ಮಂಗಳೂರು:ದೊಡ್ಡದಾದ ಮೈದಾನ, ಒಳಗಡೆ ಸಿಂಥೆಟಿಕ್ ಟ್ರ್ಯಾಕ್, ಕುಳಿತುಕೊಳ್ಳೋದಕ್ಕೆ ಅತ್ಯುತ್ತಮ ಆಸನ ವ್ಯವಸ್ಥೆ ಹೌದು, ಇದು ಕರಾವಳಿಯ ಅತೀ ದೊಡ್ಡ ಮೈದಾನ ಅಷ್ಟೇ ಅಲ್ದೇ ಅದೆಷ್ಟೋ ಪ್ರತಿಭೆಗಳಿಗೆ ವೇದಿಕೆಯಾದ ಕ್ರೀಡಾಂಗಣ. ರಾಜ್ಯ ಮಟ್ಟದಿಂದ ಹಿಡಿದು ಪ್ರೊ ಕಬಡ್ಡಿ , ಒಲಂಪಿಕ್ಸ್ವರೆಗೂ ಹೀಗೆ ಅನೇಕಾನೇಕ ಕ್ರೀಡಾಪಟುಗಳಿಗೆ ಆಸರೆಯಾದ ಮೈದಾನವಿದು.
‘ಸ್ವರಾಜ್‘ ಮೈದಾನ
ಮೂಡುಬಿದಿರೆಯಲ್ಲಿರುವ ಸ್ವರಾಜ್ ಮೈದಾನ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿದೆ. ಸುಮಾರು2 28 ಎಕರೆಯಲ್ಲಿ ಹರಡಿಕೊಂಡಿರುವ ಈ ಮೈದಾನವು ಅತ್ಯುತ್ತಮ ಟ್ರ್ಯಾಕ್, ಬೆಳಕಿನ ವ್ಯವಸ್ಥೆ, ಗ್ಯಾಲರಿ ಹಾಗೂ ಕ್ರೀಡಾಪಟುಗಳ ವಿಶ್ರಾಂತಿ ಕೊಠಡಿ ಹೀಗೆ ಎಲ್ಲ ಅಚ್ಚುಕಟ್ಟಾದ ವ್ಯವಸ್ಥೆಯನ್ನ ಹೊಂದಿದೆ.
ಪ್ರೋ ಕಬಡ್ಡಿಯಲ್ಲಿ ಮೆರುಗು
ಈ ಸ್ವರಾಜ್ ಮೈದಾನವು ಅದೆಷ್ಟೋ ಉದಯೋನ್ಮುಖ ಪ್ರತಿಭೆಗಳಿಗೆ ಆಸರೆಯಾದರೆ, ನೂರಾರು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ವೇದಿಕೆಯಾಗಿದೆ. ಪ್ರೊ ಕಬಡ್ಡಿಗೆ ಆಯ್ಕೆಯಾದ ಆಳ್ವಾಸ್ ವಿದ್ಯಾರ್ಥಿಗಳೆಲ್ಲರೂ ಇದೇ ಮೈದಾನದ ಪ್ರತಿಭೆಗಳು. ಹೀಗೆ ವರ್ಷಕ್ಕೆ ನೂರಾರು ಕ್ರೀಡಾಪಟುಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸಲು ಸ್ವರಾಜ್ ಮೈದಾನದ ಉಪಕಾರ ಮರೆಯುವಂತದ್ದಲ್ಲ.
ಒಲಂಪಿಕ್ ನಲ್ಲೂ ಮಿಂಚು
ಅಷ್ಟೇ ಅಲ್ಲ, ಕಳೆದ ಟೋಕಿಯೋ ಒಲಂಪಿಕ್ಸ್ ತಂಡದಲ್ಲಿದ್ದ ಧನಲಕ್ಷ್ಮಿ, ಶುಭಾ ಕೂಡಾ ಇದೇ ಮೈದಾನದಲ್ಲಿ ಪಳಗಿದ್ದ ಆಟಗಾರ್ತಿಯರು ಅನ್ನೋದು ಈ ಮೈದಾನದ ಹಿರಿಮೆ. ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಮೈದಾನಗಳಲ್ಲಿ ಒಂದಾಗಿರುವ ಈ ಮೈದಾನವನ್ನು ಕ್ರೀಡಾಪಟುಗಳ ಚಟುವಟಿಕೆಗೆ ಪೂರಕವಾಗಿ ಬೆಳೆಸಿಕೊಂಡು ಬರಲಾಗಿದೆ.
ಮಿಲಿಟರಿ ಮೈದಾನ
ಒಂದು ಕಾಲದಲ್ಲಿ ಮಿಲಿಟರಿ ಮೈದಾನವಾಗಿದ್ದ ಸ್ವರಾಜ್ ಮೈದಾನ ಇಂದು ಕ್ರೀಡಾ ಇಲಾಖೆ ಅಧೀನದಲ್ಲಿದೆ. ಆಳ್ವಾಸ್ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ತಮ್ಮ ತರಬೇತಿಯನ್ನು ನಡೆಸುತ್ತಾ ಬಂದಿದ್ದಾರೆ.
ಇದನ್ನೂ ಓದಿ: Dakshina Kannada: ಇದಪ್ಪಾ ಡೇರಿಂಗ್ ಅಂದ್ರೆ! ಹಿಂದೆ ಮುಂದೆ ನೋಡದೆ ಬಾವಿಗಿಳಿದು ಚಿರತೆ ರಕ್ಷಿಸಿದ್ರು ಯುವ ವೈದ್ಯೆ!
ಒಟ್ಟಿನಲ್ಲಿ ಮೂಡುಬಿದಿರೆಯ ಸ್ವರಾಜ್ ಮೈದಾನವು ಅದೆಷ್ಟೋ ಯುವ ಪ್ರತಿಭೆಗಳ ಪಾಲಿಗೆ ಮರೆಯಲಾಗದ ವೇದಿಕೆ. ಇಂತಹ ಕ್ರೀಡಾಂಗಣ ಇನ್ನಷ್ಟು ಕ್ರೀಡಾಪಟುಗಳಿಗೆ ಬೆನ್ನೆಲುಬಾಗಿ ನಿಲ್ಲಲಿ, ಭಾರತದ ಕೀರ್ತಿ ಪತಾಕೆ ಹಾರಿಸಲು ನೆರವಾಗಲಿ ಅನ್ನೋದೆ ನಮ್ಮ ಆಶಯ ಕೂಡಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ