ದಕ್ಷಿಣ ಕನ್ನಡ: ಹಸಿರ ಬೆಟ್ಟಗಳ ಸಾಲಿನ ನಡುವೆ ಕರಿ ಬಂಡೆ ಕಲ್ಲುಗಳ ದರ್ಶನ. ಇದ್ರ ಮಧ್ಯೆ ತೊರೆಯಂತೆ (Trekking Places In Dakshina Kannada) ಹರಿದು ಸಾಗುವ ಬೆಳ್ನೊರೆಯ ಜಲಧಾರೆ. ಗುಡ್ಡದಿಂದ ಇಳಿದು ಬರೋ ನೀರ ಬುಗ್ಗೆಗಳಿಗೆ ಇಲ್ಲಿ ಹುಟ್ಟಿಕೊಂಡಿವೆ ಫಾಲ್ಸ್. ಫೋಟೋಗ್ರಫಿ, ಪ್ರವಾಸಕ್ಕೂ ಹೇಳಿಟ್ಟ ಜಾಗವೇ ಈ (Gundyadka Waterfalls) ಗುಂಡ್ಯಡ್ಕ ಫಾಲ್ಸ್.
ಕಡಲನಗರಿಯ ಮಂಗಳೂರಿನ ಮೂಡಬಿದ್ರಿ – ಕೊಡ್ಯಡ್ಕ ಮಾರ್ಗವಾಗಿ ಸಾಗಿದರೆ ಈ ಗುಂಡ್ಯಡ್ಕ ಜಲಪಾತದ ದರ್ಶನವಾಗುತ್ತದೆ. ಮಳೆಗಾಲದಲ್ಲಂತೂ ಇದು ಭೋರ್ಗರೆಯುವ ಜಲಪಾತವಾದರೆ, ಬೇಸಿಗೆಯಲ್ಲಿ ಶಾಂತವಾಗಿ ಹರಿಯೋ ಬ್ಯೂಟಿಫುಲ್ ಫಾಲ್ಸ್ ಆಗಿ ಬದಲಾಗ್ತದೆ. ಅದರಲ್ಲಿ ಇಲ್ಲಿನ ಪ್ರತಿ ಬಂಡೆ ಕಲ್ಲುಗಳು ಶಿಲ್ಪಿಯ ಕೆತ್ತನೆಯಂತಿದ್ದು, ಫೊಟೋಶೂಟ್ಗೆ ಹೇಳಿಟ್ಟ ಜಾಗದಂತಿದೆ. ಅದೆಷ್ಟೋ ಪ್ರವಾಸಿಗರು ಈ ಫಾಲ್ಸ್ ಗೆ ಬರೋದಿದೆ. ಕಂಚಿಬೈಲು ಎಂಬ ಊರಿನಲ್ಲಿ ಈ ಫಾಲ್ಸಿರೋದ್ರಿಂದ ಕಂಚಿಬೈಲ್ ಫಾಲ್ಸ್ ಅಂತಲೂ ಇದನ್ನ ಕರೆಯುತ್ತಾರೆ.
ಇದನ್ನೂ ಓದಿ: Kalkuda Kallurti Daiva: ಕಲ್ಕುಡ-ಕಲ್ಲುರ್ಟಿ ದೈವವೇ ತನ್ನ ರೋಚಕ ಕಥೆ ಹೇಳಿದೆ ನೋಡಿ
ಬರೋದು ಹೇಗೆ?
ಕೊಡ್ಯಡ್ಕ ಪೇಟೆಯಿಂದ ಮೂರು ಮಾರು ಸಾಗಿದರೆ ಗುಂಡ್ಯಡ್ಕ ಫಾಲ್ಸ್ಗೆ ಹೋಗೋ ಸಣ್ಣ ದಾರಿ ಕಾಣ್ಸುತ್ತೆ. ಹಾವಿನಂತಿರೋ ಈ ರೋಡಿನಲ್ಲಿ ಜೀವ ಹಿಡಿದಿಟ್ಟುಕೊಂಡು ಸ್ವಲ್ಪ ದೂರ ಸಾಗಿದರೆ ಈ ಫಾಲ್ಸ್ ತಲುಪಬಹುದು.
ಇದನ್ನೂ ಓದಿ: KT ಚಹಾ ಅಂದ್ರೇನು? ಅದ್ಭುತ ರುಚಿ ಹಿಂದಿನ ಗುಟ್ಟು ಹೀಗಿದೆ ನೋಡಿ
ಈ ಜಲಪಾತದ ದಾರಿ ಹೀಗಿದೆ ನೋಡಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಸಖತ್ ಡೇಂಜರ್ ಇದೆ!
ನಿರ್ಜನ ಪ್ರದೇಶದಲ್ಲಿರೋ ಈ ಫಾಲ್ಸ್ ಸಖತ್ ಡೇಂಜರಸ್ ಕೂಡಾ. ಈ ಫಾಲ್ಸ್ಗೆ ಹೋಗ್ಬೇಕು ಅಂತಿದ್ರೆ ಜೊತೆಯಲ್ಲಿ ಯಾರೂ ಇಲ್ದೇ ಹೋಗೋದು ರಿಸ್ಕಿ ಎನ್ನಿಸಬಹುದು. ಎಲ್ಲೂ ಯಾಮಾರದೆ, ಎಚ್ಚರ ತಪ್ಪದೇ ಹೋದ್ರೆ ಇದು ಒಂದೊಳ್ಳೆ ಸ್ಪಾಟ್ ಅನ್ನೋದರಲ್ಲಿ ಡೌಟಿಲ್ಲ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ