ದಕ್ಷಿಣ ಕನ್ನಡ: ಇಲ್ಲಿ ಯಾವುದೇ ಹಣ್ಣಿನ ಜ್ಯೂಸ್ ಕೇಳಿದ್ರೂ ಅದ್ರಲ್ಲಿ ಕಬ್ಬಿನ ಹಾಲು ಗ್ಯಾರಂಟಿ. ಹಾಗಂತ ಹಣ್ಣಿನ ಜ್ಯೂಸ್ ಕೊಂಡರೆ ಕಬ್ಬಿನ ಜ್ಯೂಸ್ (Sugarcane Juice) ಉಚಿತ ಅಂದ್ಕೋಬೇಡ್ರಿ! ಇದೊಂಥರಾ ಕಬ್ಬಿನ ಹಾಲಿನ ಮಿಲ್ಕ್ ಶೇಕ್ ಇದ್ದಂತೆ. ಸಕ್ಕರೇನೆ ಬಳಸದೇ ಮಾಡೋ ಈ ಜ್ಯೂಸ್ (Juice) ನಿಜಕ್ಕೂ ಸಖತ್ ಟೇಸ್ಟಿ ಕೂಡಾ.
ಬೆಸ್ಟ್ ಎನರ್ಜಿ ಡ್ರಿಂಕ್
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಹೊರವಲಯದ ಉಪ್ಪಿನಂಗಡಿ ರಸ್ತೆಯಲ್ಲಿ ಸಿಗೋ ಈ "ಎನರ್ಜಿ ಡ್ರಿಂಕ್" ಅಂಗಡಿ ಕಾಣಸಿಗುತ್ತೆ. ಇಲ್ಲಿನ ವಿಶೇಷ ಅಂದ್ರೆ ಇಲ್ಲಿ ಯಾವುದೇ ಜ್ಯೂಸ್ ಮಾಡೋದಿದ್ರೂ ಅದಕ್ಕೆ ಸಕ್ಕರೆ ಬಳಸೋದಿಲ್ಲ. ಬದಲಿಗೆ ಕಬ್ಬಿನ ಜ್ಯೂಸ್ ಮಿಕ್ಸ್ ಮಾಡ್ತಾರೆ.
ಕಬ್ಬಿನ ಹಾಲು ಮಿಕ್ಸ್ ಮಾಡಿದ್ರೆ ಏನಾಗುತ್ತೆ?
ಹೀಗೆ ಮಾಡೋದ್ರಿಂದ ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ಅಂಗಡಿ ಮಾಲಿಕ ರಾಮಕೃಷ್ಣ ಭಟ್ಟರು ಆರೆಂಜ್, ಚಿಕ್ಕು, ಮುಸುಂಬಿ ಸೇರಿದಂತೆ ಹಲವು ಹಣ್ಣುಗಳ ಜ್ಯೂಸ್ ಕೊಡೋದಿದ್ರೂ ಅದಕ್ಕೆ ಕಬ್ಬಿನ ಜ್ಯೂಸ್ ಮಿಕ್ಸ್ ಮಾಡಿಯೇ ಕೊಡುವರು. ಹೀಗಾಗಿ ಇದೊಂಥರಾ ಸಖತ್ ಡಿಫರೆಂಟ್ ಟೇಸ್ಟ್ ನೀಡಬಲ್ಲದು.
ಶುಗರ್ ಫ್ರೀ ಜ್ಯೂಸ್
ಇಂತಹ ಐಡಿಯಾವೊಂದನ್ನ ರಾಮಕೃಷ್ಣ ಭಟ್ಟರು ವಿದೇಶಿ ಚಾನೆಲ್ವೊಂದರಿಂದ ಕಂಡುಕೊಂಡಿದ್ದಾರೆ. ಇಲ್ಲಿ ಸಿಗೋ ಜ್ಯೂಸ್ಗೆ ಕೇವಲ 35 ರೂಪಾಯಿಯಷ್ಟೇ. ಹೆಚ್ಚು ತಾಜಾ ಹಣ್ಣನ್ನೇ ಇವರು ಬಳಸೋದ್ರಿಂದ ಒಮ್ಮೆ ಇಲ್ಲಿ ಜ್ಯೂಸ್ ಕುಡಿದವರು ಮತ್ತೊಂದು ಲೋಟ ಹೆಚ್ಚುವರಿ ಜ್ಯೂಸ್ ತಗೊಳ್ಳೋದರಲ್ಲಿ ಡೌಟಿಲ್ಲ.
ಇದನ್ನೂ ಓದಿ: Success Story: ದೃಷ್ಟಿ ಸಮಸ್ಯೆ ಇದ್ರೂ CA ಪರೀಕ್ಷೆಯಲ್ಲಿ ಸಾಧನೆ!
ಕೋವಿಡ್ ಮುಂಚೆ ಶುರುವಾದ ಈ ಶಾಪ್ ಕೋವಿಡ್ನಿಂದಾಗಿ ಕೆಲ ದಿನ ಸ್ಥಗಿತವಾಗಿತ್ತಾದರೂ ಇದೀಗ ಮತ್ತೆ ತೆರೆದಿದೆ. ಬೇಸಿಗೆ ದಿನಗಳಲ್ಲಂತೂ ಸಖತ್ ವಹಿವಾಟು ಕಾಣುವ ಈ ಎನರ್ಜಿ ಡ್ರಿಂಕ್ ಅಂಗಡಿ ರಸ್ತೆಗೆ ತಾಗಿಕೊಂಡೇ ಇದೆ.
ಇದನ್ನೂ ಓದಿ: Nava Guliga Kola: ಒಂದೇ ಸಲಕ್ಕೆ ಒಂಭತ್ತು ದೈವಗಳ ನರ್ತನ! ಅಬ್ಬರಕ್ಕೆ ಮೈ ರೋಮಾಂಚನ!
ಮನೆಯಲ್ಲೂ ಮಾಡಬಹುದು!
ಈ ಎನರ್ಜಿ ಡ್ರಿಂಕ್ ಅನ್ನ ಮನೆಯಲ್ಲೂ ಮಾಡಬಹುದಾಗಿದೆ. ಕಬ್ಬಿನ ಜ್ಯೂಸ್ಗೆ ಕಾಲು ಭಾಗದಷ್ಟು ಹಣ್ಣಿನ ರಸ ಹಾಕಿದರೆ ಸಾಕು. ಹೀಗೆ ರಾಮಕೃಷ್ಣ ಭಟ್ಟರು ಕಂಡು ಹಿಡಿದ ಕಬ್ಬಿನ ಹಾಲು ಮಿಶ್ರಿತ ಹಣ್ಣಿನ ಜ್ಯೂಸ್ ನಿಜಕ್ಕೂ ಎನರ್ಜಿದಾಯಕ ಅಂದ್ರೆ ತಪ್ಪಾಗದು.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ