Success Story: ದೃಷ್ಟಿ ಸಮಸ್ಯೆ ಇದ್ರೂ CA ಪರೀಕ್ಷೆಯಲ್ಲಿ ಸಾಧನೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಜೀವನ್, ಜಿತೇಶ್ ಹಾಗೂ ಜಯೇಶ್ ಈ ಮೂವರು ತ್ರಿವಳಿಗೆ ಶೇಕಡಾ 90 ರಷ್ಟು ದೃಷ್ಟಿಯ ಸಮಸ್ಯೆ ಇದ್ದು, ಕೇವಲ ಹತ್ತು ಪ್ರತಿಶತ ಮಾತ್ರ ನೋಡಬಲ್ಲರು. ಆದ್ರೆ ಇದ್ಯಾವುದೂ ಈ ಮೂವರು ಸಹೋದರರ ಸಾಧನೆಗೆ ಯಾವ ಅಡ್ಡಿಯನ್ನುಂಟು ಮಾಡಿಲ್ಲ.

  • News18 Kannada
  • 4-MIN READ
  • Last Updated :
  • Dakshina Kannada, India
  • Share this:

    ಮಂಗಳೂರು: ಹೇಳಿ ಕೇಳಿ ಈ ಮೂವರು ನಮ್ಮಂತೆ ಸಾಮಾನ್ಯರಲ್ಲ. ಯಾವುದೇ ಅಕ್ಷರವನ್ನ ಸುಲಭವಾಗಿ ಗುರುತಿಸಬಲ್ಲವರಲ್ಲ, ಓದೋಕೆ, ಬರೆಯೋಕಂತೂ ತುಸು ಕಷ್ಟವೇ. ಆದ್ರೆ ಈ ತ್ರಿವಳಿ ಅಣ್ಣ ತಮ್ಮಂದಿರ (Brothers) ಸಾಧನೆ ಮಾತ್ರ ಅಸಾಮಾನ್ಯದ್ದು. ಹಾಗಿದ್ರೆ ದೃಷ್ಟಿ ಕಾಣದಿದ್ದರೂ ಈ ವಿದ್ಯಾರ್ಥಿಗಳು (Students) ಮಾಡಿದ ಸಾಧನೆ ಏನು ಅಂತೀರಾ? (Success Story) ಕೇಳಿದ್ರೆ ನೀವೆಲ್ಲ ಭೇಷ್ ಅಂತೀರಾ ನೋಡಿ.


    ಹೌದು, ಈ ತ್ರಿವಳಿಗಳು ದಕ್ಷಿಣ ಕನ್ನಡದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾಮರ್ಸ್ ವಿದ್ಯಾರ್ಥಿಗಳು. ಜೀವನ್, ಜಿತೇಶ್ ಹಾಗೂ ಜಯೇಶ್ ಈ ಮೂವರು ತ್ರಿವಳಿಗೆ ಶೇಕಡಾ 90 ರಷ್ಟು ದೃಷ್ಟಿಯ ಸಮಸ್ಯೆ ಇದ್ದು, ಕೇವಲ ಹತ್ತು ಪ್ರತಿಶತ ಮಾತ್ರ ನೋಡಬಲ್ಲರು. ಆದ್ರೆ ಇದ್ಯಾವುದೂ ಈ ಮೂವರು ಸಹೋದರರ ಸಾಧನೆಗೆ ಯಾವ ಅಡ್ಡಿಯನ್ನುಂಟು ಮಾಡಿಲ್ಲ.




    ಸಿಎ ಮೊದಲ ಹಂತದ ಪರೀಕ್ಷೆಯಲ್ಲಿ ಸಿಕ್ತು ಸಕ್ಸಸ್!
    ಯೆಸ್, ಇದೀಗ ಈ ಮೂವರು ಅಣ್ಣ ತಮ್ಮಂದಿರು ಸಿಎ ಮೊದಲ ಹಂತದ ಪರೀಕ್ಷೆಯಲ್ಲಿ ಸಕ್ಸಸ್ ಕಂಡಿದ್ದಾರೆ. ಈ ಮೂಲಕ ಸಿಎ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಲು ತಯಾರಾಗಿದ್ದಾರೆ.


    ಬಡತನದಲ್ಲಿ ಬೆಳಗಿನ ಪ್ರತಿಭೆಗಳು!
    ವಿಶೇಷವೇನೆಂದರೆ ಈ ಮೂರು ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಯಾವುದೇ ರೀತಿಯಲ್ಲಿ ಶುಲ್ಕ ವಿಧಿಸುತ್ತಿಲ್ಲ. ಹಾಸ್ಟೆಲ್​ನಲ್ಲಿ ಜೊತೆಗೇ ಇದ್ದು ಓದುವ ಇವರು ಬೇರೆ ಯಾವುದೇ ಹೆಚ್ಚುವರಿ ಕೋಚಿಂಗ್ ಪಡೆದಿಲ್ಲ. ಮೂಲತಃ ಮಂಗಳೂರಿನ ಸುರತ್ಕಲ್ ನಿವಾಸಿಯಾಗಿರುವ ಇವರು ಬಡ ಕುಟುಂಬದಿಂದ ಬೆಳೆದು ಬಂದವರು.


    ನೋಟ್ಸ್ ಬರೆಯೋದ್ರಲ್ಲೂ ಎತ್ತಿದ ಕೈ!
    ಆದರೆ ಈ ವಿದ್ಯಾರ್ಥಿಗಳು ದೃಷ್ಟಿ ಕಳೆದುಕೊಂಡಿದ್ದರೂ ಕೂಡ ಸಾಮಾನ್ಯರಂತೆ ನೋಟ್ಸ್ ಬರೆಯುವುದು ವಿಶೇಷ. ಎಲ್ಲ ವಿದ್ಯಾರ್ಥಿಗಳಂತೆ ಓದಲು, ಬರೆಯಲು ಅಸಾಧ್ಯವಾದರೂ ಕೂಡಾ ತಮ್ಮದೇ ಶೈಲಿಯಲ್ಲಿ ಬರೆಯುವ, ಓದುವ ಇವರ ನೋಟ್ಸ್​ಗಳು ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿವೆ ಎನ್ನುತ್ತಾರೆ ಶಿಕ್ಷಕರು.


    ಇದನ್ನೂ ಓದಿ: HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!




    ಮೂವರೂ ಕೂಡ ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದು, ಮೂವರೂ ಪಿಯುಸಿಯಲ್ಲಿ ಶೇಕಡಾ 90ಕ್ಕೂ ಹೆಚ್ಚು ಅಂಕ ಪಡೆದವರು. ಈ ವರ್ಷದ ಅಂತ್ಯಕ್ಕೆ ನಡೆಯಲಿರುವ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಗೆ ತಯಾರಾಗುತ್ತಿದ್ದಾರೆ.


    ಇದನ್ನೂ ಓದಿ: Aghanashini Aarti: ಕಾಶಿಯ ಗಂಗಾರತಿಯಂತೆಯೇ ಕುಮಟಾದಲ್ಲಿ ನಡೆಯಿತು ಅಘನಾಶಿನಿ ಆರತಿ!


    ಒಟ್ಟಿನಲ್ಲಿ ಛಲ ಬಿಡದ ಓದು, ಆಳ್ವಾಸ್​ನಂತಹ ಸಂಸ್ಥೆಯ ಪ್ರೋತ್ಸಾಹ ಈ ಹುಡುಗರ ಬದುಕಿಗೆ ದಾರಿದೀಪವಾಗಲಿ. ಸಿಎ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲಿ ಅನ್ನೋ ಹಾರೈಕೆ ನಮ್ಮದು ಕೂಡ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: