• Home
 • »
 • News
 • »
 • mangaluru
 • »
 • Kalkuda Kallurti Daiva: ಕಲ್ಕುಡ-ಕಲ್ಲುರ್ಟಿ ದೈವವೇ ತನ್ನ ರೋಚಕ ಕಥೆ ಹೇಳಿದೆ ನೋಡಿ

Kalkuda Kallurti Daiva: ಕಲ್ಕುಡ-ಕಲ್ಲುರ್ಟಿ ದೈವವೇ ತನ್ನ ರೋಚಕ ಕಥೆ ಹೇಳಿದೆ ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ತುಳುನಾಡಿನಲ್ಲಿ ಕಲ್ಕುಡ, ಕಲ್ಲುರ್ಟಿ ದೈವಗಳಿಗೆ ವಿಶೇಷ ಸ್ಥಾನವಿದೆ. ಅರಸರಿಂದ ದೌರ್ಜನ್ಯಕ್ಕೆ ಒಳಗಾಗಿ ದೈವತ್ವ ಪಡೆದುಕೊಂಡ ಅವಳಿಗಳಿವರು. ಹಾಗಾದರೆ ಈ ದೈವಗಳ ಕಥೆ ನಿಮಗೆ ಗೊತ್ತೆ? ಇಲ್ಲಿದೆ ನೋಡಿ ರೋಚಕ ಕಥೆ.

 • News18 Kannada
 • Last Updated :
 • Dakshina Kannada, India
 • Share this:

  ದಕ್ಷಿಣ ಕನ್ನಡ: ಕಾಂತಾರ ಸಿನಿಮಾ (Kantara Movie) ಬಂದ್ಮೇಲೆ ವಿಶ್ವದಲ್ಲೇ ಕರಾವಳಿ ದೈವಗಳ (Daivaradhane) ಬಗ್ಗೆ ಕುತೂಹಲ ಹೆಚ್ಚಿದೆ. ಚಿತ್ರದಲ್ಲಿನ ಪಂಜುರ್ಲಿ (Panjurli Daiva), ಗುಳಿಗ ದೈವದ ರೀತಿಯೇ ಇಲ್ಲಿ ಕಲ್ಕುಡ-ಕಲ್ಲುರ್ಟಿ (Kalkuda Kallurti Daiva) ಎನ್ನುವ ಅವಳಿ ದೈವಗಳಿಗೆ ಕೂಡಾ ಪ್ರಾಮುಖ್ಗತೆ ಇದೆ.


  ತುಳುನಾಡಿನಲ್ಲಿ ಕಲ್ಕುಡ, ಕಲ್ಲುರ್ಟಿ ದೈವಗಳಿಗೆ ವಿಶೇಷ ಸ್ಥಾನವಿದೆ. ಅರಸರಿಂದ ದೌರ್ಜನ್ಯಕ್ಕೆ ಒಳಗಾಗಿ ದೈವತ್ವ ಪಡೆದುಕೊಂಡ ಅವಳಿಗಳಿವರು. ಕಾರ್ಕಳ ತಾಲ್ಲೂಕಿನ ಮಾರ್ನಾಡುವಿನ ಶಂಭು ಕಲ್ಕುಡ ಹಾಗೂ ಇರಾವದಿ ಎಂಬ ದಂಪತಿಗಳಿಗೆ ಐದು ಜನ ಮಕ್ಕಳಿರುತ್ತಾರೆ. ಐವರಲ್ಲಿ ಬೀರ ಕಲ್ಕುಡ ಹಾಗೂ ಕಾಳಮ್ಮ ಅವಳಿ ಮಕ್ಕಳು. ಇವರು ತಾಯಿಯ ಗರ್ಭದಲ್ಲಿದ್ದಾಗ್ಲೇ ತಂದೆಗೆ ಬೆಳಗೊಳದ ಅರಸರಿಂದ ದೇವರ ವಿಗ್ರಹ ಮತ್ತು ದೇವಾಲಯ ನಿರ್ಮಿಸಲು ಆದೇಶ ಬರುತ್ತದೆ.


  ಅಪ್ಪನನ್ನು ಹುಡುಕಿ ಬೆಳಗೊಳಕ್ಕೆ ಪಯಣ
  ಸಮಯ ಕಳೆದಂತೆ ಪುಟ್ಟ ಬೀರ ಕಲ್ಕುಡ ಆಟವಾಡುವಾಗ ಬೇರೆ ಮಕ್ಕಳು ನಿನ್ನ ಅಪ್ಪ ಯಾರು ಅಂತ ಛೇಡಿಸುತ್ತಾರಂತೆ. ಇದರಿಂದ ಬೇಸರಗೊಂಡು ತಂದೆಯ ಬಗ್ಗೆ ವಿಚಾರಿಸಿದಾಗ ಆತ ಬೆಳಗೊಳದ ಅರಸರ ಬಳಿ ಕೆಲಸಕ್ಕೆ ಹೋಗಿದ್ದಾರೆಂದು ತಾಯಿ ಹೇಳುತ್ತಾರೆ. ಅಪ್ಪನನ್ನು ಹುಡುಕಿಕೊಂಡು ಬೀರ ಕಲ್ಕುಡ ಬೆಳಗೊಳಕ್ಕೆ ಹೋಗುತ್ತಾರೆ.
  ಮಗನ ಇಚ್ಛೆಯಂತೆ ಅಪ್ಪ ಗುಮ್ಮಟ ಸ್ವಾಮಿಯ ದೇಗುಲದ ಬಳಿ ಮಗನನ್ನು ಕರೆತರುತ್ತಾರೆ.


  ಚಾಕುವಿನಿಂದ ಇರಿದುಕೊಂಡು ಪ್ರಾಣ ಬಿಟ್ಟರು!
  ಅಪ್ಪನ ಕೆಲಸ ನೋಡಿದ ಮಗ ವಿಗ್ರಹ ಸರಿಯಾಗಿ ಕೆತ್ತಿಲ್ಲ ಎಂದುಬಿಡುತ್ತಾನೆ. ಈ ವಿಚಾರ ಅರಸರಿಗೆ ಗೊತ್ತಾದ್ರೆ ನನ್ನನ್ನು ಕೊಲ್ಲುತ್ತಾರೆ ಎನ್ನುವ ಭಯಕ್ಕೆ ಆ ತಂದೆ ತಾನೇ ಚಾಕುವಿನಿಂದ ಇರಿದುಕೊಂಡು ಪ್ರಾಣ ಬಿಡುತ್ತಾರೆ. ನಂತರ ಎಲ್ಲಾ ಕಡೆ ಬೀರ ಕಲ್ಕುಡನ ಕೆಲಸದ ನಿಷ್ಠೆ ಬಗ್ಗೆ ಸುದ್ದಿಯಾಗುತ್ತೆ. ಕಾರ್ಕಳದ ಅರಸ ಬೈರನ ಚೂಡರಿಗೆ ಇದು ಗೊತ್ತಾಗಿ ಬೀರ ಕಲ್ಕುಡನಿಗೆ ದೇವಸ್ಥಾನಗಳು ಹಾಗೂ ದೇವರ ವಿಗ್ರಹಗಳನ್ನು ಕೆತ್ತಲು ಹೇಳುತ್ತಾರೆ. ಅದರಂತೆ ಅದ್ಭುತವಾಗಿ ಕಲ್ಕುಡ ಕೆಲಸವನ್ನು ಮಾಡಿ ಮುಗಿಸುತ್ತಾರೆ.
  ಬೇರೆಲ್ಲೂ ಇಷ್ಟು ಅದ್ಭುತವಾಗಿ ಕೆಲಸ ಮಾಡಬಾರದಂತೆ!
  ಬೀರ ಕಲ್ಕುಡ ಬೇರೆಲ್ಲೂ ಹೀಗೆ ಅದ್ಭುತವಾಗಿ ಕೆಲಸ ಮಾಡಬಾರದು ಎನ್ನುವ ಉದ್ದೇಶದಿಂದ ಆತನ ಬಲಗೈ ಹಾಗೂ ಬಲಗಾಲಿಗೆ ಚಿನ್ನದ ಖಡ್ಗ ತೊಡಿಸಿ, ಎಡಗೈ ಹಾಗೂ ಎಡಗಾಲನ್ನು ಅರಸರು ಕತ್ತರಿಸುತ್ತಾರೆ. ಇದರಿಂದ ಬೇಸರಗೊಂಡ ಬೀರ ಕಲ್ಕುಡ ಕೂಡಲೇ ಅಲ್ಲಿಂದ ಹೊರಡುತ್ತಾರೆ. ಇತ್ತ ಅಣ್ಣನಿಗಾಗಿ ಅಡುಗೆ ಮಾಡಿಕೊಂಡು ತಂಗಿ ಕಾಳಮ್ಮ ಹುಡುಕಿಕೊಂಡು ಬಂದಾಗ, ಬೀರ ಕಲ್ಕುಡನ ಸ್ಥಿತಿ ಕಂಡು ದಂಗಾಗುತ್ತಾಳೆ.


  ಇದನ್ನೂ ಓದಿ: Success Story: ಪುತ್ತೂರಿನಲ್ಲಿ ಹುಟ್ಟಿತು ಸ್ವದೇಶಿ TV ಬ್ರಾಂಡ್! ಟಿವಿ ರಿಪೇರಿ ಮಾಡ್ತಿದ್ದವರು ಕಂಪನಿ ಕಟ್ಟಿದ ಕಥೆ


  ತಿರುಪತಿ ತಿಮ್ಮಪ್ಪನಿಗೆ ಅಹವಾಲು
  ಇದೆಲ್ಲದರಿಂದ ಬೇಸರಗೊಂಡ ಅವಳಿಗಳು ತಿರುಪತಿಗೆ ತೆರಳಿ ತಿಮ್ಮಪ್ಪನ ಬಳಿ ನಡೆದಿದ್ದನ್ನೆಲ್ಲಾ ಹೇಳಿಕೊಳ್ಳುತ್ತಾರೆ. ತಿಮ್ಮಪ್ಪ ಅವರಿಗೆ ಮಾಯವಾಗುವಂತೆ ವರ ಕೊಡುತ್ತಾನೆ. ಅದರಂತೆ ಕಾರ್ಕಳಕ್ಕೆ ಬಂದು ಅಲ್ಲಿದ್ದ ಬಾವಿಗೆ ಅಣ್ಣ-ತಂಗಿ ಬಿದ್ದು ಮಾಯವಾಗಿಬಿಡುತ್ತಾರೆ. ಇದಾದ ನಂತರ ದೈವ ರೂಪದಲ್ಲಿ ಬಂದು ಬೈರನ ಚೂಡಾನ ಅರಮನೆಗೆ ಬೆಂಕಿ ಇಟ್ಟು ನಾಶ ಮಾಡುತ್ತಾರೆ.


  ಇದನ್ನೂ ಓದಿ: Karanika Daiva: ದೈವದ ಮುಂದೆ ಹೂವಿನ ಹರಕೆ, ಕಾರಣಿಕ ದೈವಸ್ಥಾನದ ದರ್ಶನ ಮಾಡಿ


  ಆಗಾಗ ವೈರಲ್ ಆಗುತ್ತಲೇ ಇರುತ್ತೆ!
  ಕಲ್ಕುಡ-ಕಲ್ಲುರ್ಟಿ ದ್ವೇಷದ ಜ್ವಾಲೆ ಕಂಡು ಜನ ಭಯಪಟ್ಟು ಇವರನ್ನು ಪೂಜಿಸುವುದಕ್ಕೆ ಶುರು ಮಾಡುತ್ತಾರೆ. ಇದು ಇಂದಿಗೂ ಮುಂದುವರಿದುಕೊಂಡು ಬಂದಿದೆ. ಮಂಗಳೂರಿನ ಉಪ್ಪಿನಂಗಡಿ ಬಳಿಯ ಪೆರ್ನೆಯ ಐತಾಳ್ ಕುಟುಂಬಸ್ಥರು ಹಲವಾರು ದಶಕಗಳಿಂದ ಈ ಕಲ್ಲುರ್ಟಿ ಹಾಗೂ ಜೊತೆಗೆ ಪಂಜುರ್ಲಿ ದೈವವನ್ನು ಆರಾಧಿಸಿಕೊಂಡು ಬಂದಿದ್ದಾರೆ. ಅದರಂತೆ ಇತ್ತೀಚೆಗೆ ಇಲ್ಲಿ ನಡೆದ ಪಂಜುರ್ಲಿ ಹಾಗೂ ಕಲ್ಲುರ್ಟಿ ಕೋಲದಲ್ಲಿ ಭಕ್ತರು ಭಾಗವಹಿಸಿದ್ದರು.


  ಮಾಹಿತಿ, ವಿಡಿಯೋ ವರದಿ: ವಾಸುದೇವ್. ಎಂ.

  Published by:ಗುರುಗಣೇಶ ಡಬ್ಗುಳಿ
  First published: