• Home
  • »
  • News
  • »
  • mangaluru
  • »
  • Dakshina Kannada: ಅಡಿಕೆ ಕೃಷಿಕರ ಕಂಗೆಡಿಸುತ್ತಿದೆ ಬಂಟ್ವಾಳದ ಈ ಡ್ಯಾಂ!

Dakshina Kannada: ಅಡಿಕೆ ಕೃಷಿಕರ ಕಂಗೆಡಿಸುತ್ತಿದೆ ಬಂಟ್ವಾಳದ ಈ ಡ್ಯಾಂ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಡ್ಯಾಂ ಭರ್ತಿಯಾದ ಕೂಡಲೇ ಹೆಚ್ಚುವರಿ ನೀರನ್ನು ಡ್ಯಾಂನಿಂದ ಹೊರಬಿಡಲಾಗುತ್ತಿದೆ. ರಭಸವಾಗಿ ಹರಿಯುವ ಈ ನೀರು ನದಿಯ ಪಕ್ಕದಲ್ಲೇ ಇರುವ ಕೃಷಿಭೂಮಿಗಳನ್ನು ಕರಗಿಸುತ್ತಿವೆ.

  • Share this:

    ಬಂಟ್ವಾಳ: ಅದ್ಯಾವುದೋ ಚಂಡಮಾರುತಕ್ಕೆ ಸಿಕ್ಕಂತೆ ನಲುಗಿ ಹೋದ ಕೃಷಿ (Agriculture Land)  ಭೂಮಿ. ನದಿ ಒಡಲಿಗೆ ಸೇರಿ ಹೋಗಿದೆ ನೋಡಿ ತೆಂಗು, ಕಂಗುಗಳು. ಇದೆಲ್ಲವನ್ನ ಕಂಡು ಕಂಡು ಹೈರಾಣಾಗಿ ಹೋಗಿರುವ ರೈತರು. ಹೌದು, ಇದ್ಯಾವುದೋ ಪ್ರಾಕೃತಿಕ ವಿಕೋಪದ ಎಫೆಕ್ಟ್ ಅಂತೂ ಅಲ್ವೇ ಅಲ್ಲ. ಬದಲಿಗೆ ನಗರದ ಮಂದಿಯ ನೀರಿನ ದಾಹ ತಣಿಸಲು ರೈತರು (Dakshina Kannada Farmer's) ಮಾಡಿದ ತ್ಯಾಗಕ್ಕೆ ವ್ಯಥೆಪಡುವ ಕೃಷಿಕರ ಕಥೆ!


    ರಾಜ್ಯದ ಬೃಹತ್ ನಗರ ಪಾಲಿಕೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯೂ ಒಂದು. ಸುಮಾರು 6 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಮಹಾನಗರ ಪಾಲಿಕೆಯ ಬಹುತೇಕ ಮನೆಗಳಿಗೆ ನೀರು ಪೂರೈಕೆಯಾಗುವುದು ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ಇದೇ ಡ್ಯಾಮ್​ನಿಂದ.


    ಮಂಗಳೂರಿಗೆ ನಿರಂತರ ನೀರು ಪೂರೈಕೆ
    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾದಂತೆಲ್ಲಾ ಈ ತುಂಬೆ ಡ್ಯಾಂನ ಎತ್ತರವನ್ನು ಏರಿಸುತ್ತಲೇ ಬರಲಾಗಿದೆ. ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಿಸಲಾಗಿರುವ ಈ ವೆಂಟೆಡ್ ಡ್ಯಾಂನಿಂದ ನಿರಂತರವಾಗಿ ಮಂಗಳೂರಿಗೆ ನೀರು ಸರಬರಾಜು ಮಾಡಲಾಗುತ್ತಿದೆ.


    ಕೃಷಿಕರ ತ್ಯಾಗದಿಂದ ಕೃಷಿಕರಿಗೇ ತಲೆನೋವು!
    ಈ ಹಿಂದೆ 7 ಮೀಟರ್ ಎತ್ತರ ಹೊಂದಿದ್ದ ಈ ಡ್ಯಾಂ ಅನ್ನು ಇದೀಗ ಮತ್ತೆ 5 ಮೀಟರ್ ಏರಿಸಲಾಗಿದೆ. ಡ್ಯಾಂನ ಎತ್ತರವನ್ನು ಏರಿಸಿದ ಸಮಯದಲ್ಲಿ ಸುತ್ತಮುತ್ತಲಿನ ಕೃಷಿ ಪ್ರದೇಶಗಳು ಮುಳುಗಡೆಯಾಗಿದ್ದಕ್ಕೆ ಬಾಧಿತ ಕುಟುಂಬಗಳಿಗೆ ಕೊಂಚ ಮಟ್ಟಿನ ಪರಿಹಾರವನ್ನೂ ನೀಡಲಾಗಿತ್ತು. ಆದರೆ ಇದೀಗ ತುಂಬೆ ಡ್ಯಾಂ ಸ್ಥಳೀಯ ಭಾಗದ ಕೃಷಿಕರಿಗೆ ಮಾರಕವಾಗಿ ಪರಿಣಮಿಸಿದೆ. ಡ್ಯಾಂ ಭರ್ತಿಯಾದ ಕೂಡಲೇ ಹೆಚ್ಚುವರಿ ನೀರನ್ನು ಡ್ಯಾಂನಿಂದ ಹೊರಬಿಡಲಾಗುತ್ತಿದೆ. ರಭಸವಾಗಿ ಹರಿಯುವ ಈ ನೀರು ನದಿಯ ಪಕ್ಕದಲ್ಲೇ ಇರುವ ಕೃಷಿಭೂಮಿಗಳನ್ನು ಕರಗಿಸುತ್ತಿದೆ.




    ಕೃಷಿ ಭೂಮಿ ನದಿ ಪಾಲು
    ಹೀಗೆ ಡ್ಯಾಂ ನೀರಿನ ರಭಸಕ್ಕೆ ಸಿಲುಕಿ ಇದುವರೆಗೆ ಡ್ಯಾಂನ ಎರಡೂ ಭಾಗದ ಸುಮಾರು ಏಳು ಎಕರೆಯಷ್ಟು ಕೃಷಿತೋಟ ಸವೆದು ಹೋಗಿದೆ. ಮಳೆಗಾಲದಲ್ಲಿ ಈ ರಭಸ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಕೃಷಿ ಭೂಮಿ ನದಿ ಪಾಲಾಗುತ್ತಿದೆ. ಒಂದು ಕಾಲದಲ್ಲಿ ಮಹಾನಗರದ ಜನರ ನೀರಿನ ದಾಹ ತಣಿಸಲು ಮಾಡಿದ ತ್ಯಾಗವು ರೈತರ ಕಣ್ಣಲ್ಲಿ ನೀರು ತರಿಸುವಂತಿದೆ.


    ಇದನ್ನೂ ಓದಿ: Dakshina Kannada: ಗೋಪಾಲಕೃಷ್ಣ ದೇಗುಲದ ಪ್ರದಕ್ಷಿಣೆ ಹಾಕಿದ ಗರುಡ! ಇದು ದೇಗುಲ-ದೈವಸ್ಥಾನ ಎರಡೂ ಇರುವ ಕ್ಷೇತ್ರ


    ಡ್ಯಾಂನ ಎತ್ತರವನ್ನು ಏರಿಸುವ ಸಂದರ್ಭದಲ್ಲೇ ಎರಡೂ ಕಡೆಯ ಕೃಷಿಭೂಮಿಗೆ ತಡೆಗೋಡೆ ನಿರ್ಮಿಸಿಕೊಡುವ ಭರವಸೆಯನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಲವು ಬಾರಿ ನೀಡಿದ್ದರು. ಭರವಸೆ ನೀಡಿ 4 ವರ್ಷಗಳು ಕಳೆದರೂ ಈವರೆಗೂ ಈ ಭಾಗದ ಕೃಷಿಕರ ಸಮಸ್ಯೆಗೆ ಸ್ಪಂದನೆ ದೊರೆತಿಲ್ಲ. ಈ ವಿಚಾರವನ್ನು ಹಲವು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.


    ಇದನ್ನೂ ಓದಿ: Dakshina Kannada: ಊರಿಗೇ ನೀರು ಹರಿಸಿದ ಆಧುನಿಕ ಭಗೀರಥ!


    ಒಟ್ಟಿನಲ್ಲಿ ರೈತರು ತಾವು ದೊಡ್ಡ ಮನಸ್ಸು ಮಾಡಿ ಜಾಗ ನೀಡಲು ಒಪ್ಪಿದ್ದರಿಂದ ತುಂಬೆ ಡ್ಯಾಂ ನಿರ್ಮಾಣವಾಗಿತ್ತು. ಆದ್ರೆ ಇಂದು ಪದೇ ಪದೇ ರೈತರ ಕೃಷಿ ಭೂಮಿ ನಿರಂತರವಾಗಿ ನದಿ ಪಾಲಾಗುತ್ತಿದ್ರೂ ಯಾರೊಬ್ಬರು ಅವರ ಪರವಾಗಿ ನಿಂತಿಲ್ಲ.

    Published by:ಗುರುಗಣೇಶ ಡಬ್ಗುಳಿ
    First published: