
  ಈ ವರ್ಷದ ಕೊನೆಯ ಸೂರ್ಯಗ್ರಹಣವು 25 ಅಕ್ಟೋಬರ್ 2022 ರಂದು ಸಂಭವಿಸಲಿದೆ. 27 ವರ್ಷಗಳ ನಂತರ ಕಾಕತಾಳೀಯವೆಂಬಂತೆ ದೀಪಾವಳಿಯಂದೇ ಸೂರ್ಯಗ್ರಹಣ ಸಂಭವಿಸಲಿದೆ.

  Published by:ಗುರುಗಣೇಶ ಡಬ್ಗುಳಿ
  First published: