ಪುತ್ತೂರು: ವಾವ್! ಒಂದೊಂದು ಐಸ್ ಕ್ಯಾಂಡಿಯೂ ಬಾಯಲ್ಲಿ ನೀರೂರಿಸುತ್ತೆ. ಇವು ಸಖತ್ ಡಿಫ್ರೆಂಟ್ ಮತ್ತು ಸಖತ್ ಟೇಸ್ಟಿ ಕ್ಯಾಂಡಿ. ಐಸ್ ಕ್ಯಾಂಡಿ (Ice Candy) ತಿನ್ನದವರೂ ಒಂದ್ಸಲ ಇಲ್ಲಿಗೆ ಬಂದ್ರೆ ಬಾಯಿ ಚಪ್ಪರಿಸೋದು ಗ್ಯಾರಂಟಿ. ಯಾಕೆಂದ್ರೆ ಪುತ್ತೂರಿನ ಇವರು ತಯಾರಿಸೋ (Puttur) ಕ್ಯಾಂಡಿಗಳು ಎಷ್ಟು ಟೇಸ್ಟಿನೋ, ಅಷ್ಟೇ ಫ್ರೆಶ್ ಮತ್ತು ನ್ಯಾಚುರಲ್.
ಎಳನೀರು, ಚಿಕ್ಕು, ಕೋಕಮ್, ಲಿಂಬೆ ಅಷ್ಟೇ ಯಾಕೆ ಸೂಜಿಮೆಣಸಿನಿಂದಲೂ ಐಸ್ ಕ್ಯಾಂಡಿ ತಯಾರಿಸಲು ಸಾಧ್ಯ ಅನ್ನೋದನ್ನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಭರತೇಶ್ ತೋರಿಸಿಕೊಟ್ಟಿದ್ದಾರೆ. ಇದರಿಂದಲೇ ಕೊಡಿಪ್ಪಾಡಿಯ ಭರತೇಶ್ ವಿವಿಧ ರೀತಿಯ ಲೋಕಲ್ ಪ್ಲೇವರ್ಸ್ ಐಸ್ ಕ್ಯಾಂಡಿ ಮಾಡುವುದರಲ್ಲಿ ಸಖತ್ ಫೇಮಸ್ ಆಗಿದ್ದಾರೆ.
ಒಟ್ಟು 15 ಲಕ್ಷ ಹೂಡಿಕೆ, ಈಗ ಪ್ರತಿ ವರ್ಷ 15 ಲಕ್ಷ ಆದಾಯ!
ಜೋಶ್ ಐಸ್ ಕ್ಯಾಂಡಿ ಎನ್ನುವ ತಮ್ಮದೇ ಬ್ರ್ಯಾಂಡ್ ಮೂಲಕ ಭರತೇಶ್ ಗುರುತಿಸಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ 15 ಲಕ್ಷ ವಿನಿಯೋಗಿಸಿ ಮನೆಯಲ್ಲೇ ಡಿಫರೆಂಟ್ ಆಗಿ ಐಸ್ ಕ್ಯಾಂಡಿ ತಯಾರಿಸಲು ಶುರು ಮಾಡಿದ್ದರು. ಇದೀಗ ಈ ತಂಪು ತಂಪಾದ ಐಸ್ ಕ್ಯಾಂಡಿ ಪ್ರತೀ ವರ್ಷ ಏನಿಲ್ಲ ಅಂದ್ರೂ 15 ಲಕ್ಷ ಆದಾಯ ತಂದುಕೊಡುತ್ತಿದೆ.
ಫ್ಯಾಕ್ಟರಿ ಮೇಡ್ ಇಂಗ್ರಿಡಿಯನ್ಸ್ ಬಳಸಲ್ಲ
ಜೋಶ್ ನ್ಯಾಚುರಲ್ ಐಸ್ ಕ್ಯಾಂಡಿಗಳು ಹೆಸರಿಗೆ ತಕ್ಕಂತೆ ನ್ಯಾಚುರಲ್ ಆಗಿವೆ. ಇವರು ತಯಾರಿಸುವ ಐಸ್ ಕ್ರೀಮ್ ಯಾವುದೇ ರೀತಿಯ ಫ್ಯಾಕ್ಟರಿ ಮೇಡ್ ಇಂಗ್ರಿಡಿಯನ್ಸ್ ಬಳಸೋದಿಲ್ಲ.
ಇದನ್ನೂ ಓದಿ: Dakshina Kannada: ರಾತ್ರೋ ರಾತ್ರಿ ನಡೆಯಿತು ಪೈಥಾನ್ ಆಪರೇಷನ್! ಒಟ್ಟು ನಾಲ್ಕು ಹೆಬ್ಬಾವುಗಳು ಸ್ವಾಮೀ!
ಎಳನೀರು, ಚಿಕ್ಕು, ಲಿಂಬು, ಸೂಜಿಮೆಣಸಿಗೆ ಡಿಮ್ಯಾಂಡ್
ಅದ್ರಲ್ಲೂ ಭರತೇಶ್ ಅವರ ಜೋಶ್ ಕ್ಯಾಂಡಿಯಲ್ಲಿ ಎಳನೀರು, ಚಿಕ್ಕು, ಲಿಂಬು, ಸೂಜಿಮೆಣಸು ಐಸ್ ಕ್ಯಾಂಡಿಗಳಿಗೆ ಸಖತ್ ಡಿಮ್ಯಾಂಡ್ ಇದೆ. ಮದುವೆ, ಮುಂಜಿ ಹೀಗೆ ಅನೇಕ ಸಭೆ ಸಮಾರಂಭಗಳಿಗೆ ಐಸ್ ಕ್ಯಾಂಡಿ ಕೊಡೋ ಇವರು ‘‘ಐಸ್ ಕ್ಯಾಂಡಿ ಭರತೇಶ್‘‘ ಎಂದೇ ಫೇಮಸ್ ಆಗಿದ್ದಾರೆ.
ಇದನ್ನೂ ಓದಿ: Dakshina Kannada: ಕಡೇಶಿವಾಲಯ ಶಾಲೆಯ ವಿದ್ಯಾರ್ಥಿಗಳು ಕೃಷಿಕರೂ ಹೌದು!
ಒಟ್ಟಿನಲ್ಲಿ ಪುತ್ತೂರಿನ ಭರತೇಶ್ ತಯಾರಿಸುವ ನ್ಯಾಚುರಲ್ ಐಸ್ ಕ್ಯಾಂಡಿಗಳು ಮಾರ್ಕೆಟ್ ನಲ್ಲೂ ಸಖತ್ ಸದ್ದು ಮಾಡ್ತಿವೆ. ತಂಪು ತಂಪಾದ ಐಸ್ ಕ್ಯಾಂಡಿ ಪೂರೈಸೋ ಭರತೇಶ್ ಬದುಕು ಕೂಡಾ ಸದಾ ಕೂಲ್ ಕೂಲ್ ಆಗಿರಲಿ ಅನ್ನೋ ಹಾರೈಕೆಯೂ ನಮ್ಮದು.
ಭರತೇಶ್ ಅವರ ಸಂಪರ್ಕ ಸಂಖ್ಯೆ: 96323 37608
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ