ಎಲ್ಲಿ ನೋಡಿದ್ರಲ್ಲಿ ಜೇನುಪೆಟ್ಟಿಗೆ. ಕಣ್ಣು ಹಾಯಿಸಿದಲ್ಲೆಲ್ಲ ಹೀಗೆ ಜೇನು ಪೆಟ್ಟಿಗೆಯನ್ನಿಟ್ಟಿರೋ ಈ ಕರಾವಳಿಯ (Coastal Karnataka) ಯುವಕನೊಬ್ಬ ಜೇನು ಕೃಷಿಯಲ್ಲಿ ಮಹಾನ್ ಸಾಧನೆಯನ್ನೇ ಮಾಡಿದ್ದಾರೆ. ಇವ್ರ ಕಂಪ್ಲೀಟ್ ಕಥೆ ಹೇಳಿದ್ರೆ ಅಬ್ಬಬ್ಬ ಜೇನಿನಿಂದ ಇಷ್ಟೆಲ್ಲ ಸಂಪಾದನೆ ಸಾಧ್ಯನಾ ಅಂತಾ ನೀವೇ ಅಚ್ಚರಿಪಡ್ತೀರ. ಇವರು ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಪುತ್ತೂರಿನ ಇರ್ದೆ ಗ್ರಾಮದ ನಿವಾಸಿ ಮನೋಹರ್. ಸದ್ಯ ಜೇನುಕೃಷಿಯಲ್ಲಿ ಸಕ್ಸಸ್ (Honey Farming Success Story) ಕಂಡು ಊರೆಲ್ಲ ಸಿಹಿಹಂಚುತ್ತಿದ್ದಾರೆ.
ಬಹುಶಃ ಕರಾವಳಿಯಲ್ಲಿ ಈ ಮಟ್ಟಿಗೆ ಜೇನುಕೃಷಿ ಮಾಡಿ ಸಕ್ಸಸ್ ಕಂಡವರು ಕಡಿಮೆ ಎನ್ನಬಹುದು. ಮನೋಹರ್ ಕೂಡಾ ಅಷ್ಟೇ, ರಾತ್ರಿ ಬೆಳಗಾಗೋದರಲ್ಲಿ ಈ ಸಾಧನೆ ಮಾಡಿದವ್ರಲ್ಲ. ಅವಿರತ ಶ್ರಮ, ನಿರಂತರ ತೊಡಗಿಕೊಳ್ಳುವಿಕೆಯೇ ಇವರ ಬೀ ಅಗ್ರಿಕಲ್ಚರ್ ಸಕ್ಸಸ್ ಗುಟ್ಟು.
ಡಬಲ್ ಆಗ್ತಿದೆ ಜೇನು ಪೆಟ್ಟಿಗೆಗಳು
ಆರಂಭದಲ್ಲಿ 2 ಪೆಟ್ಟಿಗೆಗಳನ್ನು ಇರಿಸಿ ಆರಂಭಿಸಿದ ಜೇನು ಸಾಕಾಣಿಕೆ ನಂತರ 100, 500, ಸಾವಿರ ಹೀಗೆ ಜೇನುಪೆಟ್ಟಿಗೆಗಳ ಸಂಖ್ಯೆ ಡಬಲ್ ಆಗ್ತಾ ಹೋಗಿದೆ. ಇದು ಸದ್ಯ ಎಲ್ಲಿಯವರೆಗೆ ಅಂದ್ರೆ ಈಗ ಈ ಗ್ರಾಮದಲ್ಲೆಲ್ಲ ಮನೋಹರ್ ಅಳವಡಿಸಿದ ಜೇನು ಪೆಟ್ಟಿಗೆಗಳೇ ಕಾಣ್ತಿದೆ.
8ನೇ ತರಗತಿಯಿಂದಲೇ ಜೇನು ಕೃಷಿ
ಮೂಲತಃ ಕೃಷಿ ಕುಟುಂಬದಿಂದ ಬಂದ ಮನೋಹರ್ ಎಳವೆಯಿಂದಲೇ ಕೃಷಿಯತ್ತ ಹೆಚ್ಚು ಗಮನಕೊಟ್ಟಿದ್ರು. ಎಂಟನೇ ತರಗತಿಯಲ್ಲಿ ಎರಡು ಜೇನು ಪೆಟ್ಟಿಗೆಗಳನ್ನು ಮನೆಯಲ್ಲಿ ಸಾಕಲು ಪ್ರಾರಂಭಿಸಿದ ಮನೋಹರ್ ಅವರನ್ನು ಜೇನು ನೊಣ ಹಾಗು ಜೇನು ಬಹಳ ಆಕರ್ಷಿಸಿತ್ತಂತೆ. ಜೇನು ಕೃಷಿಯಿಂದ ಉತ್ತಮ ಗಳಿಕೆ ಸಾಧ್ಯ ಎಂದು ಅಂದೇ ಮನಗಂಡಿದ್ದ ಮನೋಹರ್ ಆ ಬಳಿಕ ಹಿಂದೆ ತಿರುಗಿ ನೋಡಿಲ್ಲ. ಮೊದಮೊದಲಿಗೆ ತನ್ನ ಮನೆಯ ಸುತ್ತಮುತ್ತ ಇರುವ ಜಾಗದ ತುಂಬಾ ಜೇನು ಪೆಟ್ಟಿಗೆಗಳನ್ನು ಇಟ್ಟು ಜೇನು ಸಾಕಾಣಿಕೆ ಮಾಡೋಕೆ ಶುರುಮಾಡಿದ್ರು.
ಇದನ್ನೂ ಓದಿ: Dakshina Kannada: 2 ಎಕರೆ ಭೂಮಿಯನ್ನು ಹಕ್ಕಿಗಳಿಗೇ ಮೀಸಲಿಟ್ಟ ಕರಾವಳಿಯ ದಂಪತಿ
3 ಸಾವಿರ ಜೇನು ಪೆಟ್ಟಿಗೆ ಇಟ್ಟ ಉತ್ಸಾಹಿ
ಜೇನು ಕೃಷಿಯ ಮಹತ್ವ ಮನಗಂಡ ಊರವರೂ ಮನೋಹರ್ ಅವರಿಗೆ ಸಹಕಾರ ನೀಡಿದ್ರು. ಸದ್ಯ ಒಂದೊಂದು ತೋಟದಲ್ಲಿ ನೂರಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳನ್ನು ಇಟ್ಟು ಮನೋಹರ್ ಜೇನು ಸಾಕ್ತಿದ್ದಾರೆ. ಕೇವಲ ಅವರ ಊರೊಂದೇ ಅಲ್ಲ, ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 150 ಮಿಕ್ಕಿದ ಕಡೆಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಸಾಕ್ತಿದ್ದಾರೆ. ಈ ರೀತಿ ಸುಮಾರು 3000 ಜೇನು ಪೆಟ್ಟಿಗೆಗಳನ್ನು ಜಿಲ್ಲೆಯ ಹಲವು ಕಡೆಗಳಲ್ಲಿರುವ ಕೃಷಿ ತೋಟಗಳಲ್ಲಿ ಇಟ್ಟಿದ್ದಾರೆ.
ಇದನ್ನೂ ಓದಿ: Success Story: ಬಸಳೆ ಬೆಳೆದು ತಿಂಗಳಿಗೆ 40 ಸಾವಿರ ಆದಾಯ ಗಳಿಸ್ತಿರೋ ಕರಾವಳಿ ಕೃಷಿಕ!
ಜಾಗ ನೀಡಿದ ಮಾಲೀಕರಿಗೆ ಸಂಗ್ರಹವಾದ ಜೇನಿನಲ್ಲಿ ಒಂದು ಪಾಲನ್ನು ಕೊಡುವ ಮನೋಹರ್ ವರ್ಷಕ್ಕೆ ಸುಮಾರು 20 ಟನ್ ಜೇನು ಪಡೆಯುತ್ತಿದ್ದಾರೆ. ಜೇನು ಕೃಷಿಯನ್ನೇ ತನ್ನ ಉದ್ಯೋಗವನ್ನಾಗಿ ರೂಪಿಸಿಕೊಂಡಿರುವ ಇವ್ರು 20ಕ್ಕೂ ಹೆಚ್ಚು ಯುವಕರಿಗೆ ನೇರ ಉದ್ಯೋಗ ನೀಡಿದ್ದಾರೆ. ಅವರ ಈ ಸಾಧನೆಗೆ ಹಲವು ಪ್ರಶಸ್ತಿಗಳೂ ಸಂದಿವೆ. ಒಟ್ಟಾರೆ ಜೇನಿನಿಂದ ಮನೋಹರವಾದ ಮನೋಹರ್ ಜೀವನ ಇನ್ನಷ್ಟು ಯುವಕರಿಗೆ ಸ್ಪೂರ್ತಿಯಾಗ್ಲಿ ಅನ್ನೋದೇ ನಮ್ಮ ಹಾರೈಕೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ