Transgender Dance: ಮಿರಮಿರ ಮಿಂಚಲು ಮಂಗಳಮುಖಿಯರು ತಯಾರು! ನರಕಯಾತನೆಯಿಂದ ಹೊರಬರಲು ಡಾನ್ಸ್!

ಕರಾವಳಿಯಲ್ಲಿನ ಮಂಗಳಮುಖಿಯರು ಗಡಿಗಳನ್ನ ಮೀರಿ ಸಾಧನೆ ಶಿಖರವನ್ನೇರಲು ಹೊರಟಿದ್ದಾರೆ. ಡಾನ್ಸ್ ಲೋಕದಲ್ಲಿ ಮಿರಮಿರ ಮಿಂಚಲು ಮಂಗಳಮುಖಿಯರು ಮುಂದಾಗಿದ್ದಾರೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಮಂಗಳೂರು: ಲೆಫ್ಟ್ ಲೆಗ್ ಆಗೆ ಆಗೆ.. ರೈಟ್ ಲೆಗ್ ಪೀಚೆ ಪೀಚೆ.. ಅಂತಾ ಬಾಲಿವುಡ್ ಹಾಡಿಗೆ ಸೊಂಟ ಬಳುಕಿಸುತ್ತಾ ಡಾನ್ಸ್ ಪ್ಯಾಕ್ಟೀಸ್ ಮಾಡುತ್ತಿದ್ದಾರೆ ಮಂಗಳೂರಿನ (Mangaluru) ಮಂಗಳಮುಖಿಯರು. ಹೀಗೆ ಡಾನ್ಸ್ ಕಲಿಯುತ್ತಾ ಮಂಗಳಮುಖಿಯರೆಂದ್ರೆ ಬರೇ ಸೆಕ್ಸ್ ವರ್ಕ್, ಭಿಕ್ಷಾಟನೆ ಮಾತ್ರವಲ್ಲ ಅವಕಾಶ ಸಿಕ್ರೆ ಡಾನ್ಸ್ ಪೆ ಛಾನ್ಸ್ ಮಾರ್ಲೆ ಅನ್ನುವವರು ಅನ್ನೋದನ್ನ ಸಾಬೀತುಪಡಿಸಲು ಮುಂದಾಗಿದ್ದಾರೆ. ಹೌದು, ಇದು ಮಂಗಳೂರಿನ ಮಂಗಳಮುಖಿಯರ ಸಖತ್ ಸ್ಟೆಪ್ (Transgender Dance) ಹಿಂದಿನ ಇಂಟೆರೆಸ್ಟಿಂಗ್ ಸ್ಟೋರಿ. 

    ಭಿಕ್ಷಾಟನೆಯಿಂದ ಡಾನ್ಸ್ ಲೋಕದೆಡೆಗೆ
    ಹೌದು, ಸಾಮಾನ್ಯವಾಗಿ ಮಂಗಳಮುಖಿಯರೆಂದರೆ ಭಿಕ್ಷಾಟನೆ, ಸೆಕ್ಸ್ ವರ್ಕರ್ ಅನ್ನೋದಾಗಿ ಬಿಂಬಿತರಾದವರು. ಆದರೆ, ಅವರೊಳಗೂ ಒಬ್ಬ ಪ್ರತಿಭೆ ಇರಬಹುದು  ಅನ್ನೋದನ್ನ ಸಮಾಜ ಮರೆತಿದೆ. ಸೂಕ್ತ ವೇದಿಕೆ ಸಿಕ್ಕಾಗಲಷ್ಟೇ ಅವರ ಪ್ರತಿಭೆಯೂ ಹೊರ ಬರಲು ಸಾಧ್ಯ.



    ಕಲಿಕೆಯಲ್ಲಿ ನಿರತ ಮಂಗಳಮುಖಿಯರು
    ಮಂಗಳಮುಖಿಯರಿಗೆ ಬಾಗಿಲು ತೆರೆದ ಸುಸೇನ್
    ಡ್ಯಾನ್ಸ್ ಕಲಿಯಬೇಕೆನ್ನುವ ಕಾತರದಲ್ಲಿದ್ದ ಮಂಗಳಮುಖಿಯರಿಗೆ ವೇದಿಕೆಯನ್ನ ಮಂಗಳೂರಿನ ಕೊರಿಯೋಗ್ರಾಫರ್ ಸುಸೆನ್ ಮಿಸ್ಕಿತ್ ಕಲ್ಪಿಸಿಕೊಟ್ಟಿದ್ಧಾರೆ. ಇದ್ರಿಂದ ಖುಷಿಪಟ್ಟುಕೊಂಡಿರೋ ನಾಲ್ವರು ಮಂಗಳಮುಖಿಯರು ‘‘ಅಪ್ನಾ ಟೈಮ್ ಆಯೇಗಾ‘‘ ಅಂತಾ ಚಿಂದಿ ಉಡಾಯಿಸೋ ಕಾತರದಲ್ಲಿದ್ದಾರೆ.

    ಡ್ಯಾನ್ಸ್​ಗಾಗಿ ದಿನನಿತ್ಯ ಪಯಣ
    ಸದ್ಯ ಪ್ರಿಯಾ, ಸಂಧ್ಯಾ, ಹನಿ ಹಾಗೂ ರೇಖಾ ಎಂಬ ನಾಲ್ವರು ಮಂಗಳಮುಖಿಯರು ಕೊರಿಯಾಗ್ರಾಫರ್ ಸುಸೇನ್ ಮಿಸ್ಕಿತ್ ಅವರ ಬಳಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಭಾರೀ ಹುಮ್ಮಸ್ಸಿನಲ್ಲಿ ತರಬೇತಿ ಪಡೆಯುತ್ತಿರುವ ಇವರು, ಅದಕ್ಕಾಗಿಯೇ ಸುಮಾರು 15 ಕಿಲೋ ದೂರದಿಂದ ಮಂಗಳೂರು ನಗರದಲ್ಲಿರುವ ಸುಸೇನ್ ಮಿಸ್ಕಿತ್ ಅವರ ಡ್ಯಾನ್ಸ್ ಸ್ಟುಡಿಯೋಗೆ ಆಗಮಿಸುತ್ತಾರೆ.

    ನರಕಯಾತನೆಯಿಂದ ಹೊರ ಬರ್ತೀವಿ..!
    ಸೆಕ್ಸ್ ವರ್ಕರ್, ಭಿಕ್ಷಾಟನೆಯಿಂದ ಬೇಸತ್ತಿರುವ ಮಂಗಳಮುಖಿಯರು ಅಲ್ಲಿ ಕಂಡ ನರಕಯಾತನೆಯಿಂದ ಹೊರಬರಲು ಚಡಪಡಿಸುತ್ತಿದ್ದಾರೆ. ಹೀಗಾಗಿ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಪ್ರಾಕ್ಟಿಸ್ ಮಾಡುತ್ತಾ ತಮ್ಮಲ್ಲಿರುವ ಪ್ರತಿಭೆಯನ್ನು ಜಗತ್ತಿನ ಮುಂದಿಡುವ ಕಾತರದ ಜೊತೆಗೆ ಹೊಸ ಲೋಕದತ್ತ ಹೆಜ್ಜೆಯಿರಿಸಿದ್ದಾರೆ. ಹೀಗಾಗಿ ನರಕಯಾತನೆಯಿಂದ ಹೊರ ಬರುವುದಾಗಿ ಮಂಗಳಮುಖಿಯರು ಹೇಳಿಕೊಳ್ಳುತ್ತಿದ್ದಾರೆ.

    ಆರಂಭ ವಿಘ್ನದ ಹೊರತು ಬಿಡದ ಛಲ
    ಸದ್ಯ ಈ ನಾಲ್ವರು ಮಂಗಳಮುಖಿಯರು ಡ್ಯಾನ್ಸ್ ಕಲಿಕೆಗೆ ಮುಂದಾಗಿದ್ದಾರೆ. ಆದ್ರೂ, ಇದು ಮುಂದೆ ಇನ್ನಷ್ಟು ಮಂಗಳಮುಖಿಯರಿಗೆ ಪ್ರೇರಣೆ ಆಗಬಹುದು. ಆರಂಭದಲ್ಲಿ ಇವ್ರಿಗೆ ಡ್ಯಾನ್ಸ್ ಕಲಿಕೆ ಬಯಕೆ ಶುರುವಾದಾಗ ಯಾರೊಬ್ಬರೂ ಕಲಿಸಲು ಮುಂದಾಗಿರಲಿಲ್ಲ. ಬಳಿಕ ಸುಸೇನ್ ಮಿಸ್ಕಿತ್ ಪರಿಚಯವಾಗಿದ್ದು, ಸದ್ಯ ಅವರೇ ಇವ್ರ ಟ್ರೈನರ್ ಆಗಿದ್ದಾರೆ.

    ಇದನ್ನೂ ಓದಿ: Gadi Mari: ಈ ದೇವಿಗೆ ರಸ್ತೆಬದಿಯೇ ಗತಿ! ಊರಿಂದೂರಿಗೆ ಕಸ ಸಾಗಿಸುವ ದೇವರು!

    ಸುಸೇನ್ ಅನ್ನೋ ಸಾಧಕಿ ಕೊರಿಯೋಗ್ರಾಫರ್
    ಇನ್ನು ಸುಸೇನ್ ಮಿಸ್ಕಿತ್ ದಕ್ಷಿಣ ಕನ್ನಡ ಜಿಲ್ಲೆ ಮಟ್ಟಿಗೆ ಏರಿಯಲ್ ಡ್ಯಾನ್ಸಿಂಗ್ ಸರ್ಟಿಫಿಕೇಟ್ ಪಡೆದ ಮೊದಲ ಡ್ಯಾನ್ಸರ್ ಅನ್ನೋ ಹೆಗ್ಗಳಿಕೆ ಪಡೆದಿದ್ದಾರೆ. ಜೊತೆಗೆ ಮಂಗಳಮುಖಿಯರನ್ನೂ ಇತರರಂತೆ ಪರಿಗಣಿಸಿ ಮುಕ್ತ ಮನಸ್ಸಿನಿಂದ ಡ್ಯಾನ್ಸ್ ಹೇಳಿಕೊಡುತ್ತಿದ್ದಾರೆ.

    ಇದನ್ನೂ ಓದಿ: Uttara Kannada: ಉತ್ತರ ಕನ್ನಡಕ್ಕೆ ಸದ್ದಿಲ್ದೇ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ!

    ಮಂಗಳಮುಖಿಯರ ಸಾಧನೆ
    ಕರಾವಳಿ ಮಟ್ಟಿಗೆ ಮಂಗಳಮುಖಿಯರು ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದು ಹೊಸತಲ್ಲ. ಈಗಾಗಲೇ ನಟಿ, ಆರ್​ಜೆಗಳಾಗಿ ಗುರುತಿಸಿಕೊಂಡವರಿದ್ದಾರೆ. ಆದ್ರೆ ಮೊದಲ ಬಾರಿ ಎನ್ನುವಂತೆ ಡ್ಯಾನ್ಸ್ ಲೋಕದಲ್ಲೂ ಮಿರ ಮಿರ ಮಿಂಚಲು ಮಂಗಳಮುಖಿಯರು ಮುಂದಾಗಿದ್ದು, ಇವರ ಈ ಬದಲಾವಣೆಗೆ ಭೇಷ್ ಅನ್ನಲೇಬೇಕು.

    ವರದಿ: ಇರ್ಷಾದ್ ಕಿನ್ನಿಗೋಳಿ
    Published by:ಗುರುಗಣೇಶ ಡಬ್ಗುಳಿ
    First published: