• Home
 • »
 • News
 • »
 • mangaluru
 • »
 • Emotional Story: 360 ಕಿಮೀ, 36 ದಿನ; ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರನಾಡು ಯುವಕನ 'ಭೀಷ್ಮ'ಪಯಣ

Emotional Story: 360 ಕಿಮೀ, 36 ದಿನ; ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರನಾಡು ಯುವಕನ 'ಭೀಷ್ಮ'ಪಯಣ

ಹೃದಯಂಗಮ ವಿಡಿಯೋ ನೋಡಿ

"ಹೃದಯಂಗಮ ವಿಡಿಯೋ ನೋಡಿ"

ಇದು 32 ವರ್ಷದ ಯುವಕ 2 ವರ್ಷದ ಹೋರಿಯ ಜೊತೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದ ಭಾವನಾತ್ಮಕ ಕಥೆ. 360 ಕಿಲೋ ಮೀಟರ್ ದೂರವನ್ನು ಶ್ರೀಯಾಂಶ ಮತ್ತು ಭೀಷ್ಮ 36 ದಿನಗಳಲ್ಲಿ ಸಾಗಿದ ಹೃದಯಂಗಮ ಪಯಣ.

 • News18 Kannada
 • Last Updated :
 • Mangalore, India
 • Share this:

  ಮಂಗಳೂರು: ರಸ್ತೆಬದಿ ನಡಿಗೆ, ಮಧ್ಯೆ ಸಿಗೋ ಮನೆಗಳಲ್ಲೇ ಊಟ, ಹಳ್ಳಿಕಟ್ಟೆ ಮೇಲೆ ನಿದ್ರೆ. ಈ ಯುವಕ ಮುಂದೆ ಮುಂದೆ ನಡೀತಿದ್ರೆ ಹಿಂದೆ ಹಿಂದೆಯೇ ಹೆಜ್ಜೆ ಹಾಕ್ತಿರೋ 2 ವರ್ಷದ ಗಿರ್ ಹೋರಿ! 360 ಕಿಲೋಮೀಟರ್ ದೂರವನ್ನು 36 ದಿನಗಳಲ್ಲಿ ನಡೆದು ಧರ್ಮಸ್ಥಳ ಸೇರಿದ ಗೋಪ್ರೇಮಿ ಯುವಕ ಮತ್ತು ಆತನ ನೆಚ್ಚಿನ ಆಕಳ ಕರು (Cow) ಭೀಷ್ಮನ ಕಥೆಯಿದು! (Emotional Story) ಮನುಷ್ಯರೇ ಪಾದಯಾತ್ರೆ ಮಾಡೋದು ಅಪರೂಪವಾಗಿರೋ ಈ ಟೈಮಲ್ಲಿ 2 ವರ್ಷದ ಹೋರಿಯ ಜೊತೆ ಬೆಂಗಳೂರಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರೋ ಚಿಕ್ಕಮಗಳೂರಿನ ಯುವಕ (Chikkamagluru Youth) ಬೆಂಗಳೂರಿನಿಂದ ಧರ್ಮಸ್ಥಳದವರೆಗೆ (Bengaluru To Dharmasthala) ನಡೆದೇ ಹೋಗಿದ್ದಾರೆ. ಅದೂ ಮಂಜುನಾಥ ಸ್ವಾಮಿಯ ಹರಕೆ ತೀರಿಸೋಕೆ!


  ಈ ರೀತಿ ಗಿರ್ ತಳಿಯ ಹೋರಿಯ ಜೊತೆ ನಡೆಯುತ್ತಾ ಬಂದ ಇವರು 32 ವರ್ಷದ ಶ್ರೀಯಂಸ್ ಜೈನ್ ಅಂತ. ಚಿಕ್ಕಮಗಳೂರಿನ ಹೊರನಾಡಿನ ಶ್ರೀಯಂಸ್ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿ ಉದ್ಯೋಗಿ. ಶ್ರೀಯಂಸ್​ಗೆ ಆಕಳೆಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಲಾಕ್ಡೌನ್ ಸಮಯದಲ್ಲಿ ದೇಸಿ ತಳಿಯ ಗಿರ್ ಹಸುವೊಂದನ್ನು ಮನೆಗೆ ತಂದಿದ್ದರು. ಆ ಹಸುವಿನ ಮಗನೇ ಈ ಭೀಷ್ಮ.


  ಮೊದಲೇ ಆಗಿತ್ತು ಈ ನಿರ್ಧಾರ!
  ಭೀಷ್ಮನ ತಾಯಿ ಇನ್ನೂ ಗರ್ಭಿಣಿಯಾಗಿರುವಾಗಲೇ ಮೊದಲ ಕರುವನ್ನು ಧರ್ಮಸ್ಥಳದ ಮಂಜುನಾಥ ಸನ್ನಿಧಾನದ ಗೋ ಶಾಲೆಗೆ ಅರ್ಪಿಸೋದಾಗಿ ನಿರ್ಧಾರ ಮಾಡಿದ್ದರು. ಅದರಂತೆಯೇ ಇನ್ನೇನು ದಷ್ಟಪುಷ್ಟವಾಗಿ ಬೆಳೆಯುತ್ತಲೇ ಬೆಂಗಳೂರಿನಿಂದ ನಡೆದೇ ಬಂದು ಭೀಷ್ಮನನ್ನು ಧರ್ಮಸ್ಥಳದ ಗೋಶಾಲೆಗೆ ಅರ್ಪಿಸಿದ್ದಾರೆ.


  ವೀರೇಂದ್ರ ಹೆಗಡೆಯವರಿಂದ ಆತ್ಮೀಯ ಸ್ವಾಗತ
  ಧರ್ಮಸ್ಥಳಕ್ಕೆ ಬಂದ ಭೀಷ್ಮನನ್ನು ಸ್ವತಃ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರೇ ಬಾಳೆಹಣ್ಣು ನೀಡಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಕಾಲ್ನಡಿಗೆಯುದ್ದಕ್ಕೂ ಭೀಷ್ಮನ ಹಸಿವು, ತ್ರಾಣ, ದಾಹವನ್ನ ಶ್ರೀಯಂಸ್ ನೀಗಿಸಿದ್ದಾರೆ. ಪಾದಯಾತ್ರೆಯಲ್ಲಿ ಭೀಷ್ಮನ ಕಾಲುಗಳಿಗೆ ಮಸಾಜ್ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ಗೆ ಕರೆದೊಯ್ದು ಊಟ, ರೈತರಿಂದ ಪಡೆದು ಹುಲ್ಲುಗಳನ್ನೂ ಉಣಿಸಿದ್ದಾರೆ. ಧರ್ಮಸ್ಥಳಕ್ಕೆ ಅರ್ಪಿಸುವಾಗ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.


  ಇದನ್ನೂ ಓದಿ:Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ


  ವರ್ಕ್ ಫ್ರಂ ಹೋಮ್ ಮಾಡ್ತಾನೇ ಪಾದಯಾತ್ರೆ
  ಶ್ರೀಯಂಸ್ ಜೈನ್ ಇತ್ತ ಪಾದಯಾತ್ರೆ ಮಾಡ್ತಿದ್ರೂ ಅತ್ತ ಕೆಲಸವನ್ನೂ ಮಾಡ್ಬೇಕಿತ್ತು. ವರ್ಕ್ ಫ್ರಂ ಹೋಮ್ ಮಾಡ್ತಾ ಭೀಷ್ಮನ ಜೊತೆ ಧರ್ಮಸ್ಥಳದವರೆಗೂ ತಡೆದು ಬಂದಿದ್ದಾರೆ. ಬ್ಯಾಗ್​ನಲ್ಲಿ ಒಂದು ಜೊತೆ ಬಟ್ಟೆ, ಫೋನ್ ಮತ್ತು ಲ್ಯಾಪ್​ಟಾಪ್ ಮಾತ್ರ ಇಟ್ಕೊಂಡು ಮುದ್ದಿನ ಕರು ಜೊತೆ ಹೆಜ್ಜೆಹಾಕಿದ್ದಾರೆ. ಇವರು ಪಾದವಿಟ್ಟ ಊರಿನ ಜನರೇ ಊಟ ಉಪಚಾರ ಮಾಡಿದ್ದನ್ನೂ ಶ್ರೀಯಂಸ್ ನೆನೆಸಿಕೊಳ್ತಾರೆ.


  ಇದನ್ನೂ ಓದಿ: Success Story: ಸಾವಿರಾರು ಮಹಿಳೆಯರ ತಿಂಗಳ ರಗಳೆಗೆ ಪರಿಹಾರ! ಸ್ಟಾರ್ಟಪ್ ಮಾಡಿ ಸಕ್ಸಸ್ ಕಂಡ ಗೋಕರ್ಣದ ಯುವತಿ


  ಶ್ರೀಯಂಸ್ ಈಗ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಅವರ ಪ್ರೀತಿಯ ಭೀಷ್ಮ ಹರಕೆ ಪ್ರಕಾರ ಧರ್ಮಸ್ಥಳದ ಗೋಶಾಲೆ ಸೇರಿದೆ. ನಾನೊಂದು ತೀರ, ನೀನೊಂದು ತೀರ ಅಂತ ಭೌತಿಕವಾಗಿ ದೂರದೂರವಾದ್ರೂ ಇಬ್ಬರ ಸಂಬಂಧ ಮಾತ್ರ ಬಲಗೊಂಡಿದೆ. ಶ್ರೀಯಂಸ್ ಕಥೆ ಕೇಳಿದವರ ಎದೆ ಭಾವುಕವಾಗ್ತಿದೆ. ಕಣ್ಣಲ್ಲಿ ಹನಿಗೂಡುತ್ತಿದೆ.

  Published by:ಗುರುಗಣೇಶ ಡಬ್ಗುಳಿ
  First published: