• Home
  • »
  • News
  • »
  • mangaluru
  • »
  • Dakshina Kannada: ಈ ಮನೆಗೆ ಸಾವಿರ ವರ್ಷದ ಹುಟ್ಟುಹಬ್ಬದ ಸಂಭ್ರಮ!

Dakshina Kannada: ಈ ಮನೆಗೆ ಸಾವಿರ ವರ್ಷದ ಹುಟ್ಟುಹಬ್ಬದ ಸಂಭ್ರಮ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಭೂ ಸುಧಾರಣೆ ಕಾಯ್ದೆಯ ಮೊದಲು 4500 ಎಕರೆಯಷ್ಟು ಭೂಮಿಯನ್ನು ಹೊಂದಿದ್ದ ಈ ಮನೆತನ ಆ ಕಾಲದಲ್ಲಿ ಇಡೀ ಊರಿಗೇ ಯಜಮಾನನ ಸ್ಥಾನದಲ್ಲಿತ್ತು. ಊರಿನ ಪ್ರತಿಯೊಬ್ಬರಿಗೂ, ಪ್ರತಿದಿನವೂ ಆಹಾರವನ್ನು ನೀಡುತ್ತಿದ್ದ ಧರ್ಮ ಚಾವಡಿ ಇದಾಗಿತ್ತು.

  • Share this:

    ದಕ್ಷಿಣ ಕನ್ನಡ: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅನ್ನೋ ಮಾತಿದೆ. ಒಂದ್ ಮನೆ ಕಟ್ಟಿದ್ರೆ ಅಬ್ಬಬ್ಬಾ ಅಂದ್ರೆ ಎಷ್ಟ್ ವರ್ಷ ಬರುತ್ತೆ ಅಂತ ಯೋಚ್ಸೋಕೆ ಹೋದ್ರೆ ಅಬ್ಬಬ್ಬಾ ಅಂದ್ರೆ ನೂರು ವರ್ಷ (Old House) ಅನ್ಬಹುದಾ? ಆದ್ರೆ ಇಲ್ಲೊಂದು ಮನೆಯಿದೆ. ಬರೋಬ್ಬರಿ ಸಾವಿರ ವರ್ಷಗಳ ಬರ್ತ್ ಡೇ ಆಚರಿಸೋಕೆ ಹೊರಟಿದೆ ಈ ಮನೆ! ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಗಡಿಭಾಗವಾದ ಕೇರಳದ (Kerala) ಬಾಕ್ರಬೈಲ್ನಲ್ಲಿರೋ ಈ ಮನೆ ನಮ್ಮನ್ನ ಒಂದಲ್ಲ ಎರಡಲ್ಲ, 987 ವರ್ಷಗಳ ಹಿಂದೆ ಸರ್..ಅಂತ ಎಳೆದೊಯ್ಯುತ್ತೆ.


    ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಬ್ರಾಕ್ರಬೈಲ್ ಪ್ರದೇಶದಲ್ಲಿ ಬರುವ ಈ ಮನೆ ಬ್ರಾಕ್ರಬೈಲ್ ಚಾವಡಿ ಎಂದೇ ಗುರುತಿಸಲ್ಪಟ್ಟಿದೆ. ಮನೆಯಲ್ಲಿರುವ ಉಲ್ಲೇಖದ ಪ್ರಕಾರ ಈ ಮನೆಗೆ ಸುಮಾರು 987 ವರ್ಷಗಳು ಕಳೆದಿದೆ. ಬಾಕ್ರಬೈಲು ದೇಯ್ಯಮ್ಮನ ಮಗ ಮಂಜಣ್ಣ ಆಳ್ವರು ಕಟ್ಟಿದ ಮನೆ ಎನ್ನುವ ಅಕ್ಷರಗಳನ್ನ ಈ ಮನೆಯ ಮುಂದಿನ ಮರದ ಪಕಾಸಿನಲ್ಲಿ ಕೆತ್ತಲಾಗಿದೆ. ಹಳೆಗನ್ನಡದಲ್ಲಿ ಈ ಮಾಹಿತಿಯನ್ನು ಇಲ್ಲಿ ಬರೆಯಲಾಗಿದೆ.


    ಧರ್ಮಚಾವಡಿಯಾಗಿದ್ದ ಮನೆ
    ಆ ಕಾಲದಲ್ಲಿ ಧರ್ಮ ಚಾವಡಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಮನೆಯಲ್ಲಿ 7 ಕುಟುಂಬಗಳು ವಾಸಿಸುತ್ತಿದ್ದವು. ಸುಮಾರು 100 ಕ್ಕೂ ಹೆಚ್ಚು ಜನರು ಈ ಮನೆಯಲ್ಲಿ ವಾಸವಿದ್ದರಂತೆ. ಮನೆಗೆ ಸಂಬಂಧಪಟ್ಟ ದೈವಗಳ ಆರಾಧನೆಯನ್ನೂ ಮಾಡಿಕೊಂಡು ಬರಲಾಗಿದೆ.


    ಸತ್ಯಪ್ರಮಾಣ ಕಟ್ಟೆಯೂ ಇಲ್ಲಿತ್ತು
    ಭೂ ಸುಧಾರಣೆ ಕಾಯ್ದೆಯ ಮೊದಲು 4500 ಎಕರೆಯಷ್ಟು ಭೂಮಿಯನ್ನು ಹೊಂದಿದ್ದ ಈ ಮನೆತನ ಆ ಕಾಲದಲ್ಲಿ ಇಡೀ ಊರಿಗೇ ಯಜಮಾನನ ಸ್ಥಾನದಲ್ಲಿತ್ತು. ಊರಿನ ಪ್ರತಿಯೊಬ್ಬರಿಗೂ, ಪ್ರತಿದಿನವೂ ಆಹಾರವನ್ನು ನೀಡುತ್ತಿದ್ದ ಧರ್ಮ ಚಾವಡಿ ಇದಾಗಿತ್ತು. ಅಲ್ಲದೆ ಈ ಮನೆಯಲ್ಲಿ ಸತ್ಯಪ್ರಮಾಣ ಕಟ್ಟೆಯೂ ಇದ್ದು, ಊರಿನಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳಾದರೂ, ಗ್ರಾಮದ ಜನರು ಈ ಮನೆಗೆ ಬಂದು ಸತ್ಯಪ್ರಮಾಣ ಮಾಡುವ ಸಂಪ್ರದಾಯವೂ ಇತ್ತು.


    ದೈವಗಳ ನೆಲೆ ಈ ಮನೆ
    ಮಲರಾಯ, ಧೂಮಾವತಿ ಬಂಟ ಮೊದಲಾದ ದೈವಗಳನ್ನು ಆರಾಧಿಸಿಕೊಂಡು ಬರುತ್ತಿರುವ ಈ ಮನೆಯಲ್ಲಿ ಇಂದಿಗೂ ಈ ದೈವಗಳ ಅಸ್ತಿತ್ವವಿದೆ. ಈ ಕಾರಣಕ್ಕಾಗಿ ಪ್ರತೀ ದಿನವೂ ತಪ್ಪದೆ ಈ ಮನೆಯಲ್ಲಿ ದೈವಗಳಿಗೆ ದೀಪವನ್ನು ಹಚ್ಚಲಾಗುತ್ತೆ.




    ಸದ್ಯ ಈ ಮನೆಯ ಮಂದಿ ಬೇರೆ ಬೇರೆ ಊರುಗಳಲ್ಲಿ ನೆಲೆ ನಿಂತಿದ್ದಾರೆ. ಹೀಗಾಗಿ ಈ ಮನೆಯಲ್ಲಿ ಕೆಲವು ವರ್ಷಗಳಿಂದೀಚೆಗೆ ಜನ ವಾಸವಿಲ್ಲ. ಮಣ್ಣು, ಕಲ್ಲು ಮಿಶ್ರಿತ ಗೋಡೆಗಳ ಜೊತೆಗೆ ಅತ್ಯಂತ ಬೆಲೆ ಬಾಳುವ, ಸುಂದರ ಕಲಾಕೃತಿಗಳಿರುವ ಅಪಾರ ಪ್ರಮಾಣದ ಮರಗಳ ಪಕಾಸು, ಕಂಬಗಳು ಮನೆಗೆ ಭೇಟಿ ನೀಡಿದವರನ್ನು ಮಂತ್ರಮುಗ್ದಗೊಳಿಸುತ್ತೆ. ಈ ಮನೆಯನ್ನು ಮತ್ತೆ ಪುನರುಜ್ಜೀವನಗೊಳಿಸುವ ಯೋಜನೆಗೆ ಪ್ಲಾನ್ ಮಾಡಲಾಗಿದ್ದು ಸುಮಾರು 3 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ.


    ಇದನ್ನೂ ಓದಿ: Success Story: ಪುತ್ತೂರಿನಲ್ಲಿ ಹುಟ್ಟಿತು ಸ್ವದೇಶಿ TV ಬ್ರಾಂಡ್! ಟಿವಿ ರಿಪೇರಿ ಮಾಡ್ತಿದ್ದವರು ಕಂಪನಿ ಕಟ್ಟಿದ ಕಥೆ

    ಈ ಮನೆ ಇಡೀ ಊರನ್ನೇ ರಾಜ್ಯಭಾರ ಮಾಡುತ್ತಿದ್ದ ಕಾಲವನ್ನು ಕಂಡವರೂ ಈ ಗ್ರಾಮದಲ್ಲಿದ್ದಾರೆ. ವಿಷು ಸಂಕ್ರಮಣ, ಯುಗಾದಿ, ಕೃಷ್ಣ ಜನ್ಮಾಷ್ಟಮಿ ಹೀಗೆ ಹಬ್ಬದ ಸಂದರ್ಭದಲ್ಲಿ ಈ ಮನೆಗೆ ಬಂದವರಿಗೆ ದಾನ-ಧರ್ಮಗಳನ್ನೂ ಮಾಡಲಾಗುತ್ತಿತ್ತು. ಊರಿಗೆ ಯಜಮಾನನ ಸ್ಥಾನದಲ್ಲಿದ್ದ, ಈ ಮನೆಗೆ ಇಡೀ ಊರಿನ ಜನ ವಿಧೇಯರಾಗಿದ್ದರು.


    ಇದನ್ನೂ ಓದಿ: Arecanut Farmers: ಅಡಿಕೆ ತೋಟದಲ್ಲಿ ಡ್ರೋನ್ ಸದ್ದು! ಎಲೆಚುಕ್ಕಿ ರೋಗಕ್ಕೆ ಹೊಸ ಪರಿಹಾರ!


    ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗೆ ಸಂಬಂಧಿಸಿದಂತೆ ಅತ್ಯಂತ ಹಳೆ ಕಾಲದ ಮನೆಗಳಲ್ಲಿ ಬಾಕ್ರಬೈಲ್ ಚಾವಡಿಯೂ ಒಂದಾಗಿದ್ದು, ಜಿಲ್ಲೆಯ ಯುವಜನತೆಗೆ ಈ ಮನೆ ನಿಗೂಢವಾಗಿಯೇ ಉಳಿದಿದೆ.

    Published by:ಗುರುಗಣೇಶ ಡಬ್ಗುಳಿ
    First published: