ದಕ್ಷಿಣ ಕನ್ನಡ: ಬೆಳ್ಳಿ, ಬಂಗಾರ, ಹಳೆಯ ಕಾಲದ ಇಂಕ್ ಪೆನ್, ಮಾಡೆರ್ನ್ ಬಾಲ್ ಪಾಯಿಂಟ್ ಪೆನ್, ಗಾಜಿನಲ್ಲೇ ತಯಾರಿಸಲಾದ ಪೆನ್. ಹೀಗೆ ಇಲ್ಲಿ ಪೆನ್ಗಳ ಲೋಕವೇ ಇದೆ. ಒಂದೊಂದು ಲೇಖನಿಯೂ ನಮ್ಮನ್ನು ಒಂದೊಂದು ಕಾಲಕ್ಕೆ ಕರೆದೊಯ್ಯುತ್ತದೆ. ಈ ರೀತಿ ಮಾಡಲಾದ ಪೆನ್ ಗಳ ಸಂಗ್ರಹ ಬರೋಬ್ಬರಿ ಸಾವಿರಾರು. ಇಂತಹ ವಿಭಿನ್ನ ಹವ್ಯಾಸದ ಮೂಲಕ ಮುಂದಿನ ತಲೆಮಾರಿಗೆ ಪೆನ್ ಗಳ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಮಂಗಳೂರು ಮೂಲದ ಪತ್ರಕರ್ತರೋರ್ವರು ಮಾಡಿದ್ದಾರೆ.
ಪತ್ರಕರ್ತನ ಪೆನ್ ಸಂಗ್ರಹ ಹವ್ಯಾಸ
ದಕ್ಷಿಣ ಕನ್ನಡದ ಮಂಗಳೂರಿನ ಮೂಡುಬಿದಿರೆಯ ಹರೀಶ್ ಆದೂರು ಅವರೇ ಇಂತಹ ಹವ್ಯಾಸ ಬೆಳೆಸಿಕೊಂಡವರು.ಮೂರನೆ ತರಗತಿಯಲ್ಲಿ ಶುರುವಾದ ಪೆನ್ ಸಂಗ್ರಹಿಸುವ ಗೀಳನ್ನ ಮೂವತ್ತರ ಮೇಲೂ ಕಂಟಿನ್ಯೂ ಮಾಡಿರುವ ಹರೀಶ್, ಎಲ್ಲ ಪೆನ್ಗಳನ್ನು ನಾಜೂಕಿನಿಂದ ಕಾಯ್ದಿರಿಸಿದ್ದಾರೆ. ಈ ಎಲ್ಲ ಪೆನ್ಗಳು ಇಂದಿಗೂ ಬರೆಯುತ್ತವೆ ಅನ್ನೋದು ಇನ್ನೊಂದು ವಿಶೇಷ.
ಎಷ್ಟಿವೆ ಗೊತ್ತಾ ಪೆನ್ ಗಳು?
ಹೌದು, ಹೀಗೆ ಸಂಗ್ರಹಿತವಾದ ಪೆನ್ಗಳ ಸಂಖ್ಯೆ 3 ಸಾವಿರಕ್ಕೂ ಹೆಚ್ಚು. ಕೆಲವು ಪೆನ್ ಗಳು ದಶಕಗಳನ್ನು ಕಂಡರೂ, ಹೊಸ ಪೆನ್ನಂತೆ ಕಾಣುತ್ತವೆ. ಒಂದೊಂದು ಶೈಲಿಯ, ಆಯಾಯ ಕಾಲಕ್ಕೆ ತಕ್ಕಂತೆ ಇದ್ದ ಡಿಮ್ಯಾಂಡ್ ಮಾದರಿಯಲ್ಲೇ ಹರೀಶ್ ಆದೂರು ಅವರು ಪೆನ್ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Annapoorneshwari Temple: ಈ ಅನ್ನಪೂರ್ಣೇಶ್ವರಿ ತಾಯಿಗೆ ಅಕ್ಕಿ ಸೇವೆಯೇ ವಿಶೇಷ!
ನಲ್ವತ್ತು ಪೈಸೆ ಪೆನ್
ಹರೀಶ್ ಆದೂರು ಸಂಗ್ರಹಿಸಿ 3ಸಾವಿರಕ್ಕೂ ಅಧಿಕ ಪೆನ್ ಗಳಲ್ಲಿ ಒಂದೊಂದರದ್ದು ಒಂದೊಂದು ಮೌಲ್ಯ. ಕನಿಷ್ಟ ಅಂದ್ರೆ ನಲ್ವತ್ತು ಪೈಸೆ ಪೆನ್ನಿಂದ ಹಿಡಿದು ಏಳೂವರೆ ಸಾವಿರ ರೂಪಾಯಿಗಿಂತ ಹೆಚ್ಚಿನ ಬೆಲೆಯ ಪೆನ್ಗಳಿವೆ ಇವರ ಬಳಿ ಸಂಗ್ರಹಿತವಾಗಿದೆ.
ಇದನ್ನೂ ಓದಿ: Birthday: ಗೋಶಾಲೆಯಲ್ಲಿ ಮಗುವಿನ ಮೊದಲ ಬರ್ತ್ ಡೇ ಆಚರಿಸಿಕೊಂಡ ದಂಪತಿ
ಇತರೆ ಹವ್ಯಾಸ
ಹರೀಶ್ ಆದೂರು ಅವರು ಪೆನ್ ಸಂಗ್ರಹಗಳ ಜೊತೆ ಜೊತೆಗೆ ಕಾಯಿನ್, ಮೊಬೈಲ್, ಗಡಿಯಾರವನ್ನು ಸಂಗ್ರಹಿಸಿಟ್ಟಿದ್ದಾರೆ. ಒಟ್ಟಿನಲ್ಲಿ ಸಾವಿರಗಟ್ಟಲೆ ವೆರೈಟಿ ಪೆನ್ನುಗಳು ಇವರ ಬಳಿಯಿದ್ದು ಇಂದಿಗೂ ಅದರಲ್ಲಿ ಬರೆಯಲು ಸಾಧ್ಯ ಅನ್ನೋದು ವಿಶೇಷ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ